“ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ” ಅಸ್ತಿತ್ವಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ

ಚಳ್ಳಕೆರೆ ನ್ಯೂಸ್ : ಹಿಂದಿನ ಸರ್ಕಾರದಿಂದ ಅಧಿಸೂಚನೆಗೊಂಡ “ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ”ದ ಸ್ಥಾಪನೆಯು ಹೊಸ ಸರ್ಕಾರ ಅಧಿಕಾರಕ್ಕೆ ಬಂದು 11 ತಿಂಗಳು ಕಳೆದರೂ ನಿಗಮದ ಕಚೇರಿ ಆರಂಭವಾಗದೆ, ಅಧ್ಯಕ್ಷರನ್ನು ನೇಮಕ ಮಾಡದೆ ಕಡೆಗಣಿಸಿದೆ ಎಂದು ನೇಕಾರ ಸಮುದಾಯಗಳ ಸ್ವಯಂ ಸೇವಕರ ಸಂಘದ ಅಧ್ಯಕ್ಷ ಕೋಲಂನಹಳ್ಳಿ ಪೀತಾಂಬರ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ತಾಲೂಕಿನ ತಹಶೀಲ್ದಾರ್ ರೇಹಾನ್ ಪಾಷಗೆ ಮನವಿ ಸಲ್ಲಿಸಿ ಮಾತನಾಡಿದರು, ನೇಕಾರ ಸಮುದಾಯದ ಅಭಿವೃದ್ಧಿಯನ್ನು ಸರ್ಕಾರ ಕಡೆಗಣಿಸಿದೆ. ಅಲ್ಲದೆ ಮುಖ್ಯಮಂತ್ರಿಗಳು 2024-25ನೇ ಸಾಲಿನ ಆಯ-ವ್ಯಯದಲ್ಲಿಯೂ ಸಹ ನೇಕಾರ ಸಮುದಾಯಗಳ ಅಭಿವೃದ್ಧಿ ಕುರಿತಂತೆ ಯಾವುದೇ ಯೋಜನೆಗಳನ್ನು ಪ್ರಸ್ತಾಪ ಮಾಡದೆ ಇಡೀ ಸಮಾಜವನ್ನೇ ನಿರ್ಲಕ್ಷಿಸಿದೆ.
ಸರ್ಕಾರದ ಈ ವಿಳಂಬ ನೀತಿ ಮತ್ತು ನೇಕಾರ ಸಮುದಾಯಗಳ ಬಗ್ಗೆ ತೋರಿರುವ ನಿರ್ಲಕ್ಷದಿಂದಾಗಿ ನೇಕಾರ ಸಮುದಾಯಗಳು ಕಂಗೆಟ್ಟು ತಮಗಾದ ನೋವು ಮತ್ತು ನಿರಾಸೆಗಳನ್ನು ಸರಿಪಡಿಸುವ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯಲು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ತಹಶೀಲ್ದಾರ್‌ರವರಿಗೂ ಮತ್ತು ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳಿಗೂ ಏಕ ಕಾಲದಲ್ಲಿ ಮನವಿ ಸಲ್ಲಿಸಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಮನವಿ ಸಲ್ಲಿದರು.
ಇನ್ನೂ ಚಳ್ಳಕೆರೆ ತಾಲ್ಲೂಕು ನೇಕಾರ ಸಮುದಾಯಗಳ ಸ್ವಯಂ ಸೇವಕರ ಸಂಘ, ಸಮಾಜದ ಅಪಾರ ಜನರು ಚಳ್ಳಕೆರೆ ತಾಲ್ಲೂಕು ತಹಶೀಲ್ದಾರ್‌ರವರಾದ ಶ್ರೀ ರೆಹಾನ್‌ಪಾಷಾರವರಿಗೂ ಮತ್ತು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ರಘುಮೂರ್ತಿಯರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ನೇಕಾರ ಸಮುದಾಯಗಳ ಸ್ವಯಂ ಸೇವಕರ ಸಂಘದ ಅಧ್ಯಕ್ಷ ಕೋಲಂನಹಳ್ಳಿ ಪೀತಾಂಬರ್, ಗೌರವಾಧ್ಯಕ್ಷ ನೇಕಾರ ನಾಗಭೂಷಣ್, ಕಾರ್ಯದರ್ಶಿ ರುದ್ರಪ್ಪ, ಖಜಾಂಚಿ ಮಲ್ಲಿಕಾರ್ಜುನ್, ನಿವೃತ್ತ ಪ್ರಾಚಾರ್ಯರಾದ ಲಕ್ಷ್ಮೀವೆಂಕಟೇಶಲು, ಭೀಮಪ್ಪ, ಅಂಜಿನರೆಡ್ಡಿ, ರಮೇಶ್, ವಿರೂಪಾಕ್ಷ, ತಿಪ್ಪೇಸ್ವಾಮಿ, ಓಂಕಾರಪ್ಪ ಹಾಗೂ ಸಮಾಜದ ಮುಖಂಡತು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!