ಮೂಕ ಪ್ರಾಣಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಿ ಶಾಸಕ ಎನ್ ವೈ ಗೋಪಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ
ಹಿರೇಕೆರೆ ಕಾವಲುನಲ್ಲಿ ಗೋಶಾಲೆ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಎನ್ ವೈ ಗೋಪಾಲಕೃಷ್ಣ
ಜಾನುವಾರುಗಳಿಗೆ ರಾಗಿ ಹುಲ್ಲುನ ಜೊತೆಗೆ ಭತ್ತದ ಹುಲ್ಲು ಖರೀದಿ ಮಾಡುವಂತೆ ಶಾಸಕ ಎನ್ ವೈ ಗೋಪಾಲಕೃಷ್ಣ ಚಳ್ಳಕೆರೆ ತಹಶೀಲ್ದಾರ್ ರೆಹಾನ್ ಪಾಷಾ ರವರಿಗೆ ಸೂಚನೆಯನ್ನು ನೀಡಿದರು.
ನಾಯಕನಹಟ್ಟಿ :: ರೈತರು ತಮ್ಮ ಜಾನುವಾರುಗಳನ್ನು ಗೋಶಾಲೆಗೆ ಬಿಟ್ಟರೆ ಪಶು ಇಲಾಖೆ ಅಧಿಕಾರಿಗಳು ಮೇವು ಒದಗಿಸಿ ಘೋಷಣೆ ಮಾಡುತ್ತಾರೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ
ಬುಧವಾರ ಸಮೀಪದ ಹಿರೇಕೆರೆ ಕಾವಲಿನಲ್ಲಿ ಜಿಲ್ಲಾಡಳಿತ ಚಿತ್ರದುರ್ಗ ಹಾಗೂ ತಾಲೂಕು ಆಡಳಿತ ಚಳ್ಳಕೆರೆ ವತಿಯಿಂದ ಹಿರೇಕೆರೆ ಕಾವಲು ಗೋಶಾಲೆ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಬರೆದ ಛಾಯೆ ಆವರಿಸಿದೆ ಆದ್ದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಕಾಡುತ್ತಿದೆ ಸರ್ಕಾರ ರೈತರ ಜಾನುವಾರುಗಳಿಗೆ ಮೇವು ಒದಗಿಸುವಂತಹ ಕಾರ್ಯವನ್ನು ಮಾಡುತ್ತಿದೆ ಆದ್ದರಿಂದ ರೈತರು ತಮ್ಮ ಜಾನುವಾರುಗಳನ್ನು ಗೋಶಾಲ್ ಗೆ ಬಿಡಬೇಕೆಂದು ರೈತರಲ್ಲಿ ಮನವಿ ಮಾಡಿದರು.
ಇದೇ ವೇಳೆ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತನಹಟ್ಟಿ ಗೌಡ್ರು ಮಾತನಾಡಿ ಹಿರೇಕೆರೆ ಕಾವಲು ಗೋಶಾಲೆ ಇಡೀ ಜಿಲ್ಲೆಯಲ್ಲಿ ಹೆಸರುವಾಸಿ ಇಲ್ಲಿ ಸ್ವಚ್ಛತೆ ಮರ ನೀರು ನೆರಳು ಸರ್ಕಾರಿ ಜಾಗ ಸೇರಿದಂತೆ ಸುಮಾರು ರೂ.7000 ಜಾನುವಾರುಗಳು ಇಲ್ಲಿನ ಗೋಶಾಲೆಯನ್ನು ಅವಲಂಬಿಸಿದೆ ಹೋಬಳಿಯ ನೇರಲಗುಂಟೆ, ಮಲ್ಲೂರಹಳ್ಳಿ, ಅಬ್ಬೇನಹಳ್ಳಿ, ಗೌಡಗೆರೆ, ನಲಗೇತನಹಟ್ಟಿ, ಕಡಬನಕಟ್ಟೆ ಮ್ಯಾಸರಹಟ್ಟಿ ನಾಯಕನಹಟ್ಟಿ ಗ್ರಾಮಗಳ ರೈತರ ಜಾನುವಾರುಗಳು ಬರುತ್ತವೆ ಜಾನುವಾರುಗಳಿಗೆ ಕುರಿ ಮೇಕೆಗಳಿಗೆ ರೋಗ ಬಂದಲ್ಲಿ ಇಲ್ಲಿ ಶ್ರೀ ಚೌಡೇಶ್ವರಿ ದೇವಿಯ ಆಶೀರ್ವಾದವನ್ನು ಪಡೆಯುತ್ತವೆ ಎಂದರು.
ಈಸಂದರ್ಭದಲ್ಲಿ ತಾಸಿಲ್ದಾರ್ ರೇಹಾನ್ ಪಾಷಾ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರೇವಣ್ಣ,ಪಟೀಲ್ ಜಿಎಂ ತಿಪ್ಪೇಸ್ವಾಮಿ ಎತ್ತನಹಟ್ಟಿ ಗೌಡ್ರು, ವಕೀಲ ಉಮಾಪತಿ, ಎತ್ತಿನಹಟ್ಟಿ ದೇವರಾಜ್, ತೊರಕೋಲಮ್ಮನಹಳ್ಳಿ ಆರ್ ಬಸವರಾಜ್, ರೇಖಲಗೆರೆ ಅಶೋಕ್, ನಾಯಕನಹಟ್ಟಿ ಓಬಳೇಶ್, ನಲ್ಲನ ದೊಡ್ಡ ಬೋರಯ್ಯ, ನಲಗೇತನಹಟ್ಟಿ ಸದಸ್ಯ ಮಾಜಿ ಅಧ್ಯಕ್ಷ ಪಿ ಎನ್ ಮುತ್ತಯ್ಯ, ನಲಗೇತನಹಟ್ಟಿ ಗ್ರಾಮ ಪಂಚಾಯತಿ ಪಿಡಿಒ ರಾಜಣ್ಣ, ಕಾರ್ಯದರ್ಶಿ ಕೆಂಚಪ್ಪ, ರಾಜಸ್ವ ನಿರಕ್ಷಕ ಚೇತನ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಹರೀಶ್, ಜಗದೀಶ್, ಶರಣಬಸಪ್ಪ, ಜಯರಾಮ್ ,ಮೋಹನ್, ಗ್ರಾಮ ಸಹಾಯಕರಾದ ಚನ್ನಬಸಪ್ಪ ಓಬಣ್ಣ ಹರೀಶ್ ಹೇಮಂತ್ ನಾಯ್ಕ ಕುಮಾರ್ ನಾಗರಾಜ್ ಸೇರಿದಂತೆ ಹೋಬಳಿಯ ರೈತರು ಇದ್ದರು