ಚಳ್ಳಕೆರೆ ನ್ಯೂಸ್ :
ಪಿಡಿಒ ವರ್ತನೆಗೆ ಬೇಸತ್ತು ಸಾಮೂಹಿಕ ರಾಜೀನಾಮೆ
ಸಲ್ಲಿಸಿದ ಸದಸ್ಯರು
ಹಿರಿಯೂರಿನ ಕರಿಯಾಲ ಗ್ರಾಪಂ. ಪಿಡಿಓ ಚಂದ್ರಕಲಾ ಸರಿಯಾಗಿ
ಕರ್ತವ್ಯ ನಿರ್ವಹಿಸುತ್ತಿಲ್ಲ,
ಸಾರ್ವಜನಿಕರ ಕೈಗೆ ಸಿಗುತ್ತಿಲ್ಲೆಂದು
ಆರೋಪಿಸಿ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಸದಸ್ಯರು
ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಗ್ರಾಮದಲ್ಲಿ ಕುಡಿವ ನೀರಿನ
ಸಮಸ್ಯೆ ಉಲ್ಬಣಗೊಂಡಿದ್ದು, ಗ್ರಾಪಂ ನಲ್ಲಿ 15 ಜನ ಸದಸ್ಯರಿದ್ದು,
ಉಪಾಧ್ಯಕ್ಷ ಸೇರಿ 11 ಜನ ಸದಸ್ಯರು ರಾಜೀನಾಮೆ ನೀಡಿದ್ದಾರೆ.
ಅಧ್ಯಕ್ಷ ಉಳಿದ 3 ಜನರು ಬೇರೆಡೆಯಿದ್ದು, ಶೀಘ್ರ ರಾಜೀನಾಮೆ
ನೀಡಲಿದ್ದಾರೆಂದು ಸದಸ್ಯ ಬಸವರಾಜ್ ತಿಳಿಸಿದ್ದಾರೆ.