ಚಳ್ಳಕೆರೆ: ಲೋಕ ಕಲ್ಯಾರ್ಣಾಥವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ್ ಸ್ವಾಮಿಗೆ ಸನ್ನಿಧಿಗೆ ಪಾದಯಾತ್ರೆ ಮಾಡುವ ಮೂಲಕ ಚಳ್ಳಕೆರೆ ತಾಲ್ಲೂಕು, ಪರುಶುರಾಂಪುರ ಹೋಬಳಿ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸುವರು.
ಶ್ರೀ ಮಂಜುನಾಥಸ್ವಾಮಿ ಪಾದಯಾತ್ರಿಗಳ ಸೇವಾ ಸಮಿತಿ ವತಿಯಿಂದ 14ನೇ ವರ್ಷದ ಪಾದಯಾತ್ರೆಯನ್ನು ಗುರುಗಳಾದ ಶ್ರೀ ಗುರು ವೀರಣ್ಣ ಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಂಡ ಈಪಾದಯಾತ್ರೆಗೆ ಯಾದವ ಗುರು ಪೀಠದ ಬಸವಯಾದವಾನಂದಬಸ್ವಾಮಿಜೀ, ಹಾಗೂ ಶ್ರೀ ಸತ್ ಉಪಾಸಿ ಮಲ್ಲಪ್ಪ ಸ್ವಾಮೀಜಿ ಇವರ ಆರ್ಶಿವಾದದೊಂದಿಗೆ ಪಾದಯಾತ್ರೆ ಹೊಗಲಿದ್ದೆವೆ ಎನ್ನುತ್ತಾರೆ ಗುರು ವೀರಣ್ಣ ಸ್ವಾಮಿಗಳು.
ಪ್ರತಿ ವರ್ಷದಂತೆ ಈ ವರ್ಷವೂ ಮಾ.1 ತಾರೀಕಿನಿಂದ
ಮಾ.7 ರವರೆಗೆ ಚಳ್ಳಕೆರೆ ತಾಲೂಕಿನ ವಿವಿಧ ಗ್ರಾಮಗಳಿಂದ ಭಕ್ತಾಧಿಗಳು ವಿವಿಧ ನಗರಗಳ ಮಾರ್ಗವಾಗಿ ಧರ್ಮಸ್ಥಳಕ್ಕೆ ತಲುಪಲಿದ್ದಾರೆ.
ಪಾಲ್ಗೊಳ್ಳುವ ಆಸಕ್ತ ಭಕ್ತರು ಕಾಶಿ ಪಾದಯಾತ್ರಿಗಳಾದ ಈ.ಈರಣ್ಣ
(9480208255), ಎಸ್.ವಿ.ಚಿದಾನಂದ (9448001583) , ಸಿ.ಉಮೇಶ್ (9663824155)ಇವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎನ್ನಲಾಗಿದೆ.