ನಾಯಕನಹಟ್ಟಿ:: ನಾಯಕನಹಟ್ಟಿ ಸಮೀಪದ ಹಿರೇಕೆರೆ ಕಾವಲಿನಲ್ಲಿ ಬುಡಕಟ್ಟು ಜನರ ಆರಾಧ್ಯ ದೈವ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಶ್ರೀ ಕಾವಲು ಚೌಡೇಶ್ವರಿ ದೇವಸ್ಥಾನದಲ್ಲಿ ಬೆಳಗಿನದಲ್ಲಿ ಭಕ್ತರು ಧ್ವಜ ಹಾಗೂ ನಾನಾ ಬಣ್ಣಗಳ ಹೂಗಳಿಂದ ರಥವನ್ನು ವಿಶೇಷವಾಗಿ ಅಲಂಕರಿಸಿದ್ದರು.
ಶ್ರೀ ಕಾವಲು ಚೌಡೇಶ್ವರಿ ದೇವಿಯ ಮುಖ್ಯ ರಸ್ತೆಯಲ್ಲಿ ನಡೆದ ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿನ ಭಕ್ತರು ಭಾಗವಹಿಸಿ ಭಕ್ತಿ ಸಮರ್ಪಿಸಿದರು. ಭರತ ಸಂಚರಿಸುವ ದಾರಿ ಉದ್ದಕ್ಕೂ ಭಕ್ತರು ಬಾಳೆಹಣ್ಣು ಮಂಡಕ್ಕಿ ಎರಚುತ್ತಿದ್ದರು.
ಸುತ್ತಮುತ್ತಲ ಗ್ರಾಮಗಳ ಆರಾಧ್ಯ ದೇವತೆಯಾಗಿದ್ದಾಳೆ ಹಲವು ಪವಾಡ ಹಾಗೂ ಮಹಿಮೆಗಳ ಮೂಲಕ ಪ್ರಸಿದ್ಧಿ ಪಡೆದಿರುವ ಶ್ರೀ ಕಾವಲು ಚೌಡೇಶ್ವರಿ ದೇವಿಯ ಜಾತ್ರಾ ಸಂದರ್ಭದಲ್ಲಿ ಬುಡಕಟ್ಟು ಸಂಸ್ಕೃತಿ ಆಚಾರಗಳು ಅನಾವರಣಗೊಂಡವು.
ಶ್ರೀ ಚೌಡೇಶ್ವರಿಯ ರಥೋತ್ಸವಕ್ಕೆ ಎತ್ತಿನಹಟ್ಟಿ ಗೌಡರ ಮನೆಯಿಂದ ಬಲಿಯನ್ನ ತರಲಾಯಿತು ಹಾಗೂ ಕಡಬನಕಟ್ಟೆ ಗೊಲ್ಲರಹಟ್ಟಿ ಇಂದ ಕಾಸು ಮೀಸಲು ಮೊಸರು ಕುಂಭ ಜಿನಿಗೆಹಾಲು ತಂದು ದೇವರಿಗೆ ರಥಕ್ಕೆ ಹಾಗೂ ಪಾದುಗಟ್ಟೆ ಬಳಿ ಎಡೆ ಹಾಕಿದರು.
ಜಾನಪದ ವಾದ್ಯಗಳು ಮತ್ತು ಪಂಜು ನಂದಿಕೋಲು ಮೆರವಣಿಗೆ ನಡೆಯಿತು.
ಇನ್ನೂರಥೋತ್ಸವಕ್ಕೆ ಮೊದಲು ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು. ಗೌಡಗೆರೆ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಗಿಣಿಯರ್ ತಿಪ್ಪೇಶ್ ಅವರು ₹ 71 ಸಾವಿರಕ್ಕೆ ಹರಾಜಿನಲ್ಲಿ ಮುಕ್ತಿ ಬಾವುಟವನ್ನು ಪಡೆದುಕೊಂಡರು.
ನಂತರ ಮಹಾಮಂಗಳಾರತಿ ಮಾಡಿ ರಥೋತ್ಸವಕ್ಕೆ ಶಾಸಕ ಹಾಗೂ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ. ರಘುಮೂರ್ತಿ ಚಾಲನೆ ನೀಡಿದರು.
ಇದೆ ಸಂದರ್ಭದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ, ಪತ್ನಿ ಗಾಯಿತ್ರಮ್ಮ ರಘುಮೂರ್ತಿ, ಪುತ್ರಿ ಸುಚಿತ್ರ ,ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಾಟೀಲ್ ಜಿ ಎಂ ತಿಪ್ಪೇಸ್ವಾಮಿ ಎತ್ತನಹಟ್ಟಿ ಗೌಡ್ರು, ಪುತ್ರ ದೇವರಾಜ್, ನಿಕಟ ಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ, ಶ್ರೀ ಕಾವಲು ಚೌಡೇಶ್ವರಿ ದೇವಿ ಸಮಿತಿ ಕಾರ್ಯದರ್ಶಿ ಎಂವೈಟಿ ಸ್ವಾಮಿ, ಟಿ ಬಸಪ್ಪ ನಾಯಕ ,ನಲಗೇತನಹಟ್ಟಿ ಜಿ ವೈ ತಿಪ್ಪೇಸ್ವಾಮಿ, ಪಿಎಸ್ಐ ದೇವರಾಜ್, ಹಾಗೂ ಸಿಬ್ಬಂದಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಗ್ರಾಮಸ್ಥರು ಭಕ್ತಾದಿಗಳು ಇದ್ದರು