ಚಳ್ಳಕೆರೆ ನ್ಯೂಸ್: ಅಂಬೇಡ್ಕರ್ ನಗರದ ಮಹಿಳೆಯರು ತಾಲ್ಲೂಕು ಕಛೇರಿಗೆ ಅಗಮಿಸಿ ಅಂಬೇಡ್ಕರ್ ನ್ಯಾಯ ಬೆಲೆ ಅಂಗಡಿಯಲ್ಲಿ
ಸೊಸೈಟಿಯು ಪಡಿತರ ಅಕ್ಕಿ ವಿತರಣೆ ಕೇವಲ ಎರಡು ದಿನ ರೇಷನ್ ಕೊಟ್ಟು ತದನಂತರ ಬಾಗಿಲು ಹಾಕುತ್ತಾರೆ ಇದರಿಂದ ಇಲ್ಲಿನ ಬಡಜನರು ದಿನದ ಕೂಲಿ ಬಿಟ್ಟು ಕಾಯುವಂತಾಗಿದೆ.
ಇನ್ನೂ ತಡವಾದರೆ ಪಡಿತರ ಅಕ್ಕಿ ಇಲ್ಲ ಎಂಬ ಸಬೂಬು ಹೇಳುತ್ತಾರೆ ಇದನ್ನೆ ನಂಬಿ ಜೀವನ ನಡೆಸುವ ನಮ್ಮ ಗತಿಯೇನು ಸ್ವಾಮಿ ಎಂದು ತಹಶಿಲ್ದಾರ್ ರೇಹಾನ್ ಪಾಷಗೆ ಮನವಿ ಮಾಡಿದರು.
ನಗರದ ನೂರಾರು ಮಹಿಳೆಯರು, ಇಂದು ತಹಶಿಲ್ದಾರ್ ಬಳಿ ತಮ್ಮ ಅಳಲನ್ನು ತೋಡಿಕೊಂಡರು ಇನ್ನೂ ಪ್ರತಿ ಪಡಿತರ ವಿತರಿಸುವಾಗ ಇಪ್ಪತ್ತು ರೂಪಾಯಿ ಹಣ ಕೇಳುತ್ತಾರೆ ಇದರಿಂದ ಸರಕಾರ ಉಚಿತ ಅಕ್ಕಿ ವಿತರಣೆ ಯಾವ ಅರ್ಥಕ್ಕೆ ಎಂದು ಆಕ್ರೋಶಗೊಂಡರು.
ಇನ್ನೂ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ತಹಶಿಲ್ದಾರ್ ರೇಹಾನ್ ಪಾಷ, ಅಂಬೇಡ್ಕರ್ ನ್ಯಾಯ ಬೆಲೆ ಅಂಗಡಿ ಮಾಲೀಕರನ್ನು ಕರೆಸಿ ಹಣ ಕೇಳುವುದು ಹಾಗೂ ತಿಂಗಳ ಪೂರ್ತಿ ನಿರಂತರವಾಗಿ ಪಡಿತರ ವಿತರಣೆ ಮಾಡಬೇಕು ಬಡವರ ಬಗ್ಗೆ ಕಾಳಜಿ ಇರಬೇಕು, ಕೇವಲ ನೆಪ ಮಾತ್ರಕ್ಕೆ ಏಜೆನ್ಸಿ ನಡೆಸಬಾರದು..
ಇದರಿಂದ ಹಸಿದ ಹೊಟ್ಟೆಯಲ್ಲಿ ದಿನದೂಡುವ ಎಷ್ಟೋ ಮಂದಿ ನಮಗೆ ಗೊತ್ತಿಲ್ಲದೆ ಜೀವನ ನಡೆಸುತ್ತಾರೆ ಸರಕಾರ ಕೊಟ್ಟ ಉಚಿತ ಅಕ್ಕಿ ಭಾಗ್ಯ ಸರಿಯಾಗಿ ವಿತರಣೆ ಹಾಗಬೇಕು ಇಲ್ಲವಾದರೆ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ತಿಳಿ ಹೇಳಿದರು.
ಇದೇ ಸಂಧರ್ಭದಲ್ಲಿ ದಲಿತ ಮುಖಂಡ ಭೀಮಣ್ಣ, ಚೆನ್ನಿಗರಾಮಯ್ಯ ಇತರರು ಹಾಜರಿದ್ದರು.