ನಾಯಕನಹಟ್ಟಿ:: ಕ್ರೀಡೆಗೆ ಪ್ರೋತ್ಸಾಹಕರ ಪಾತ್ರ ಮುಖ್ಯ ಎಂದು ಡಿ. ಜಿ. ಗೋವಿಂದಪ್ಪ ಹೇಳಿದ್ದಾರೆ.

ಸಮೀಪದ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸ ಜೋಗಿಹಟ್ಟಿ ಹೊರವಲಯದ ಕ್ರೀಡಾಂಗಣದಲ್ಲಿ ಶ್ರೀ ಕೃಷ್ಣ ಕ್ರಿಕೆಟರ್ಸ್ ಇವರ ವತಿಯಿಂದ ಪ್ರಥಮ ಬಾರಿಗೆ ಜೋಗಿಹಟ್ಟಿ ಪ್ರೀಮಿಯರ್ ಲೀಗ್ ಸೀಸನ್ 1 ಕ್ರಿಕೆಟ್ ಕ್ರೀಡಾಕೂಟವನ್ನು ಟೇಪ್ ಕತ್ತರಿಸುವ ಮೂಲಕ ಚಾಲನೆಯನ್ನು ನೀಡಿ ಮಾತನಾಡಿದ್ದಾರೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಕ್ರೀಡಾಪಟುಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಲಿದೆ ಕ್ರೀಡೆಪಟ್ಟುಗಳು ಯಾವುದೇ ಅಹಿತಕರ ಘಟನೆ ನಡೆದಂತೆ ಶಾಂತಿಯುತವಾಗಿ ಕ್ರೀಡೆಯನ್ನು ಆಡಬೇಕು ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.

ಇದೇ ವೇಳೆ ಸದಸ್ಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ. ರಂಗಪ್ಪ ಮಾತನಾಡಿ ಕ್ರೀಡೆ ಮನುಷ್ಯನಿಗೆ ದೈಹಿಕ ಮಾನಸಿಕ ಸದೃಢತೆಗೆ ಸಹಕಾರಿಯಾಗಲಿದ್ದು ಕ್ರೀಡಾಪಟುಗಳಿಗೆ ಆರ್ಥಿಕವಾಗಿ ದಣಿಗೆ ನೀಡುವ ಪ್ರೋತ್ಸಕರ ಪಾತ್ರ ಬಹು ಮುಖ್ಯ ಎಂದರು.

ಇನ್ನೂ ಯುವ ಮುಖಂಡ ಎಚ್ .ಬಿ.ತಿಪ್ಪೇಸ್ವಾಮಿ ಮಾತನಾಡಿದರು ಕ್ರೀಡಾ ಚಟುವಟಿಕೆಗಳು ದೈಹಿಕ ಮಾನಸಿಕ ಹೊಸ ಚೇತನ ಸ್ವಾಭಿಮಾನ ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ಗ್ರಾಮೀಣ ಕ್ರೀಡಾ ಯುವಕರು ಅನಗತ್ಯ ವಿಷಯಗಳ ಮತ್ತು ಆಕಾಂಕ್ಷೆಗಳಿಗೆ ಒಳಗಾಗದೆ ಪ್ರತಿ ಜೀವನ ಪರಿಸ್ಥಿತಿಯನ್ನು ನಿಭಾಯಿಸಲು ಸದೃಢ ಮತ್ತು ಇನ್ನಷ್ಟು ಬದ್ದವಾಗಿರಬೇಕು ಎಂದು ತಿಳಿಸಿದರು.

ನಂತರ ಯುವ ಮುಖಂಡ ಎಚ್‌ ಬಿ ಬಾಲರಾಜ್ ಯಾದವ್ ಮಾತನಾಡಿ ನಮ್ಮ ಗ್ರಾಮದ ಶ್ರೀ ಕೃಷ್ಣ ಕ್ರಿಕೆಟರ್ಸ್ ವತಿಯಿಂದ ಪ್ರಥಮ ಬಾರಿಗೆ ಕ್ರೀಡಾಕೂಟವನ್ನು ಆಯೋಜಿಸಿದ್ದು ಸಂತಸ ತಂದಿದೆ ಪ್ರತಿಯೊಬ್ಬ ಕ್ರೀಡಾಪಟುಗಳು ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಆಧುನಿಕ ಕಾಲಘಟ್ಟದಲ್ಲಿ ಗ್ರಾಮೀಣ ಯುವಕರನ್ನ ಕೈ ಹಿಡಿಯುವುದು ಕೆಲವೇ ವ್ಯಕ್ತಿಗಳು ಮಾತ್ರ ಪ್ರೋತ್ಸಾಹಕರು ಎಲ್ಲಿಯವರೆಗೆ ಇರ್ತಾರೋ ಅಲ್ಲಿಯವರೆಗೆ ಕ್ರೀಡೆಗಳು ಜೀವಂತವಾಗಿರುತ್ತವೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಮ್ಮ ಬೋರಯ್ಯ, ಸದಸ್ಯ ಎಸ್ ಸಿ ನಾಗಯ್ಯ, ಮಂಜಮ್ಮ ಗೋವಿಂದಪ್ಪ, ಸರೋಜಮ್ಮ ಕರಿಬಸವರಾಜ್, ಮಂಜಮ್ಮ, ಶಾಂತಮ್ಮ, ಮಂಜುಳಾ ರಂಗಸ್ವಾಮಿ ಭೀಮಗೊಂಡನಳ್ಳಿ, ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಜಿ.ಒ. ಓಬಳೇಶ್ ಭೀಮಗೊಂಡನಹಳ್ಳಿ,

ವ್ಯವಸ್ಥಾಪಕರಾದ: ಡಿ.ಜಿ ನರಸಿಂಹ, ಎ ಜಿ ಗೋವಿಂದಪ್ಪ, ಎ ಜಿ. ಬಸವರಾಜ್,.

ಆಯೋಜಕರು:: ಎಚ್ ಟಿ ಶ್ರೀಧರ್, ಎಂ ಟಿ ಗೋವಿಂದ್ ರಾಜ್, ಜಿ ಕೃಷ್ಣಮೂರ್ತಿ,
ಎಸ್ ಜಿ ವೆಂಕಟೇಶ್, ಕೆ ಜಿ ಮಂಜುನಾಥ್, ಬಿ. ಯೋಗಾನಂದ ಶೇಖರಪ್ಪ, ಸೇರಿದಂತೆ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳೆ ಜೋಗಿಹಟ್ಟಿ, ಹೊಸ ಜೋಗಿಹಟ್ಟಿ ,ಮಲ್ಲೂರಹಟ್ಟಿ, ಭೀಮಗೊಂಡನಹಳ್ಳಿ, ಗೌಡಗೆರೆ. ಹಳ್ಳಿಗಳ ಕ್ರೀಡಾಪಟುಗಳು ಗ್ರಾಮಸ್ಥರು ಇದ್ದರು.

Namma Challakere Local News
error: Content is protected !!