ಚಳ್ಳಕೆರೆ ನ್ಯೂಸ್ : ಸರಕಾರಿ ಕಾಲೇಜು ಗೇಟ್ ನಲ್ಲಿ ಖಾಸಗಿ ಕಾಲೇಜ್ ಪ್ಲೆಕ್ಸ್ ದರ್ಬಾರ್
ಹೌದು ಚಳ್ಳಕೆರೆ ನಗರದ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು ಮುಖ್ಯ ಧ್ವಾರ ಮುಂಬಾಗದಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಫಲಿತಾಂಶ ಹಾಕಿ ಸರಕಾರಿ ಕಾಲೇಜ್ ಮರ್ಯಾದೆಯನ್ನು ನಾಚಿಸುವಂತೆ ಮಾಡಿದೆ. ಇನ್ನೂ ಸರಕಾರಿ ಕಾಲೇಜು ಧ್ವಾರ ಮುಂಬಾಗಿಲಿನಲ್ಲಿ ಹಾಕಿದ ಈ ಪ್ಲೆಕ್ಸ್ ವಿದ್ಯುತ್ ಕಂಬಕ್ಕೆ ಕಟ್ಟಿರುವುದು ಅಲ್ಲದೆ ಸರಕಾರಿ ಕಾಲೇಜಿನ ಮಕ್ಕಳ ಮನಸ್ಥಿತಿ ಹರಿಯುವಂತೆ ಮಾಡಿದೆ.
ಇನ್ನೂ ಇದು ಯಾವುದೇ ನಮಗೆ ಗೊತ್ತೆಯಿಲ್ಲ ಎಂಬುವAತೆ ಸರಕಾರಿ ಕಾಲೇಜುನ ಪ್ರಾಶುಂಪಾಲರ ನಿಲುವಿಗೆ ಸಾರ್ವಜನಿಕರ ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರಿ ಕಾಲೇಜ್ ಆವರಣ , ಹಾಗೂ ಮುಖ್ಯ ದ್ವಾರದಲ್ಲಿ ಖಾಸಗಿ ಪ್ಲೆಕ್ಸ್ ಬ್ಯಾನರ್ ಹಾಕಲು ಇವರೆ ಕುಮ್ಮಕ್ಕು ಕೊಟ್ಟಿದ್ದಾರೆ ಎನ್ನುವಂತಿದೆ…
ಇದರಿAದ ಬಡಮಕ್ಮಳ ವಿದ್ಯಾರ್ಜನೆ ಹೇಗೆ ಸಾಧ್ಯ, ಖಾಸಗಿ ಕಾಲೇಜು ಪ್ಲೆಕ್ಸ್ ಬದಲು ಸರಕಾರಿ ಕಾಲೇಜು ಮಕ್ಕಳ ಬ್ಯಾನರ್ ಪ್ಲೆಕ್ಸ್ ಹಾಕಿ ಅದರ ಬದಲಾಗಿ ಇತರ ಬೇರೆ ಖಾಸಗಿ ಕಾಲೇಜುಗಳಿಗೆ ಇವರೆ ದಾರಿ ಮಾಡಿಕೊಟ್ಟಿದ್ದಾರೆ ಎಂಬ ಅನುಮಾನ ಪೋಷಕರಲ್ಲಿ ಕಾಡುತ್ತಿದೆ. ಇವರ ಅದೀನದಲ್ಲಿ ಇರುವ ಸರಕಾರಿ ಜಾಗದಲ್ಲಿ ಬೇರೆಯಾವುದೋಂದು ಖಾಸಗಿ ಕಾಲೇಜುಗಳ ಪ್ಲೆಕ್ಸ್ ಬ್ಯಾನರ್ ಕಟ್ಟುವುದು ಅಪರಾಧ ಇದರಿಂದ ಮುಂಜಾಗ್ರತಾ ಕ್ರಮವಾಗಿ ಕಾಲೇಜು ಶಿಕ್ಷಣ ಇಲಾಖೆ ಯಾವ ನಿಲುವು ತಾಳುವುದು ಕಾದು ನೋಡಬೇಕಿದೆ. ಸರಕಾರಿ ಕಾಲೇಜು ಆಡಳಿತ ಮಂಡಳಿಯೇ ನಮ್ಮ ಕಾಲೇಜುಗಿಂತ ಖಾಸಗಿ ಕಾಲೇಜು ಸೂಕ್ತ ಎಂಬ ನಿಲುವು ತಾಳುತ್ತದೆ ಎನ್ನಲಾಗಿದೆ.