ನಾಯಕನಹಟ್ಟಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಪ.ಪಂ.ಸದಸ್ಯೆ ಪಾಪಮ್ಮ ಉದ್ಘಾಟಿಸಿದರು.
ನಾಯಕನಹಟ್ಟಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಆಕರ್ಷಕ ನೃತ್ಯ ಕಲರವ.

: ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೋಧನಾ ಕೊಠಡಿ, ಆಟದ ಮೈದಾನ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿದ್ದು, ಕ್ಷೇತ್ರದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಹಟ್ಟಿಮಲ್ಲಪ್ಪನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ(ಎತ್ತಿನಹಟ್ಟಿಗೌಡ್ರು) ಹೇಳಿದರು.
ನಾಯಕನಹಟ್ಟಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1933ರಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಆರಂಭವಾಯಿತು. ಹಾಗಾಗಿ ನಾಯಕನಹಟ್ಟಿ ಹೋಬಳಿಯಲ್ಲಿ ಅತ್ಯಂತ ಹಳೆಯ ಶಾಲೆಯಿದಾಗಿದೆ. ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ನಾಡಿನಾಧ್ಯಂತ ಉನ್ನತ ಹುದ್ದೆಗಳನ್ನು ಪಡೆದು ಸೇವೆಸಲ್ಲಿಸಿದ್ದಾರೆ. ಇಂತಹ ಹಳೆಯ ಶಾಲೆಯಲ್ಲಿ ಇಂದಿಗೂ 380ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿದ್ದಾರೆ. ಆದರೆ ಶಾಲೆಯಲ್ಲಿ ಸುಸಜ್ಜಿತವಾದ ಬೋಧನಾ ಕೊಠಡಿಗಳಿಲ್ಲ. ಇಷ್ಟು ಸಂಖ್ಯೆಯ ಮಕ್ಕಳಿಗೆ ಆಟವಾಡಲು ಆಟದ ಮೈದಾನದ ಕೊರತೆ ಇದೆ. ಆದರೂ ಇಲ್ಲಿನ ಶಿಕ್ಷಕರು ಎಲ್ಲ ಮೂಲಸೌಕರ್ಯಗಳ ಕೊರತೆಯನ್ನು ಎದುರಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹಾಗಾಗಿ ಈ ಭಾಗದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶಾಲೆಯ ಅಗತ್ಯತೆಗಳನ್ನು ಈಡೇರಿಸಿ ಶೈಕ್ಷಣಿಕ ಪ್ರಗತಿ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಪ.ಪಂ.ಸದಸ್ಯ ಜೆ.ಆರ್.ರವಿಕುಮಾರ್, ಮಾಜಿ ಸದಸ್ಯ ಎನ್.ಐ.ಎಂ.ಡಿ.ಮನ್ಸೂರ್, ಎಸ್‌ಡಿಎಂಸಿ ಅಧ್ಯಕ್ಷೆ ಸುಮಲತಾ, ಮುಖ್ಯಶಿಕ್ಷಕ ಎನ್.ಇಂದಿರಮ್ಮ, ಶಿಕ್ಷಕಿ ಬಿ.ಎಂ.ಶಿಲ್ಪ ಮಾತನಾಡಿದರು.
ಇದೇವೇಳೆ ಪ.ಪಂ.ಸದಸ್ಯರಾದ ಪಾಪಮ್ಮ, ಬಿ.ವಿನುತಾ, ಟಿ.ಮಂಜುಳ, ಸುನೀತ, ಮಹೇಶ್ವರಿ, ಸರ್ವಮಂಗಳ, ಎಸ್‌ಡಿಎಂಸಿ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಸದಸ್ಯರಾದ ರಾಜಣ್ಣ, ಪಾಪಣ್ಣ, ಸಮೂಹ ಸಂಪನ್ಮೂಲ ಅಧಿಕಾರಿ ಈರಸ್ವಾಮಿ, ಈಶ್ವರಪ್ಪ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಸಣ್ಣಸೂರಮ್ಮ, ಶಾಂತಕುಮಾರಿ, ಆರ್.ಸದಾಶಿವಯ್ಯ ಅವರೂ ಇದ್ದರು.

About The Author

Namma Challakere Local News
error: Content is protected !!