ಚಳ್ಳಕೆರೆ ನ್ಯೂಸ್ : ಪರಿಶಿಷ್ಟರಿಗೆ ಮೀಸಲು ಇಟ್ಟ ಅನುದಾನವನ್ನು ಅನ್ಯಕಾರ್ಯಗಳಿಗೆ ಬಳಸದಂತೆ ಹಾಗು ಸರಿಯಾದ ರೀತಿಯಲ್ಲಿ ಅದೇ ವರ್ಷ ಅನುದಾನ ಬಳಕೆ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯವತಿಯಿಂದ ಇಂದು ತಹಶಿಲ್ದಾರ್ ಮೂಲಕ ಮುಖ್ಯ ಮಂತ್ರಿ
ಸಿದ್ದರಾಮಯ್ಯನವರಿಗೆ ಪತ್ರ ರವಾನೆ ಮಾಡಿದರು.
ಇನ್ನೂ ಜಿಲ್ಲಾ ಪ್ರಧಾನ ಸಂಚಾಲಕ ಹೆಗ್ಗೆರೆ ಮಂಜುನಾಥ್ ಮಾಧ್ಯಮದೊಂದಿಗೆ ಮಾತನಾಡಿ, ದಲಿತರಿಗೆ ಹಾಗೂ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸಬಾರದು, ಇನ್ನೂ ಎಸ್ ಪಿಟಿಸಿಎಲ್ ಕಾಯ್ದೆ ಒಳಪಡುವ ಕೆಲವು ಪ್ರಕರಣಗಳನ್ನು ಗಂಭೀರ ವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಮನವಿ ಪತ್ರದಲ್ಲಿ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಗಳು
- ಎಸ್.ಸಿ/ಎಸ್.ಟಿ ಮತ್ತು ಟಿ.ಎಸ್.ಪಿ ಕಾಯ್ದೆಯಲ್ಲಿ ರಾಜ್ಯ
ಸರ್ಕಾರವು ರದ್ದುಗೊಳಿಸಿದ್ದು, ಈ ಕುರಿತು ಕೂಡಲೇ ಸರ್ಕಾರಿ ಆದೇಶ
ಹೊರಡಿಸಬೇಕು. ಸದರಿ ಕಲಂನಿಂದಾಗಿ ಕಳೆದ ದಶಕಗಳಲ್ಲಿ ಸುಮಾರು 70
ಸಾವಿರ ಕೋಟಿ ದುರ್ಬಳಕೆಯಾಗಿದ್ದು, ಸದರಿ ಅನುದಾನವನ್ನು ರಾಜ್ಯ
ಸರ್ಕಾರವು ಪರಿಶಿಷ್ಠರಿಗೆ ಮರು ಮಂಜೂರಾತಿ ಮಾಡಬೇಕು ಸದರಿ ಅನುದಾನವನ್ನು ಪರಿಶಿಷ್ಟರನ್ನು
ಹೊರತುಪಡಿಸಿ ಅನ್ಯ ಜಾತಿಗಳು ಮತ್ತು ಅನ್ಯ ಧರ್ಮದವರಿಗೆ ದುರ್ಬಳಕೆ
ಮಂಜೂರಾತಿ ಮಾಡಬಾರದು. - ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್
ಇದರಿಂದಾಗಿ ಸಾವಿರಾರು
ವ್ಯತಿರಿಕ್ತವಾಗಿ ತೀರ್ಪುಗಳನ್ನು ನೀಡಿದ್ದು,
ಪರಿಶಿಷ್ಟರು ಸಾವಿರಾರು ಎಕರೆ ಭೂಮಿಯನ್ನು ರಾಜ್ಯದಲ್ಲಿ ಕಳೆದುಕೊಂಡು
ಭೂಹೀನರಾಗಿದ್ದಾರೆ.
ಕೇಂದ್ರ ಸರ್ಕಾರದ ಹಕ್ಕೊತ್ತಾಯಗಳು
- ಕೇಂದ್ರ ಸರ್ಕಾರವು ಸಂಗ್ರಹಿಸಿದ ತೆರಿಗೆ ಪೈಕಿ ರಾಜ್ಯಕ್ಕೆ ನ್ಯಾಯಬದ್ಧವಾಗಿ ಅನುದಾನದ
ನೀಡಬೇಕು ಎಂದರು
ಇದೇ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕರಾದ ಹೆಗ್ಗೆರೆ
ಮಂಜುನಾಥ್, ಜಿಲ್ಲಾ ಸಂಘಟನಾ ಸಂಚಾಲಕ
ಮಾರಪ್ಪ.ಡಿ.ಎನ್.ಬಿ,ಹೆಗ್ಗೆರೆ ಮಂಜುನಾಥ್ ,ಜಿಲ್ಲಾ ಪ್ರದಾನ ಸಂಚಾಲಕ
ಸೂರನಹಳ್ಳಿ ಮಂಜುನಾಥ್, ನಾಗರಾಜ್ ಜಡೆ ಕುಂಟೆ, ಗೊಂವಿದಂಪ್ಪ, ಗೊರ್ಲಕಟ್ಟೆ ಇಂದ್ರೇಶ್, ತಿಪ್ಪೇಸ್ವಾಮಿ ನನ್ನಿವಾಳ, ತಿಪ್ಪೇಸ್ವಾಮಿ, ರುದ್ರಮುನಿ, ವಿಜಯ್ ಕುಮಾರ್, ಮೋಹನ್ , ಗಜೇಂದ್ರ,
ರಾಜ್ಯ ಕಲಾಮಂಡಳಿ ಪ್ರಧಾನ ಸಂಚಾಲಕರಾದ
ಕೆ.ಟಿ.ಮುತ್ತುರಾಜ್,
ಜಿಲ್ಲಾ ಪ್ರಧಾನ ಸಂಚಾಲಕರು ತಾಲ್ಲೂಕು ಪ್ರಧಾನ ಸಂಚಾಲಕರು, ಇತರರು ಇದ್ದರು.