ಚಳ್ಳಕೆರೆ: 16ನೇ ಶತಮಾನದಲ್ಲಿ ಜನಿಸಿ ಶುಭದತ್ತ ಎಂಬ ಹೆಸರಿನಿಂದ ಸರ್ವಜ್ಞ ಎಂಬ ಕಾವ್ಯನಾಮದಿಂದ ಅನೇಕ ತ್ರಿಪದಿಗಳನ್ನು ರಚಿಸಿ ಮಹಾನ್ ಮಾನವತಿಯಾಗಿದ್ದಾರೆ ಎಂದು ತಹಶೀಲ್ದಾರ್ ರೆಹಾನ್ ಪಾಷ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಆಯೋಜಿಸಿದ್ದ 504ನೇ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ 16ನೇ ಶತಮಾನದಲ್ಲಿ ಜನಿಸಿ ಶುಭದತ್ತ ಎಂಬ ಹೆಸರಿನಿಂದ ಸರ್ವಜ್ಞ ಎಂಬ ಕಾವ್ಯನಾಮದಿಂದ ಅನೇಕ ತ್ರಿಪದಿಗಳನ್ನು ರಚಿಸಿ ತ್ರಿಪದಿ ಕವಿ ಎಂದು ಹೆಸರು ಗಳಿಸಿ ಯಾವುದೇ ಒಂದು ಜಾತಿಗೆ ಸೀಮಿತವಾಗದ ಸಾಹಿತ್ಯವನ್ನು ರಚಿಸಿ ಮನುಕುಲವನ್ನು ಎಚ್ಚರಗೊಳಿಸಿದ ಅದ್ಭುತ ಕವಿಯಾಗಿದ್ದಾರೆ ದಾರ್ಶನಿಕರು ಬೋಧಿಸಿರುವ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳದೆ ಅಡ್ಡ ದಾರಿಯಲ್ಲಿ ನಡೆಯುತ್ತಿದ್ದೇವೆ, ಸರ್ವಜ್ಞ ರಚಿಸಿದ ಸಾವಿರಾರು ತ್ರಿಪದಿಗಳಲ್ಲಿ ಮೌಲ್ಯಗಳ ಆಧಾರಿತ ಅಮೂಲ್ಯ ಸಾಹಿತ್ಯವನ್ನು ನೀಡಿ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತ ಗೊಳಿಸಿದ ಎನ್ನಲಾಗಿದೆ.
ಇದು ಮಾನವ ಕುಲಕ್ಕೆ ಇಂದು ಮಾರಕವಾಗುತ್ತಿದೆ ಕುಂಬಾರ ಸಮುದಾಯವು ಕುಂಬಾರಿಕೆ ವೃತ್ತಿಯನ್ನು ಮಾಡುತ್ತಿದ್ದು ಆಧುನಿಕ ಭರಾಟೆಯಲ್ಲಿ ಅದು ನಶಿಸಿ ಹೋಗುತ್ತಿದೆ ಆದ್ದರಿಂದ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಹೊರಬೇಕಾಗಿದೆ ಶಿಕ್ಷಣವೇ ಎಲ್ಲಾ ಸಮಾಜದ ಏಳಿಗೆಗೆ ಮೂಲವಾಗಿದೆ ಸರ್ವಜ್ಞನ ತ್ರಿಪದಿಗಳಲ್ಲಿನ ಅಂಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಸಹಬಾಳ್ವೆಯಿಂದ ಬದುಕುವ ಆಶಯವನ್ನು ಹೊಂದಬೇಕಾಗಿದೆ ಎಂದು ತಿಳಿಸಿದರು.

ಕುಂಬಾರ ಸಮಾಜದ ಮುಖಂಡ ಗೋವಿಂದರಾಜು ಮಾತನಾಡಿ ಸರ್ವಜ್ಞನು ಹೇಳಿರುವಂತೆ ಮೂಢನಂಬಿಕೆಗಳಿAದ ನಾವು ಹೊರಬಂದು ಮುಂದಿನ ಪೀಳಿಗೆಗೆ ಸರ್ವಜ್ಞನ ವಚನಗಳನ್ನು ಬೋಧಿಸಿ ಅದರಲ್ಲಿನ ಮೌಲ್ಯವನ್ನು ಅಳವಡಿಸುವ ಕಾರ್ಯವಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಕುಂಬಾರ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ ಪರಿಶಿಷ್ಟ ವರ್ಗಗಳ ಅಧಿಕಾರಿ ಶಿವರಾಜ್ ಬಿಸಿಎಂ ಇಲಾಖೆ ಅಧಿಕಾರಿ ಲೀಲಾವತಿ ಕೆಟಿ ಶ್ರೀನಿವಾಸ್ ಮೂರ್ತಿ ಎಚ್ ತಿಪ್ಪೇಸ್ವಾಮಿ ಮಂಜುನಾಥ ಸಣ್ಣಪ್ಪ ತಾಲೂಕು ಕಚೇರಿ ಸಿಬ್ಬಂದಿ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Namma Challakere Local News
error: Content is protected !!