ಚಳ್ಳಕೆರೆ: ಕನ್ನಡ ನಾಡು ನುಡಿ ಜಲದ ರಕ್ಷಣೆಯ ವಿಚಾರದಲ್ಲಿ ಕರುನಾಡ ವಿಜಯ ಸೇನೆ ಯಾರೊಂದಿಗೂ ರಾಜಿಯಾಗದೆ ಹೋರಾಟಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕರುನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷ ಕೆಟಿ ಶಿವಕುಮಾರ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಅಧ್ಯಕ್ಷರ ಪದಗ್ರಹಣ ಸಂಧರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಚಳ್ಳಕೆರೆ ತಾಲೂಕಿನಲ್ಲಿ ಬರುವ 5ರಂದು ನಗರದ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸಲು ಜಿಲ್ಲಾ ಹಾಗೂ ತಾಲೂಕು ಸಂಘಟನೆಯ ವತಿಯಿಂದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಅಂದು ಆಂಗ್ಲ ನಾಮಫಲಕಗಳನ್ನು ತೆರವು ಗೊಳಿಸಿ ಶೇಕಡ 60ರಷ್ಟು ಕನ್ನಡವನ್ನು ನಾಮಫಲಕಗಳಲ್ಲಿ ಅಳವಡಿಸಬೇಕು ಎಂದು ಮನವಿ ಮಾಡುತ್ತೇವೆ ಎಂದರು.

ನೂತನ ತಾಲೂಕು ಅಧ್ಯಕ್ಷ ಎಸ್.ಎಲ್.ಪಾಂಡು ಮಾತನಾಡಿ ಕರುನಾಡ ವಿಜಯ ಸೇನೆ ತಾಯಿ ಭುವನೇಶ್ವರಿ ಆರ್ಶಿವಾದಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸದಾ ಬದ್ದವಾಗಿರುತ್ತದೆ ಎಂದು ಹೇಳಿದರು.
ಇದೇ ವೇಳೆ ಕರುನಾಡ ವಿಜಯ ಸೇನೆಯ ತಾಲೂಕು ಅಧ್ಯಕ್ಷರಾಗಿ ಪಾಂಡು ಗೌರವಾಧ್ಯಕ್ಷರಾಗಿ ಹೆಚ್ ವೀರೇಶ್ ಉಪಾಧ್ಯಕ್ಷರಾಗಿ ರಾಕೇಶ್ ರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಕಾರ್ಯದರ್ಶಿ ಅಣ್ಣಪ್ಪ ವಿದ್ಯಾರ್ಥಿ ಘಟಕದ ಅಖಿಲೇಶ್ ಸಂತೋಷ್ ಸುರೇಶ್ , ಕರುನಾಡು ವಿಜಯ ಸೇನೆಯ ತಾಲೂಕು ಅಧ್ಯಕ್ಷ ಎಲ್.ಎಸ್.ಪಾಂಡು, ಗೌರವ ಅಧ್ಯಕ್ಷ ಹೆಚ್. ವಿರೇಶ್, ಉಪಾಧ್ಯಕ್ಷ ಎಲ್.ಆರ್.ರಾಕೇಶ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಕಾರ್ಯದರ್ಶಿ ಹೆಚ್.ಕೋಟಿ, ನಗರ ಘಟಕ ಅಧ್ಯಕ್ಷ ವಿಠಲ, ಇತರರು ಇದ್ದರು.

Namma Challakere Local News
error: Content is protected !!