ಚಳ್ಳಕೆರೆ ನ್ಯೂಸ್ : ವೃದ್ದಾಶ್ರಮಗಳು ನಮ್ಮ ಮಧ್ಯೆ ಹುಟ್ಟಿಕೊಳ್ಳಬಾರದು ಆದರೆ ಅನಿವಾರ್ಯವಾಗಿ ನಿರ್ಗತಿಕರಿಗೆ ವೃದ್ದಾಶ್ರಮಗಳು ವರದಾನವಾಗಿವೆ ಎಂದು ನೇತಾಜಿ ಸ್ನೇಹ ಬಳಗದ ಅಧ್ಯಕ್ಷ ನೇತಾಜಿ ಪ್ರಸನ್ನ ಹೇಳಿದರು.
ಅವರು ನಗರದ ಬೆಂಗಳೂರು ರಸ್ತೆಯ ಬನಶ್ರೀ ವೃದ್ದಾಶ್ರಮದಲ್ಲಿ ಯತೀಶ್ ಎಂಬುವವರ ಹುಟ್ಟು ಹಬ್ಬದ ಪ್ರಯುಕ್ತ ವೃದ್ದರಿಗೆ ಸಿಹಿ ಹಂಚುವ ಮೂಲಕ ಹುಟ್ಟು ಹಬ್ಬದ ಶುಭಾಷಯ ಕೋರಿದ್ದಾರೆ. ಅದರಂತೆ ಇಂತಹ ನಾಗರೀಕ ಸಮಾಜದಲ್ಲಿ ಉತ್ತಮ ಗುಣ ಧರ್ಮಗಳನ್ನು ಬೆಳೆಸಿಕೊಳ್ಳುವ ಮೂಲಕ ತಾನು ಸಂತೋಷದಿದ್ದರೆ ಸಲಾದು ನಮ್ಮ ಸುತ್ತಮುತ್ತಲಿನ ಜನರು ಕೂಡ ಸಂತೋಷದಿAದ ಇರಬೇಕು ಎಂಬ ಮನೋಧರ್ಮದ ಮೂಲಕ ಇಂದು ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.
ಇನ್ನೂ ಹುಟ್ಟು ಹಬ್ಬ ಆಚರಿಸಿಕೊಳ್ಳುವ ಯತೀಶ್ ರವರ ಮಾತನಾಡಿ, ಸ್ವಾಮೀ ವಿವೇಕಾನಂದ ಚಿಂತನೆಯ ಮೂಲಕ ಜೀವ ಶಿವ ಸೇವೆ ಮಾಡುವ ಈ ಮಾತನ್ನು ಆಧಾರಿಸಿ ಇಂದು ವಯೋ ವೃದ್ದರಿಗೆ ಸಿಹಿ ತಿನಿಸುವ ಮೂಲಕ ಅವರಿಗೆ ಆರ್ಥಿಕ ನೆರವು ನೀಡುವ ಮೂಲಕ ಸಮಾಜದಲ್ಲಿ ನಾವು ಒಬ್ಬರು ಎಂಬ ಮನೋಚಿಂತನೆಯ ಮೂಲಕ ಇಂದು ಇವರ ಸಂತೋಷದಲ್ಲಿ ಬಾಗಿಯಾಗಿದ್ದೆನೆ ಎಂದರು.
ಇದೇ ಸಂದರ್ಭದಲ್ಲಿ ಬನಶ್ರೀ ವೃದ್ದಾಶ್ರಮದ ಮಂಜುಳಾಮ್ಮ, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!