ಚಳ್ಳಕೆರೆ ನ್ಯೂಸ್ :
ಕಾಯಕ ಶಿವಶರಣ ವಚನಕಾರ ಸಾಲಿನಲ್ಲಿ ಬರುವ ಐದು ಜನರ ಶರಣರು ಈಗೀನ ಕಾಲದ ಬದುಕಿನಲ್ಲಿ ಹಾಸು ಹೊಕ್ಕಿದ್ದಾರೆ ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು.
ಅವರು ನಗರದ ತಾಲ್ಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಸಂತ ಶರಣರ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ದಲಿತ ಸಾಹಿತ್ಯದ ಮೂಲಕ ನಾಡಿನ ಜನತೆಯ ಹಿತ ದೃಷ್ಟಿಯಿಂದ ತಮ್ಮದೆ ಆದ ವೃತ್ತಿಜೀವನದ ಮೂಲಕ ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡುವ ಮೂಲಕ ತಮ್ಮದೇ ಆದ ರೀತಿಯಲ್ಲಿ ವಾಸ್ತವಿಕತೆಯನ್ನು ತಮ್ಮ ಬರವಣಿಗೆಯಲ್ಲಿ ದಲಿತ ಸಾಹಿತ್ಯದ ಮೂಲಕ ಬಿತ್ತರಿಸಿದ್ದಾರೆ ಎಂದರು.
ಇನ್ನೂ ದಲಿತ ಸಾಹಿತಿ ಚಿಂತಕ ದ್ಯಾವರನಹಳ್ಳಿ ಆನಂದ ಉಪನ್ಯಾಸ ನೀಡಿದ ಅವರು, ಅಂದಿನ ಕಾಲದಲ್ಲಿ ಡೊಂಗಿ ತನವನ್ನು ಬದಿಗೊತ್ತಿ ತಮ್ಮದೇ ಆದ ವೃತ್ತಿಪರ ಜೀವನದಲ್ಲಿ ಅವರು ಸಮಾಜದ ಕಳಕಳಿಯ ಮೂಲಕ ದಲಿತರ ಬವಣಿಗಳನ್ನು ಸಾಹಿತ್ಯದ ಮೂಲಕ ಪ್ರಪಂಚದಲ್ಲಿ ಬಿತ್ತರಿಸುವ ಮೂಲಕ ಉಳ್ಳವರು, ಇಲ್ಲದವರ ಕಷ್ಟ ಸುಖಗಳ ಬಗ್ಗೆ ಅಂದಿನ ಕಾಲದಲ್ಲಿ ಸವಿ ವಿಸ್ತಾರವಾದ ರೀತಿಯಲ್ಲಿ ಅಂದಿನ ವಚನ ದಲಿತ ಸಾಹಿತ್ಯವನ್ನು ಬಿತ್ತರಿಸಿದ್ದಾರೆ ಎಂದರು.
ಇದೇ ಸಂಧರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ, ನಗರಸಭೆ ಪೌರಾಯುಕ್ತ ಸಿ ಚಂದ್ರಪ್ಪ, ಬೆಸ್ಕಾಂ ಇಲಾಖೆ ಎಇಇ ರಾಜು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್, ದಿವಕಾರ್, ಬಿಸಿಎಂ ಇಲಾಖೆ ಅಧಿಕಾರಿ, ದೊಡ್ಡೆರಿ ಶ್ರೀನಿವಾಸ್, ದಲಿತ ಮುಖಂಡ ಮಾಜಿ ನಗರಸಭೆ ಉಪಾಧ್ಯಕ್ಷ ಟಿ.ವಿಜಯ್ ಕುಮಾರ್, ಚೆನ್ನಿಗರಾಮಯ್ಯ, ಭಿಮಣ್ಣ, ದ್ಯಾವರನಹಳ್ಳಿ ಆನಂದ್, ಹಳೆನಗರದ ವೀರಭದ್ರ, ಹೊನ್ನುರಾಸ್ವಾಮಿ, ಮೈತ್ರಿ ದ್ಯಾಮಯ್ಯ, ಪ್ರಕಾಶ್, ಮಂಜುನಾಥ್, ಜಯಣ್ಣ, ಹಾಗೂ ಹಲವು ಮಹಿಳೆಯರು, ಸಾರ್ವಜನಿಕರು, ಭಾಗವಹಿಸಿದ್ದರು.