ಚಳ್ಳಕೆರೆ ನ್ಯೂಸ್ : ಬುಡಕಟ್ಟು ಸಂಪ್ರದಾಯದ ನಾಡು ಗೋವುಗಳ ಸಂತತಿ ಬೀಡು ಎಂಬ ಮಾತು ಬಯಲು ಸೀಮೆ ಚಳ್ಳಕೆರೆ ತಾಲ್ಲೂಕಿನಲ್ಲಿ ಕಣ್ಮರೆಯಾಗುವಂತಾಗಿದೆ.
ದೇವರ ಎತ್ತುಗಳಿಗೆ ವಿಶೇಷವಾದ ಸ್ಥಾನ ಇದ್ದ ಆ ಕಾಲದಲ್ಲಿ ಮೇವು ನೀರಿಗೆ ಕೊರತೆ ಇರಲಿಲ್ಲ ಆದರೆ ಬದಲಾದ ಪರಿಸ್ಥಿತಿಯಲ್ಲಿ ಇಂದು
ಮೇವು ನಿರಿಲ್ಲವಾಗಿವೆ ಗೋವುಗಳು ಹಂತ ಹಂತವಾಗಿ ಕ್ಷೀಣಿಸುತ್ತಿವೆ.
ಇನ್ನೂ ಬಯಲು ಸೀಮೆಯ ದೇವರ ಗೋವುಗಳಿಗೆ ಮೇವು ನೀರಿಲ್ಲದೆ ನಿಂತ್ರಾಣಗೊಂಡಿವೆ, ಇದರ ಬಗ್ಗೆ ಸರಕಾರ ಹಾಗೂ ಸಂಘ ಸಂಸ್ಥೆಗಳ ಸಹಾಕರ ಅತ್ಯಗತ್ಯವಾಗಿ ಬೇಕಾಗಿದೆ ಎಂದು ಕಿಲಾರಿಗಳ ಅಳಲಾಗಿದೆ.
ಹೌದು ಇಂತಹದೊಂದು ಘಟನೆ ಚಳ್ಳಕೆರೆ ತಾಲೂಕಿನ ಪರುಶುರಾಂಪುರ ಹೋಬಳಿಯಲ್ಲಿ ಕಾಣಬಹುದಾಗಿದೆ.
ಹಲವಾರು ವರ್ಷಗಳಿಂದ ಗೋವುಗಳ ಆರಾಧಕರಾದ ಬಯಲು ಸೀಮೆಗೆ ಗೋ ರಕ್ಷಕರು ಇಂದು ಗೋವುಗಳ ಉಳಿವಿಗೆ ಅರಸಾಹಸ ಪಡುತಿದ್ದಾರೆ.
ಅಹೋಬಲ ನರಸಿಂಹಸ್ವಾಮಿ, ಹಾಗು ಗಾತ್ರಿ ಪಾಲನಾಯಕ ದೇವರ ಎತ್ತುಗಳು ಇಂದು ಮೇವಿನೀರಿಗಾಗಿ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ.
ಇನ್ನೂ ನೂರಾರು ಗೋವುಗಳ ಇಂದು ಮೇವಿಗಾಗಿ ಸರಕಾರದ ಮೊರೆ ಹೊಗಲು ಅಂಗಲಾಚುತ್ತಿವೆ..