ಚಳ್ಳಕೆರೆ ನ್ಯೂಸ್ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ್ ಸ್ವಾಮಿ ಸನ್ನಿಧಿಗೆ ಬಯಲು ಸೀಮೆ ಭಕ್ತಾಧಿಗಳು ಸುಮಾರು 14 ಬಾರಿ ಕಾಲು ನಡಿಗೆಯ ಮೂಲಕ ಸ್ವಾಮೀ ಕೃಪೆಗೆ ಪಾತ್ರರಾಗಬೇಕು ಎಂಬ ಭಕ್ತ ಪೂರ್ವ ಸಮರ್ಪಣೆಯಿಂದ ಚಳ್ಳಕೆರೆ ತಾಲೂಕಿನ ಡಿ.ಉಪ್ಪಾರಹಟ್ಟಿ ಗ್ರಾಮ ಹಾಗೂ ಸುತ್ತಲಿನ ಹಲವಾರು ಗ್ರಾಮಗಳಿಂದ ಭಕ್ತಾಧಿಗಳು ಮಾರ್ಚ 1 ರಿಂದ ಪಾದಯಾತ್ರೆ ಪ್ರಾರಂಭ ಮಾಡಿದ್ದಾರೆ. ಇನ್ನೂ ದಾರಿಯುದ್ದಕ್ಕೆ ಭಜನೆ ಹಾಗೂ ಗೀತೆಗಳನ್ನು ಹಾಡುವ ಮೂಲಕ ಸ್ವಾಮೀ ಸನ್ನಿದಿಗೆ ಪಾತ್ರರಾಗಿದ್ದಾರೆ ಅದರಂತೆ ಇಂದು ಹರಿಹರಸುತನ ಸೇವಾ ಸಮಿತಿಯಿಂದ ಇಂದು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ಪಾದಯಾತ್ರಿಗಳಿಗೆ ಆಶ್ರಯಿಸಿದ್ದಾರೆ.
ಪಾದಯಾತ್ರೆ ನೃತೃತ್ವವ ಸಹಿಸಿದ ಶ್ರೀ ಗರುವೀರಣ್ಣ ಸ್ವಾಮಿ,ಈ.ಈರಣ್ಣ, ನಿಜಲಿಂಗಪ್ಪ, ಪಿಲ್ಲಹಳ್ಳಿ ಚಿತ್ರಲಿಂಗಪ್ಪ, ಇತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.