ಸಮೀಪದ ನಾಗಗೊಂಡನಹಳ್ಳಿ ಗ್ರಾಮದ ಬಳಿಯ ವೇದಾವತಿ ನದಿಯ ದಡದಲ್ಲಿನ ಶ್ರೀ ಚೆಲುಮೆರುದ್ರಸ್ವಾಮಿಯ ಮಠದಲ್ಲಿ ಸೋಮವಾರ ಸಂಜೆ ಸ್ವಾಮಿಯ ಹೂವಿನ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು
ವೇದಾವತಿ ನದಿ ತೀರದಲ್ಲಿ ಚಿಲುಮೇ ತೋಡಿದ ಭಕ್ತರು ಸ್ವಾಮಿಯ ಮೂರ್ತಿಗಳನ್ನು ತೊಳೆದು ಗಂಗಾಪೂಜೆ ಕೈಗೊಂಡು ಹಣ್ಣು ಕಾಯಿ ಕರ್ಪೂರಗಳಿಂದ ಪೂಜಿಸಿದರು
ಸ್ವಾಮಿಯ ಮಠದ ಭಕ್ತರು ಮತ್ತು ಹರವಿಗೊಂಡನಹಳ್ಳಿಯ ಗ್ರಾಮಸ್ಥರು ಬೆಳಗ್ಗೆ ಸ್ವಾಮಿಯ ಗದ್ದುಗೆಯ ಬಳಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಕೈಗೊಂಡು ಮಂಗಳವಾರ ಸಂಜೆ ಹೂವಿನ ಅಡ್ಡಪಲ್ಲಕ್ಕಿ ಉತ್ಸವಕ್ಕೆ ವಿವಿಧ ಜಾತಿಯ ಹೂವು ಹಾರಗಳಿಂದ ಸಾರೋಟನ್ನು ಅಲಂಕರಿಸಿ ಅಲಂಕೃತಗೊAಡ ಸ್ವಾಮಿಯ ಉತ್ಸವ ಮೂರ್ತಿಯನ್ನು ಸಾರೋಟಿನಲ್ಲಿ ಪ್ರತಿಷ್ಟಾಪಿಸಿ ವಿವಿಧ ಜನಪದ ಕಲಾತಂಡಗಳೊAದಿಗೆ ಪಲ್ಲಕ್ಕಿ ಉತ್ಸವ ನಡೆಸಿದರು
ಹೂವಿನ ಪಲ್ಲಕ್ಕಿ ಉತ್ಸವದ ಅಂಗವಾಗಿ ಸಂಜೆ ಸುತ್ತೇಳು ಹಳ್ಳಿಗಳ ಭಕ್ತರು ರೈತರು ಎತ್ತಿನ ಗಾಡಿಗಳನ್ನು ಅಲಂಕರಿಸಿಕೊAಡು ಗುಗ್ಗರಿಬಂಡಿಗಳನ್ನು ಸಿಂಗರಿಸಿಕೊAಡು ಗದ್ದುಗೆಯ ಸುತ್ತ ಪ್ರದಕ್ಷಿಣೆ ಹಾಕಿಸಿ ನೆರೆದಿದ್ದ ಭಕ್ತರಿಗೆ ಪಾನಕ-ಗುಗ್ಗರಿ ವಿತರಿಸಿ ಜಾತ್ರೆಯಲ್ಲಿ ಪಾಲ್ಗೊಂಡವರಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು
ಸಂದರ್ಭದಲ್ಲಿ ಪ್ರಭುಸ್ವಾಮೀಜಿ, ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಓಬಣ್ಣ, ಕಾರ್ಯದರ್ಶಿ ಜೆ ಅಶೋಕ, ಕೋಶಾದ್ಯಕ್ಷ ತಿಪ್ಪೇಸ್ವಾಮಿ, ಖಜಾಂಚಿ ರವಿಚಂದ್ರ, ಸಂತೋಷ್, ಸಂಪತ್ಕುಮಾರ, ರಂಜನ್, ವೆಂಕಟೇಶ, ರಾಜಶೇಖರಪ್ಪ, ಎನ್ ಪಿ ಮಂಜುನಾಥ, ತಿರುಮಲೇಶ, ರಾಜಣ್ಣ, ಮಂಜಣ್ಣ ಮಂಜುನಾಥ, ಚಲ್ಮೇಶ, ಮಹಾಂತೇಶ, ಈರಣ್ಣ, ಶಶಿಧರ, ರಾಜಣ್ಣ, ಲೋಕೇಶರೆಡ್ಡಿ, ಕ್ಯಾತಣ್ಣ, ಚಿತ್ತಪ್ಪ, ತಿಮ್ಮಯ್ಯ, ಸಿದ್ದೇಶ, ಹರವಿಗೊಂಡನಹಳ್ಳಿ ಸೇರಿದಂತೆ ಸುತ್ತೇಳು ಹಳ್ಳಿಗಳ ಭಕ್ತರು ಗ್ರಾಮಸ್ಥರು ಇದ್ದರು