ಚಳ್ಳಕೆರೆ ನ್ಯೂಸ್ : ಪ್ರಾಥಮಿಕ ಹಂತವಾಗಿ ಕಲಿತ ಜ್ಞಾನ ದೀರ್ಘಕಾಲದ ವರೆಗೆ ಹೆಮ್ಮರವಾಗಿ ಬೆಳೆಸಿಕೊಳ್ಳಿ ನಿಮ್ಮ ಜೀವನ ಸುಖಕರವಾಗಿರಲಿ ಎಂದು ಶಾಲೆಯ ಮುಖ್ಯ ಶಿಕ್ಷಕ ಇಟಿ.ಹನುಮಣ್ಣ ಹೇಳಿದರು.

ಅವರು ತಾಲೂಕಿನ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು, ಏಳನೇ ತರಗತಿ ವಿದ್ಯಾರ್ಥಿಗಳು ತುಂಬಾ ಅತ್ಯುತ್ತಮವಾಗಿ ನಮ್ಮ ಶಾಲೆಯಲ್ಲಿ ಚೆನ್ನಾಗಿ ಕಲಿತಿದ್ದೀರಾ ಇದೇ ಕಲಿಕೆ ಮುಂದಿನ ದಿನಗಳಲ್ಲಿ ಮುಂದುವರಿಸಿಕೊಂಡು ಉತ್ತಮವಾಗಿ ಓದಿ ನಿಮ್ಮ ತಂದೆ ತಾಯಿಗಳಿಗೆ ಒಳ್ಳೆಯ ಕೀರ್ತಿಯನ್ನು ತರಬೇಕೆಂದು ಹೇಳಿದರು

ಸಹ ಶಿಕ್ಷಕರಾದ ರಾಜು ಮಾತನಾಡಿ, ಜೀವನಕ್ಕೆ ಬೇಕಾಗಿರುವ ಎಲ್ಲಾ ಅನುಭವ ಪ್ರಾಥಮಿಕ ಶಾಲಾ ಹಂತದ ಮಟ್ಟದಲ್ಲಿ ಶಿಕ್ಷಕರ ಮುಖಾಂತರ , ಸಹಪಾಠಿಗಳ ಮುಖಾಂತರ ಕಲಿಕೆಯ ರೂಪದಲ್ಲಿ ನಿಮ್ಮ ಅನುಭವಕ್ಕೆ ಬಂದಿರುತ್ತದೆ, ಈ ಅನುಭವ ನಿಮ್ಮಲ್ಲಿ ಶಾಶ್ವತವಾಗಿ ಉಳಿಯುತ್ತದೆ ಏಕೆಂದರೆ ಎಲ್ಲಾ ಅನುಭವಗಳ ಮೂಲ ಬೇರು ಪ್ರಾಥಮಿಕ ಶಾಲಾ ಹಂತ ಈ ಹಂತದಲ್ಲಿ ಪ್ರಾರಂಭವಾದ ಗೆಳೆತನ ಬಾಂಧವ್ಯ ಎಂದಿಗೂ ಶಾಶ್ವತವಾಗಿರುತ್ತದೆ.

ಶಿಕ್ಷಕ ಸಿರಿಯಣ್ಣ ಟಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿ ಮುಂಬರುವ ಎಲ್ಲಾ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನ ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ SDMC ಉಪಾಧ್ಯಕ್ಷೆ ಚೆನ್ನಮ್ಮ, ಶಾಲೆಯ ಮುಖ್ಯ ಶಿಕ್ಷಕ ಇ ಟಿ ಹನುಮಣ್ಣ, ಸಹ ಶಿಕ್ಷಕರಾದ ಕವಿತಾ B E, ರಾಜು ಜೆ, ಸಿರಿಯಣ್ಣ ಟಿ ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!