ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯ ಹರಿಕಾರನೆಂದು ಬಿಂಬಿತವಾದ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಮೂರು ಬಾರಿ ಗೆಲುವು ಸಾಧಿಸಿದ ಶಾಸಕ ಟಿ.ರಘುಮೂರ್ತಿ ರವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗೂ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ನೇತೃತ್ವದ ಸರಕಾರದಲ್ಲಿ ರಾಜ್ಯದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ರಾಜ್ಯಧ್ಯಾಕ್ಷರಾಗಿ ಆಯ್ಕೆ ಮಾಡಿದ ಹಿನ್ನಲೆಯಲ್ಲಿ ಇಂದು ಬೆಂಗಳೂರಿನ ಸಣ್ಣ ಕೈಗಾರಿಕಾ ಕಛೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ ಸಾವಿರಾರು ಕೈ ಕಾರ್ಯಕರ್ತ‌ರು ಹಾಗೂ ಮುಖಂಡರ ಸಮ್ಮುಖದಲ್ಲಿ ಜರುಗಿತು‌

ಇನ್ನೂ ಬಯಲು ಸೀಮೆಯ ನೆಚ್ಚಿನ ಶಾಸಕನಿಗೆ ಒಲಿದ ಬಂದ ಸಣ್ಣ ಕೈಗಾರಿಕಾ ‌ನಿಮಗಮ‌ ಮಂಡಲಿಗೆ ಬಯಲು ಸಿಮೇಯ ಜನತೆ ಸಾಗರೋಪದಿಯಲ್ಲಿ ಮುಂಜಾನೆಯೆ ಕಛೇರಿ ಬಳಿ ದಾವಿಸಿದ್ದರು‌

ಇನ್ನೂ ನೂತನ ಅಧ್ಯಕ್ಷರ ಪದಗ್ರಹಣಕ್ಕೆ ರಾಜ್ಯದ ಹಲವು ಸಚಿವರು,ಶಾಸಕರು, ಹಾಗೂ ವಿಶೇಷವಾಗಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಮಂತ್ರಿ ಡಿ.ಸುಧಾಕರ್, ಹಾಗು ಚಳ್ಳಕೆರೆ , ಪರುಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ನಗರಸಭೆ ಸದಸ್ಯರು, ಮುಖಂಡರು ಮಹಿಳಾ‌ ಕಾರ್ಯಕರ್ತೆಯರು, ಮತದಾರರು ಈ ಕಾರ್ಯಕ್ರಮಕ್ಕೆ‌ಸಾಕ್ಷಿಯಾದರು.

ಇನ್ನೂ ನೂತನ ಪದಗ್ರಹಣ ಕಾರ್ಯಕ್ರಮಕ್ಕೆ ಶಾಸಕ ಟಿ.ರಘುಮೂರ್ತಿಯ ಕುಟುಂಬದ ಸದಸ್ಯರು ಹಾಜರಿರುವುದು ವಿಶೇಷವಾಗಿ ಕಂಡು ಬಂದಿತು

About The Author

Namma Challakere Local News
error: Content is protected !!