ಚಳ್ಳಕೆರೆ : ತಾಲ್ಲೂಕಿನಾದ್ಯಂತ ಅಮೃತ್ ಮಹಲ್ ಕಾವಲುಗಳೂ ಒಳಗೊಂಡAತೆ ನೂರಾರು ಕಾವಲುಗಳು-ಗೋಮಾಳಗಳು ಸಾವಿರಾರು ಎಕರೆ ಸರ್ಕಾರಿ ಭೂಮಿ, ಹುಲ್ಲುಬನ್ನಿಯೂ ಒಳಗೊಂಡAತೆ ಇನ್ನಿತರೆ ಹೆಸರಿನಲ್ಲಿರುವ ಭೂಮಿಗಳಲ್ಲಿ ಸಾಗುವಳಿ ಮಾಡುತ್ತ ಭೂಮಿಯ ಮಂಜೂರಾತಿಗಾಗಿ ಫಾರಂ ನಂ 50, 53 ಹಾಗೂ 57ರಲ್ಲಿ ಅರ್ಜಿ ಸಲ್ಲಿಸಿ ಹಲವು ವರ್ಷಗಳಿಂದ ಕಾಯುತ್ತಲೇ ಇದ್ದಾರೆ ಎಂದು ಬಗರ್ ಹುಕುಂ ಸಾಗುವಳಿದಾರ ಪದಾಧಿಕಾರಿಯಾದ ಹನುಮಂತಪ್ಪ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಭೂಮಿಗಾಗಿ ಪ್ರತಿಭಟನೆ ಹೋರಾಟಗಳನ್ನು ನಡೆಸಲಾಗಿದೆ. ಮನವಿಗಳಿಗಂತೂ ಲೆಕ್ಕವೇ ಇಲ್ಲ. ಹಲವು ಶಾಸಕರು, ನೂರಾರು ಅಧಿಕಾರಿಗಳು ಬದಲಾದರೂ ಭೂಮಿಗಾಗಿ ಸಲ್ಲಿಸಿದ ಅರ್ಜಿಗಳು ಕಛೇರಿಗಳಲ್ಲಿ ಧೂಳು ತಿನ್ನುತ್ತಿವೆ. ಬಡ ಜನರ ಸಮಸ್ಯೆಗಳು ಬಗೆ ಹರಿಯದ ಇಲ್ಲಿಯವರೆಗೂ ಮುಂದುವರೆಯುತ್ತಲೇ ಇವೆ.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯೂ ಒಳಗೊಂಡAತೆ ಹಲವಾರು ಸಂಘಟನೆಗಳ ಹೋರಾಟದ ಪ್ರತಿಫಲವಾಗಿ ಬಗರ್ ಹುಕುಂ ಸಮಿತಿಗಳು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಭೂಮಿ ಮಂಜೂರಾತಿ ಸಮಿತಿಗಳು ರಚನೆಗೊಂಡಿವೆ. ತಾಲ್ಲೂಕಿನಾದ್ಯಂತ ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಿರುವ ಭೂರಹಿತರ ಜನರಿಗೆ ಭೂಮಿಗಳನ್ನು ಮಂಜೂರಾತಿ ನೀಡಬೇಕು ಎಂದು ಒತ್ತಾಯಿಸಿದರು.

ಹಕ್ಕೊತ್ತಾಯಗಳು :
ಸರ್ಕಾರಿ, ಹುಲ್ಲುಬನ್ನಿ, ಖರಾಬ್, ಗೋಮಾಳ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿರುವ, ಅರ್ಜಿ ಸಲ್ಲಿಸಿರುವ ಭೂರಹಿತರಿಗೆ ಭೂಮಿ ಮಂಜೂರಾತಿ ನೀಡಬೇಕು.ಅರಣ್ಯ-ಕಂದಾಯ ವ್ಯಾಪ್ತಿಯ ಭೂಮಿ ತಕರಾರುಗಳನ್ನು ಪರಿಹರಿಸಿ ಸಾಗುವಳಿ ಮಾಡುತ್ತಿರುವ ರೈತರಿಗೇ ಭೂಮಿ ಮಂಜೂರಾತಿ ನೀಡಬೇಕು. ಸಾಗುವಳಿ ಮಾಡುತ್ತಿರುವ ಅಮೃತ ಮಹಲ್ ಕಾವಲ್ ಹೆಸರಿನಲ್ಲಿರುವ ಭೂಮಿಗಳನ್ನು ರೈತರಿಗೆ ನೀಡಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಫಾರಂ ನಂ.50, 53 ಹಾಗೂ 57ರಲ್ಲಿ ಅರ್ಜಿ ಸಲ್ಲಿಸಿರುವ ಮಂಜೂರಾತಿಗಾಗಿ ಕಾಯುತ್ತಿರುವ ಸರ್ಕಾರಿ ಭೂಮಿಯಿಂದಾಗಲೀ, ಅರಣ್ಯ ಭೂಮಿಯಿಂದಾಗಲೀ ಯಾವುದೇ ಕಾರಣದಿಂದಲೂ ಸಾಗುವಳಿ ಮಾಡುತ್ತಿರುವ ಭೂಮಿಗಳಿಂದ ರೈತರನ್ನು ಒಕ್ಕಲೆಬ್ಬಿಸಬಾರದು.
94ಸಿ, 94ಸಿಸಿ ರಡಿಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಸಕ್ರಮಗೊಳಿಸಬೇಕು ಮತ್ತು ವಸತಿಗಾಗಿ ಅರ್ಜಿ ಸಲ್ಲಿಸಿರುವ ವಸತಿ ರಹಿತರಿಗೆ
ಗೌರವಯುತವಾಗಿ ಬದುಕಲು ನಿವೇಶನ, ಮನೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಇದೇ ಸಂಧರ್ಭದಲ್ಲಿ ಸತ್ಯಪ್ಪ, ಹನುಮಂತಪ್ಪ, ಸುನಂದಮ್ಮ, ನಾಗಣ್ಣ, ಮಾರಪ್ಪ, ಮಂಜುನಾಥ್, ಕುಮಾರ್ ಇತರರು ಇದ್ದರು.

About The Author

Namma Challakere Local News
error: Content is protected !!