.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್.

ನಾಯಕನಹಟ್ಟಿ:: ಮಾ.1.ವಿಜ್ಞಾನ ಮಾದರಿಗಳನ್ನು ತಯಾರಿಸುವ ಹಾಗೂ ಅದನ್ನು ನಿರ್ವಹಿಸುವ ತಂತ್ರಜ್ಞಾನವನ್ನು ಮಕ್ಕಳು ರೂಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಹೇಳಿದ್ದಾರೆ.

ಶುಕ್ರವಾರ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ. ಅವರು ವಿದ್ಯಾರ್ಥಿಗಳು ವಿಜ್ಞಾನದ ವಿಷಯದಲ್ಲಿ ಸಾಧನೆ ಮಾಡಲು ಸಿವಿ ರಾಮನ್ ಅವರ ಆದರ್ಶಗಳನ್ನ ಮೈಗೂಡಿಸಿಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಸಿವಿ ರಾಮನ್ ಅವರು ತಮಗೆ ವಿಜ್ಞಾನದಲ್ಲಿ ಆಸಕ್ತಿ ಇದ್ದುದರಿಂದ ಹೆಚ್ಚಿನವೇ ತರದ ಕೆಲಸವನ್ನು ಬಿಟ್ಟು ವಿಜ್ಞಾನದ ವಿಷಯದಲ್ಲಿ ಏನಾದರೂ ಸಾಧನೆ ಮಾಡಲೇಬೇಕಾ ಹಂಬಲದಿಂದ ಹಗಲು ರಾತ್ರಿ ಕಷ್ಟಪಟ್ಟು ಬೆಳಕಿನ ಚದುರುವಿಕೆ ಎಂಬ ವಿಷಯದಲ್ಲಿ ಮಹತ್ವದ ಸಾಧನೆ ಮಾಡಿ ನೊಬೆಲ್ ಪ್ರಶಸ್ತಿ ಪಡೆದು ಸಾಧನೆ ಮಾಡಿದರು ಎಂದರು.

ಇದೆ ವೇಳೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎನ್ ಇಂದಿರಮ್ಮ ಮಾತನಾಡಿದ ಅವರು ಸರ್ ಸಿವಿ ರಾಮನ್ ರವರು ಪ್ರೌಢ ಹಂತದಲ್ಲಿ ತಮ್ಮ ಉತ್ತಮ ಕೌಶಲ್ಯ ಬೆಳೆಸಿಕೊಂಡ ಸರ್ ಸಿ ವಿ ರಾಮನ್ ರವರು ಇಂದು ನಮ್ಮ ದೇಶದಲ್ಲಿ ವಿಜ್ಞಾನದ ಕೀರ್ತಿಯನ್ನು ಹೆಚ್ಚಿಸಿ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್, ಎಸ್ ಟಿ ಎಸ್ ಆರ್ ಪ್ರೌಢಶಾಲೆಯ ಫಣೇಂದ್ರ, ಈಸಿಒ ಈರಸ್ವಾಮಿ, ಸಿ ಆರ್ ಪಿ ಈಶ್ವರಪ್ಪ, ಡಾನ್ ಬಾಸ್ಕೋ ಶಾಲೆಯ ಕಾರ್ಯದರ್ಶಿ ಎಸ್ ಟಿ ಬೋರ್ ಸ್ವಾಮಿ, ಅಕ್ಷರ ದಾಸೋಹ ತಿಪ್ಪೇಸ್ವಾಮಿ, ಶಿಕ್ಷಕ ಸದಾಶಿವಯ್ಯ, ಚನ್ನಬಸಯ್ಯನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ ತೀರ್ಥ ಕುಮಾರ್, ಎಸ್ ಡಿ ಎಂ ಸಿ ಅಧ್ಯಕ್ಷೆ ಪಿ ಎ ಸುಮಲತಾ, ಶಿಕ್ಷಕಿ ಬಿ ಎಂ ಶಿಲ್ಪ, ಸೇರಿದಂತೆ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು

About The Author

Namma Challakere Local News
error: Content is protected !!