ಚಳ್ಳಕೆರೆ ನ್ಯೂಸ್ : ರಾಜ್ಯದಲ್ಲಿ ಶಾಲಾ ಮಕ್ಕಳು ಹಸಿವಿನಿಂದ ಬಳಲುಬಾರದು ಎಂದು ಮಧ್ಯಾಹ್ನದ ಬಿಸಿಯೂಟ , ಹಾಲು, ಮೊಟ್ಟೆ ಶೇಂಗಾ ಚುಕ್ಕೆ ಈಗೇ ವಿವಿಧ ಯೋಜನೆಗಳನ್ನು ಜಾರಿಗೆ ತಂದ ರಾಜ್ಯ ಸರಕಾರ, ಸರಕಾರಿ ಮಕ್ಕಳು ದಾಖಲಾತಿ ಪ್ರಮಾಣ ಕೂಡ ಹೆಚ್ಚಳಕ್ಕೆ ಕಾರಣವಾಗಿದೆ.
ಅದೇ ರೀತಿಯಲ್ಲಿ ಈಗ ಮಕ್ಕಳಿಗೆ ಮತ್ತೊಂದು ಯೋಜನೆ ತರುವ ಮೂಲಕ ಮಕ್ಕಳಿಗೆ ವರದಾನವಾಗಿದೆ.
ಸರ್ಕಾರದ ಆದೇಶದಂತೆ 1ರಿಂದ 10 ನೇ ತರಗತಿಯ ಮಕ್ಕಳಿಗೆ ಹಾಲಿನ ಜೊತೆಗೆ ಸಾಯಿ ಶುರ್ ರಾಗಿ ಮಾಲ್ಟ್ ವಿತರಿಸುವ ಮೂಲಕ ರಾಜ್ಯಾದ್ಯಾಂತ ಇಂದು ಚಾಲನೆ ಸಿಕ್ಕಿದೆ.
ಅದರಂತೆ ಚಳ್ಳಕೆರೆ ತಾಲೂಕಿನ ಸರಕಾರಿ ಕ್ಷೇತ್ರ ಮಾದರಿ ಶಾಲೆಯಲ್ಲಿ ಇಂದು ತಹಶೀಲ್ದಾರ್ ರೆಹಾನ್ ಪಾಷ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಸರಕಾರ ನೂತನವಾಗಿ ಜಾರಿಗೆ ತಂದ ರಾಗಿ ಮಾಲ್ಟ್ ಮಕ್ಕಳಿಗೆ ತುಂಬಾ ವರದಾನವಾಗಿದೆ. ಇದರಿಂದ ಅಪೌಷ್ಟಿಕ ಹಾಗೂ ರಕ್ತಹೀನತೆಯಂತ ರೋಗಗಳನ್ನು ದೂರ ಮಾಡಬಹುದು, ಇನ್ನೂ ಉತ್ತಮ ಗುಣಮಟ್ಟದ ಕಲಿಕೆಗೆ ಆಸಕ್ತಿವಯಿಸುವಂತೆ ಈ ಯೋಜನೆ ವರದಾನವಾಗಿದೆ ಎಂದರು.

ಇನ್ನೂ ಸುರಕ್ಷಾ ಪಾಲಿಕ್ಲಿನಿಕ್ ಮಾಲೀಕ,ಹಾಗೂ ಪೋಷಕರಾದ ಬಿ.ಪರೀದ್‌ಖಾನ್ ಮಾತನಾಡಿ, ಮಕ್ಕಳಿಗೆ ಈ ರಾಗಿ ಮಾಲ್ಟ್ ನೀಡುವುದು ಉತ್ತಮವಾದ ಪೌಷ್ಠಿಕ ಆಹಾರ ನೀಡಿದಂತಾಗುತ್ತಿದೆ, ಇದರಿಂದ ಮಗುವಿನ ಮಾನಸಿಕ ವಿಕಾಸಕ್ಕೆ ಹಾಗೂ ಕಲಿಕೆಗೆ ಹಿಂಬೂ ನೀಡಿದಂತಾಗುತ್ತದೆ ಎಂದರು.
ತಾಲೂಕು ಅಕ್ಷರ ದಾಸೋಹ ತಿಪ್ಪೆಸ್ವಾಮಿ ಮಾತನಾಡಿ, ವಾರದಲ್ಲಿ ಮೂರು ದಿನಗಳಲ್ಲಿ ಈ ರಾಗಿ ಮಾಲ್ಟ್ ವಿತರಣೆ ಮಾಡಲಾಗುತ್ತದೆ ಅದರಂತೆ ಸೋಮವಾರ, ಬುಧವಾರ ಶುಕ್ರವಾರ, ಈಗೇ ಮೂರು ದಿನದಲ್ಲಿ ಹಾಲಿನೊಂದಿಗೆ ಬೆರೆಸಿ ಮಕ್ಕಳಿಗೆ ನೀಡಲಾಗುತ್ತದೆ, ಇದರಿಂದ ಮಕ್ಕಳಲ್ಲಿರುವ ಅಪೌಷ್ಠಿಕತೆ ಹಾಗೂ ಅನಿಮಿಯಾ ತಡೆಗಟ್ಟುವುದಕ್ಕೆ ಪ್ರಮುಖ ಉದ್ದೇಶ ಇನ್ನೂ ಕಲಿಕೆ ಉತ್ತಮ ಗೊಳಿಸಲು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರಮುಖವಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ. ನಗರಸಭೆ ಸದಸ್ಯೆ ಸುಜಾತ ಪ್ರಹ್ಲಾದ್, ಬಿಇಓ ಸುರೇಶ್, ತಾಲೂಕು ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ಬಿ.ಪರೀದ್ ಖಾನ್ ಬಿಆರ್‌ಸಿ.ತಿಪ್ಪೆಸ್ವಾಮಿ, ಇಸಿಓ ಗೀರೀಶ್‌ಬಾಬು, ಮಾರುತಿ ಭಂಡಾರಿ, ರವಿಶಂಖರ್, ಸಿಆರ್‌ಪಿ ನಾಗರಾಜ್, ಎಸ್‌ಡಿಎಂಸಿ ಅಧ್ಯಕ್ಷ ವೀರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಾರುತೇಶ್, ತಾಲೂಕು ಪೌಢಶಾಲಾ ಸಹಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ತಿಪ್ಪೆಸ್ವಾಮಿ, ಮುಖ್ಯ ಶಿಕ್ಷಕ ಜಕಣಚಾರಿ, ಇತರ, ಶಿಕ್ಷಕರು ಮಕ್ಕಳು ಹಾಜರಿದ್ದರು

Namma Challakere Local News
error: Content is protected !!