ನಾಯಕನಹಟ್ಟಿ:: ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಹೋಬಳಿಯ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ. 2024ರ ನೂತನ ದ್ರಾಕ್ಷ ರಸ ನಿಗಮ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಬಿ. ಯೋಗೇಶ್ ಬಾಬು ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಹರ್ಷವ್ಯಕ್ತಪಡಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು..
ಇದೇ ವೇಳೆ ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಟಿ ರಂಗಪ್ಪ ಮಾತನಾಡಿ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಕಾಂಗ್ರೆಸ್ ನಾಯಕರು ಹಾಗೂ ಕೆಪಿಸಿಸಿ ಸದಸ್ಯರಾದ ಡಾ. ಬಿ ಯೋಗೇಶ್ ಬಾಬು ರವರು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 10ರಿಂದ 15 ವರ್ಷದ ಕಾಲ ಪಕ್ಷವನ್ನು ಕಟ್ಟಿ ಬೆಳೆಸಿದ ಬಡವರ ಬಂಧು ಶಿಕ್ಷಣ ಪ್ರೇಮಿ ಜನನಾಯಕರಾದ ಡಾ. ಬಿ ಯೋಗೇಶ್ ಬಾಬು ಅವರಿಗೆ 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪ್ರಮುಖರು ಮುಖಂಡರು ಸೂಚಿಸಿದ ಜವಾಬ್ದಾರಿ ಪ್ರಾಮಾಣಿಕವಾಗಿ ಮತ್ತು ಶಿಸ್ತಿನಿಂದ ನಿಭಾಯಿಸಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಪ್ರಮುಖ ಕಾರಣ ಕರ್ತರಾದ ಡಾ. ಬಿ ಯೋಗೇಶ್ ಬಾಬು ರವರಿಗೆ. ಗುರುತಿಸಿ ಎಂದು ಕರ್ನಾಟಕ ಸರ್ಕಾರ ದ್ರಾಕ್ಷರಸ ನಿಗಮ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದರು.
ಇನ್ನೂ ಇದೆ ವೇಳೆ ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಿ ರಾಜು. ಚೌಳಕೆರೆ ಮಾತನಾಡಿದರು
ಇದೇ ಸಂದರ್ಭದಲ್ಲಿ ವಕೀಲ ಮಲ್ಲೇಶ್, ಪಟೇಲ್ ಗುಂಡಯ್ಯ, ವಾಸಣ್ಣ, ದುರುಗೇಶ್, ಗುಂತುಕೋಲಮ್ಮನಹಳ್ಳಿ, ಜಾಗನೂರಹಟ್ಟಿ ಪಿ ಮುತ್ತಯ್ಯ, ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿ ಜಿ ಟಿ ತಿಪ್ಪೇಸ್ವಾಮಿ, ಸಿ ಮಹಾತ್ಮ, ಹೊಯ್ಸಳ ನಾಯಕ, ಸಿ. ತಿಪ್ಪೇಸ್ವಾಮಿ, ಆರ್ ಯರ್ರಿಸ್ವಾಮಿ ಗೌಡಗೆರೆ, ನಾಯಕನಹಟ್ಟಿ ಅಭಿ, ಪ್ರವೀಣ್, ಕೊಂಡಯ್ಯನ ಕಪಿಲೆ ಬೋರಯ್ಯ, ಶ್ರೀನಿವಾಸ್, ಜೋಗಿಹಟ್ಟಿ ಮಂಜುನಾಥ್, ಸೇರಿದಂತೆ ಮುಂತಾದವರು ಇದ್ದರು