ಚಳ್ಳಕೆರೆ : ಕೆರೆಗಳ ಹೂಳೆತ್ತಿ, ಕೆರೆಗಳಿಗೆ ಶೀಘ್ರದಲ್ಲಿಯೇ ನೀರು ತುಂಬಿಸುವಂತೆ ಹೋಬಳಿ ನೀರಾವರಿ ಹೋರಾಟ ಸಮಿತಿ ವತಿಯಿಂದ ಮೇ 9ರಂದು ಪಟ್ಟಣದಿಂದ ಡಿಸಿ ಕಚೇರಿ ವರೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರಾದ ಜಿಬಿ ಮುದಿಯಪ್ಪ ತಿಳಿಸಿದರು.

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದ ಡಾನ್ ಬಾಸ್ಕೋ ಶಾಲೆಯಲ್ಲಿ ನೀರಾವರಿ ಹೋರಾಟ ಸಮಿತಿ ವತಿಯಿಂದ ಪೂರ್ವಭಾವಿ ಸಭೆ ಭಾಗವಹಿಸಿ ಮಾತನಾಡಿದರು..

ಹೋಬಳಿಯ ಕೆರೆಗಳ ಹೂಳೆತ್ತಿ, ಸ್ವಚ್ಛತೆ ಗೊಳಿಸುವುದು ಮತ್ತು ಶೀಘ್ರದಲ್ಲೇ ಹೋಬಳಿಯ ವ್ಯಾಪ್ತಿಗೆ ಬರುವ ಕೆರೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ, ನಾಯಕನಹಟ್ಟಿ ಪಟ್ಟಣದಿಂದ ಜಿಲ್ಲಾಧಿಕಾರಿಗಳ ಕಚೇರಿವರಗೆ ಮೇ.09 ರಂದು ಬೈಕ್ ರ್ಯಾಲಿ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು….

ನೀರಾವರಿ ಹೋರಾಟ ಸಮಿತಿಯ ಕಾರ್ಯಧ್ಯಕ್ಷ ಎಸ್ ಟಿ ಬೋರಸ್ವಾಮಿ ಮಾತನಾಡಿ ಸದಾಕಾಲ ಬರಗಾಲಕ್ಕೆ ತುತ್ತಾದ ಪ್ರದೇಶ ನಾಯಕನಹಟ್ಟಿ ಹೋಬಳಿ, ಈ ಭಾಗದ ರೈತರು ಶ್ರಮಜೀವಿಗಳಾಗಿ ತಮ್ಮ ದಿನನಿತ್ಯದ ಜೀವನದಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ,

ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿ ತಂದು ರೈತರ ಬವಣೆಯನ್ನು ನೀಗಿಸಲು ಈಗಾಗಲೇ ಕಾಮಗಾರಿ ನಡೆಸುತ್ತಿದ್ದು ಶೀಘ್ರದಲ್ಲಿ ಈ ಭಾಗದ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯ ಮಾಡಿದರು…

ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಮಹಾಂತೇಶ್, ಆರ್ ಬಸಪ್ಪ, ಚಂದ್ರಣ್ಣ, ಕಾರ್ಯಾಧ್ಯಕ್ಷರಾದ ಟಿ ಬಸಣ್ಣ ಮಾಜಿ ಪಟ್ಟಣ ಪಂಚಾಯತ್ ಸದಸ್ಯರು, ಪ್ರಧಾನ ಕಾರ್ಯದರ್ಶಿಯಾದ ನಾಗೇಂದ್ರಪ್ಪ ವಕೀಲರು, ಎಚ್ ಬಿ ತಿಪ್ಪೇಸ್ವಾಮಿ ಜೋಗಿಹಟ್ಟಿ, ಖಜಾಂಚಿ ಸುನಿಲ್ ಕುಮಾರ್,
ಸದಸ್ಯರಾದ ಮಂಜಣ್ಣ ಟಿ ರಂಗಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರು ಗೌಡಗೆರೆ, ಪಾಲಯ್ಯ, ತಿಪ್ಪೇಸ್ವಾಮಿ ಬಿ ,ಮಂಜುನಾಥ್, ರುದ್ರಮುನಿ ,ಬಸವರಾಜ್, ನೂತನ ಪಟ್ಟಣ ಪಂಚಾಯತಿ ಸದಸ್ಯರಾದ ತಿಪ್ಪೇಸ್ವಾಮಿ, ಇನ್ನು ಮುಂತಾದವರು ಉಪಸ್ಥಿತರಿದ್ದರು.

Namma Challakere Local News
error: Content is protected !!