ಚಳ್ಳಕೆರೆ ನ್ಯೂಸ್ : ಕಾಂಗ್ರೆಸ್ ಸರ್ಕಾರವು ದಿವಾಳಿಯಾಗಿದೆ,ಹಾಗಾಗಿ
ಎಲ್ಲೆಡೆ ಕಣ್ಣು ಹಾಕುತ್ತಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಕಾಂಗ್ರೆಸ್ ಸರ್ಕಾರವು ದಿವಾಳಿಯಾಗಿದೆ ಹಾಗಾಗಿ ದುಡ್ಡಿಲ್ಲದೆ
ಎಲ್ಲದರ ಮೇಲೆಯೂ ಕಣ್ಣು ಹಾಕುತ್ತಿದೆ. ಅಲ್ಲದೆ ಕಾಂಗ್ರೆಸ್ ಹಿಂದೂ
ವಿರೋಧಿ ಎನ್ನುವುದನ್ನು ಹೆಜ್ಜೆ ಹೆಜ್ಜೆ ತೋರಿಸುತ್ತಿದೆ. ಬೇರೆ ಧರ್ಮದ
ಪವಿತ್ರ ಸ್ಥಳಗಳಿಂದ ತೆಗೆಯುವಂತೆ ನಾನು ಸರ್ಕಾರಕ್ಕೆ ಚಾಲೆಂಜ್
ಮಾಡುತ್ತೇನೆ. ಅವರು ಯಾವುದೊ ಆಸ್ತಿಯನ್ನು ತಮ್ಮ ಆಸ್ತಿ
ಎಂದು ತೆಗೆದುಕೊಳ್ಳುತ್ತಾರೆ. ದೇವಸ್ಥಾನದ ದುಡ್ಡಿನ ಮೇಲೆ ನೀವು
ಕಣ್ಣಿಟ್ಟಿದ್ದೀರಾ?
ನಾವು ಇದರ ವಿರುದ್ಧ ತೀವ್ರ ಪ್ರತಿಭಟನೆಯನ್ನು
ಮಾಡುತ್ತವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ