ಚಳ್ಳಕೆರೆ
ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ದೊಡ್ಡದಾಗಿ ಕೆರೆ ನಿರ್ಮಿಸುವಂತೆ ರೈತರಿಂದ: ನಾರಾಯಣಸ್ವಾಮಿಯವರಿಗೆ ಮನವಿ
ಚಳ್ಳಕೆರೆ: ಚಳ್ಳಕೆರೆ ತಾಲೂಕನ್ನು ಸರ್ಕಾರವು ಬರಗಾಲ ಪ್ರದೇಶವೆಂದು ಘೋಷಣೆ ಮಾಡಿದ್ದು ಇದ್ದರಿಂದ ಬೇಸಿಗೆ ಪ್ರಾರಂಭವಾಗುತ್ತಿದ್ದು ಜನ ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿದ್ದು ಇದರಿಂದ ಹೆಗ್ಗೆರೆ ಸಮೀಪ ಇರುವ ಸಣ್ಣ ಕೆರೆಯನ್ನು ದೊಡ್ಡ ಕೆರೆಯನ್ನಾಗಿ ನಿರ್ಮಾಣ ಮಾಡಿಕೊಡುವಂತೆ ಹೆಗ್ಗೆರೆ ಗ್ರಾಮದ ರೈತರು ಚಿತ್ರದುರ್ಗದ ಪ್ರವಾಸಿ ಮಂದಿರದ ಹತ್ತಿರ ಸಂಸದ ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಸಂಬಂಧಪಟ್ಟ ಅಧಿಕಾರಿಗಳ ಹತ್ತಿರ ಮಾತುಕತೆ ನಡೆಸುತ್ತೇನೆ. ನಾಲ್ಕೈದು ಗ್ರಾಮಗಳ ರೈತರ ಬೋರ್ ವೆಲ್ ಗಳಿಗೆ ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎಂದರೆ ಆದಷ್ಟು ಬೇಗ ದೊಡ್ಡ ಕೆರೆಯನ್ನಾಗಿ ನಿರ್ಮಿಸಿ ಕೊಡಲು ಅನುಕೂಲ ಮಾಡಿಕೊಡುತ್ತೇವೆ ಎಂದು ರೈತರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಎಸ್ ಆರ್ ಕೆಂಚಪ್ಪ, ಅಪರಂಗಪ್ಪ, ಕೆಂಚಪ್ಪ, ದುರುಗೇಶ್, ಗುರುಸ್ವಾಮಿ, ಹನುಮಂತ, ಲಕ್ಷ್ಮಣ, ರಂಗಪ್ಪ, ಬಾಲಕೃಷ್ಣ, ನವೀನ್ ಅಣ್ಣಪ್ಪ ಇತರರು ಇದ್ದರು.