ಚಳ್ಳಕೆರೆ ನ್ಯೂಸ್ : ರೈತರ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಕೇಳಲು ಬಿಡದೆ ಇರುವ ಕೇಂದ್ರ ಸರಕಾರ ರೈತರ ನಿಲುವುವನ್ನು ಪರೀಕ್ಷೆ ಮಾಡುತ್ತದೆ.
ಇದರಿಂದ ಮುಂಬರುವ ದಿನಗಳಲ್ಲಿ ಎರಡು ಸರಕಾರಗಳಿಗೆ ದೇಶದ ಜನತೆ ತಕ್ಕಪಾಠ ಕಲಿಸುತ್ತಾರೆ ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಚಿಕ್ಕಣ್ಣ ಕಿಡಿಕಾರಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಈಡೀ ರೈತ ಸಂಕಲು ಬರಗಾಲದಲ್ಲಿ ಕಾಲ ಕಳೆಯುತ್ತಿದೆ ಆದರೆ ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆಯಿಲ್ಲ. ಪರಿಹಾರ ಇಲ್ಲ. ಮತ್ತು ಬೆಳೆ ವಿಮೆ ಇಲ್ಲ ಈಗೇ ರೈತ ಸಾಲು ಸಾಲು ಸಂಕಷ್ಟದಲ್ಲಿ ಹೋರಾಟ ನಡೆಸುತ್ತಿದ್ದಾನೆ ಇದನ್ನು ಖಂಡಿಸಿ ದೆಹಲಿಗೆ ಮುತ್ತಿಗೆ ಹಾಕುವ ರೈತರನ್ನು ಅರ್ಧ ದಾರಿಯಲ್ಲಿ ತಡೆಯೊಡ್ಡುವ ಪೊಲಿಸ್ ರ ನಿಲುವು ಖಂಡನೀಯ ಎಂದು ಆರೋಪಿಸಿದರು.
ಇನ್ನೂ ರೈತ ಸಂಘದ ಉಪಾಧ್ಯಕ್ಷ ಜಪಂಣ್ಣ ಮಾತನಾಡಿ, ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಯಾವುದೇ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಪರಿಹಾರ ಹೊದಗಿಸುತ್ತಿಲ್ಲ. ಕೇವಲ ರಾಜಕೀಯ ಕೆಸರೆಚಾಟದಲ್ಲಿ ಕಾಲ ಕಳೆಯುತ್ತಾವೆ , ರೈತನಿಗೆ ಮಳೆ ಯಿಲ್ಲದೆ ಬೆಳೆ ಕೈಕೊಟ್ಟು ಪರಿಹಾರದ ಹಣಕ್ಕೆ ಕಾಯುತ್ತಿದ್ದಾನೆ ಇನ್ನು ಬೆಳೆ ವಿಮೆ ಇಲ್ಲ. ಈಗೇ ಬರಗಾಲ ಘೋಷಣೆ ಮಾಡಿದ್ದರೂ ಕೂಡ ಸರಿಯಾದ ರೀತಿಯಲ್ಲಿ ಗೋವುಗಳಿಗೆ ಮೆವು ನೀರು ಸಿಗುತ್ತಿಲ್ಲ. ಇದರಿಂದ ರೈತನ ಸ್ಥಿತಿ ಚಿಂತಜನಕವಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ರೈತ ಮುಖಂಡ ತಿಮ್ಮಣ್ಣ, ಪ್ರಕಾಶ್, ಪರಮೇಶ್ವರ, ನಾಗೇಂದ್ರ, ಖಾದರ್, ಮಾರುತಿ, ಅಣ್ಣಪ್ಪ ಗೌಡ, ಪ್ರಜಾಕ್, ರಾಘವೇಂದ್ರ, ನವೀನ್ ಗೌಡ, ಗೆಡ್ಡೆ ತಿಮ್ಮಣ್ಣ ಇತರರು ಇದ್ದರು…