ಚಳ್ಳಕೆರೆ ನ್ಯೂಸ್ : ವಾರಕ್ಕಿಂತ ಹೆಚ್ಚು ದಿನಗಳ ಕಾಲ ಕೆಮ್ಮು ಎದೆನೋವು, ಊಟ ಸೇರದಿರುವುದು, ಬಿಟ್ಟು ಬಿಟ್ಟು ಜ್ವರ ಬರುವುದು ಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಿರಿ ಎಂದು ಮುಖ್ಯ ಶಿಕ್ಷಕ ಆರ್.ನಾಗರಾಜ್ ಹೇಳಿದರು.
ಅವರು ತಾಲೂಕಿನ ರಾಮಜೋಗಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕುರುಡಿಹಳ್ಳಿ ಉಪಕೇಂದ್ರದಿAದ ಬಂಡೆಹಟ್ಟಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಕ್ಷಯರೋಗದ ಬಗ್ಗೆ ಜಾಗೃತ ಜಾಥದಲ್ಲಿ ಮಾತನಾಡಿದರು, ಮಾರ್ಚ 24ರಂದು ವಿಶ್ವ ಕ್ಷಯರೋಗ ದಿನವನ್ನು ಆಚರಿಸುತ್ತೆವೆ ಆದ್ದರಿಂದ ಇತರನಾದ ಲಕ್ಷ÷್ಣಗಳು ಕಂಡು ಬಂದಲ್ಲಿ ತಾತ್ಸರ ಮಾಡದೆ ವೈಧ್ಯರ ಸಲಹೆ ಪಡೆದು ಪರೀಕ್ಷೆಗೆ ಒಳಪಡಿಸಬೇಕು, ಇದರಿಂದ ಮುಂದಿನ ಅನಾವುತ ತಪ್ಪಿಸಲು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದರು.
ಇದೇ ಸಂಧರ್ಭದಲ್ಲಿ ಸರಕಾರಿ ಶಾಲೆಯ ಸಹ ಶಿಕ್ಷಕರಾದ ಹೆಚ್.ಹನುಮಂತಪ್ಪ, ಅಂಗನವಾಡಿ ಕಾರ್ಯಕರ್ತೆ ಪಿ.ಗಿರಿಜಾ, ತಿಪ್ಪೆಸ್ವಾಮಿ, ಮಧುಕಲಾ, ಪೋಷಕರು, ಶಾಲಾ ಮಕ್ಕಳು ಇದ್ದರು

Namma Challakere Local News
error: Content is protected !!