ಚಳ್ಳಕೆರೆ ನ್ಯೂಸ್:
ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ
ಸಮೀಕ್ಷೆ ಪ್ರಾರಂಭ
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ
ಯೋಜನೆಗಳ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಸರ್ಕಾರದ
ನಿರ್ದೇಶನದನ್ವಯ ಸಮೀಕ್ಷೆ ನಡೆಸುವ ಕಾರ್ಯ ಚಿತ್ರದುರ್ಗ ದಲ್ಲಿ
ಪ್ರಾರಂಭಗೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ತಿಳಿಸಿದ್ದಾರೆ.
ಐದು
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸ್ಪಷ್ಟ ಚಿತ್ರಣ ಪಡೆಯಲು
ಫಲಾನುಭವಿಗಳ ಸಮೀಕ್ಷೆ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಆಶಾ, ಅಂಗನವಾಡಿ ಕಾರ್ಯಕರ್ತೆಯರು ತೆರಳಿ ಸರ್ವೆ ಕಾರ್ಯ
ನಡೆಸುತ್ತಿದ್ದಾರೆಂದರು.