ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಸದೃಢ ಆರೋಗ್ಯ ದೇಹವುಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ

ಚಿತ್ರದುರ್ಗ:

ಮನುಷ್ಯನಿಗೆ ಊಟ, ನಿದ್ರೆ,ಯೋಗ ಇವುಗಳು ಎಷ್ಟು ಮುಖ್ಯವೋ ದೇಹದ ಸಮತೋಲನ ಕಾಪಾಡುವುದು ಅಷ್ಟೇ ಮುಖ್ಯ ಹಾಗಾಗಿ ಪ್ರತಿಯೊಬ್ಬರೂ ಕ್ರೀಡಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸದೃಢ ದೇಹವನ್ನು ಹೊಂದಿಸಿಕೊಳ್ಳಬೇಕೆಂದು ಆಲಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಎಲ್ ಬಸವರಾಜ್ ಅವರು ತಿಳಿಸಿದರು.

ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ನೆಹರು ಯುವ ಇಲಾಖೆ ಚಿತ್ರದುರ್ಗ ಹಾಗೂ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ ಚಿತ್ರದುರ್ಗ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು ಒಳಾಂಗಣ ಕ್ರೀಡೆ ಬುದ್ದಿ ಹಚ್ಚಿದರೆ ಹೊರಾಂಗಣ ಕ್ರೀಡೆ ಶ್ರಮವನ್ನು ಹೆಚ್ಚಿಸುತ್ತದೆ ಸದೃಢ ದೇಹವನ್ನು ಗಟ್ಟಿಗೊಳಿಸಲು ಸಹಕಾರಿಯವಾಗಲಿದೆ ಎಂದು ಯುವ ಕ್ರೀಡಾಪಟುಗಳಿಗೆ ತಿಳಿಸಿದರು.

ಮಡಿಲು ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ತಾಲೂಕು ಮಟ್ಟದ ಕ್ರೀಡೆಯನ್ನು ಆಯೋಜನೆ ಮಾಡಿರುವುದು ಸಂತಸದ ವಿಚಾರ ಒಂದು ಕ್ರೀಡೆಯನ್ನು ಆಯಚನ ಮಾಡುವುದರ ಮೂಲಕ ಯುವಕರನ್ನು ಒಗ್ಗೂಡಿಸಿ ಕ್ರೀಡೆಯಲ್ಲಿ ಭಾಗವಹಿಸಲು ಉತ್ತೇಜನವನ್ನು ನೀಡುವಂತಹ ಕಾರ್ಯ ಮಡಿಲು ಸಂಸ್ಥೆ ಮಾಡುತ್ತಿದೆ. ಯುವಸಮೋಹ ಕೆಟ್ಟ ಚಟಗಳಿಗೆ ಬಲಿಯಾಗದೆ ಉತ್ತಮ ಆರೋಗ್ಯದ ಕಡೆಗೆ ಗಮನಹರಿಸಬೇಕಾಗಿದೆ ಎಂದರು.

ಕರ್ನಾಟಕ ಭ್ರಷ್ಟಾಚಾರ ಮುಕ್ತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ ಮಡಿಲು ಸಂಸ್ಥೆ ಈಗಾಗಲೇ ಈಗಾಗಲೇ ಜಿಲ್ಲೆಯಾದ್ಯಂತ ಉತ್ತಮ ರೀತಿಯ ಕೆಲಸ ಮಾಡಲಾಗುತ್ತಿದ್ದು ಹಾಲುಘಟ್ಟ ಗ್ರಾಮದಲ್ಲೂ ಸಹ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಮುಂದಿನ ದಿನಗಳಲ್ಲಿ ಉತ್ತಮ ಮಟ್ಟಕ್ಕೆ ಈ ಸಂಸ್ಥೆಯ ಹೆಸರಾಗಬೇಕು ಎನ್ನುವುದು ನಮ್ಮ ಅಭಿಲಾಷೆ ನಮ್ಮದು ಎಂದರು.
ಗ್ರಾಮ ಪಂಚಾಯಿತಿ ವತಿಯಿಂದ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಧಿಕಾರಿಗಳು ನಿರ್ದಿಷ್ಟ ಜಾಗವನ್ನು ನಿಗದಿಮಾಡಿಕೊಟ್ಟರೆ ರಾಜ್ಯ ಮಟ್ಟದಲ್ಲಿ ನಡೆಯುವಂತಹ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತಹ ಯುವಕರಿಗೆ ಸಹಕಾರ ನೀಡಬೇಕಾಗಿ ಮನವಿ ಮಾಡಿದರು.

ನಿವೃತ್ತ ಶಿಕ್ಷಕ ಓಂಕಾರಪ್ಪ ಮಾತನಾಡಿ ಯುವಕರು ದೇಶದ ಮುಂದಿನ ನಾಯಕರು ಯುವ ಸಮುದಾಯ ಸಾಕಾಷ್ಟು ದೇಶಕ್ಕೆ ಕೊಡುಗೆಯನ್ನು ನೀಡಿದೆ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಅಂತರಾಷ್ಟ್ರಮಟ್ಟಗಳಲ್ಲಿ ಪ್ರತಿನಿಧಿಸಿ ದೇಶ ಹಾಗೂ ರಾಜ್ಯಕ್ಕೆ ಉತ್ತಮ ಹೆಸರನ್ನು ತಂದಿದ್ದಾರೆ ಆ ಒಂದು ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಸಹಾಯದ ಅವಶ್ಯಕತೆ ಇದೆ ಮುಂಬರುವಂತಹ ಸರ್ಕಾರಗಳು ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ಪ್ರೋತ್ಸಾಹವನ್ನು ನೀಡಬೇಕಾಗಿದೆ ಎಂದರು.

ಭರಮಸಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಲಿಂಗನಗೌಡ ನೆಗಳೂರು ಮಾತನಾಡಿ ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವ ಸಂತಸ ವಿಚಾರವಾಗಿದೆ ಆದರೆ ಅವರ ಜೀವಕ್ಕೆ ರಕ್ಷಣೆ ಅವಶ್ಯಕತೆ ಇದೆ ಪ್ರತಿಯೊಬ್ಬ ಬೈಕ್ ಸವಾರರು ಹೆಲ್ಮೆಟ್ ಧರಿಸುವುದರ ಜೊತೆಗೆ ತಮ್ಮ ಪ್ರಾಣವನ್ನು ಕಾಪಾಡಿಕೊಳ್ಳಬೇಕೆಂದು ಕ್ರೀಡಾಪಟುಗಳಿಗೆ ತಿಳಿಸಿದರು.

ಈ ಒಂದು ಸಂದರ್ಭದಲ್ಲಿ ದೊಡ್ಡಲ್ಘಟ್ಟ ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷ ಪಿಎನ್ ನಾಗರಾಜ್, ಮಡಿಲು ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ ಸದಸ್ಯರಾದ ಮಹಾಂತೇಶ್, ಅಭಿಷೇಕ್ ,ಪ್ರದೀಪ್ ಕುಮಾರ್, ಆನಂದ್, ದ್ಯಾಮ್ ಕುಮಾರ್, ದರ್ಶನ್ ಗ್ರಾಮದ ಮುಖಂಡರಾದ ಸುಧಾಕರ್, ರಾಜು, ಕುಮಾರ್, ಅನಿಲ್, ಸುನಿಲ್, ಶಶಿಕುಮಾರ್, ಸುಮನ್, ಅಭಿಷೇಕ್, ಭರತ್ ಇತರರು ಇದ್ದರು.

About The Author

Namma Challakere Local News
error: Content is protected !!