ನಾಯಕನಹಟ್ಟಿ:: ಮಧ್ಯ ಕರ್ನಾಟಕದ ಜೀವನದಿ ಬಯಲು ಸೀಮೆಯ ಪ್ರದೇಶಗಳಿಗೆ ನೀರು ಉಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷದಿಂದಾಗಿ ಕುಂಟುತ್ತಾ ಸಾಗಿದ್ದು ಭದ್ರಾ ಮೇಲ್ದಂಡೆ ಕಾಮಗಾರಿ ಆರಂಭವಾಗಿ 25 ವರ್ಷಗಳು ಕಳೆಯುತ್ತಾ ಬಂದಿದ್ದರು ಇನ್ನೂ ಪೂರ್ಣಗೊಂಡಿಲ್ಲ
ಫೆ13ರಂದು ಜಿಲ್ಲೆಯ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಹಾಗೂ ನಾಯಕನಹಟ್ಟಿ ಹೋಬಳಿ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿ ವಿವಿಧ ಸಂಘ ಸಂಸ್ಥೆಗಳು ನಾಯಕನಹಟ್ಟಿ ಬಂದ್ ಗೆ ಪಟ್ಟಣ ಪಂಚಾಯಿತಿಯ ಸರ್ವ ಸದಸ್ಯರು ಬೆಂಬಲವನ್ನು ನೀಡುವುದಾಗಿ ಪಟ್ಟಣ ಪಂಚಾಯಿತಿಯ ಸದಸ್ಯ ಎನ್ ಮಹಾಂತಣ್ಣ ತಿಳಿಸಿದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಅಬಕಾರಿ ತಿಪ್ಪೇಸ್ವಾಮಿ,ಸದಸ್ಯ ಸೈಯದ್ ಅನ್ವರ್ ,
ಕೆ.ಪಿ. ತಿಪ್ಪೇಸ್ವಾಮಿ, ಓಬಯ್ಯ ದಾಸ್, ಮಂಜುಳಾ ಶ್ರೀಕಾಂತ್, ಸುನಿತಾ ಮುದಿಯಪ್ಪ, ಮಹೇಶ್ವರಿ ,ಸರ್ವಮಂಗಳಮ್ಮ, ಪಾಪಮ್ಮ, ಗುರುಶಾಂತಮ್ಮ, ಬಸಮ್ಮ ಮಂಜುನಾಥ್, ನಾಯಕರೆಹಟ್ಟಿ ನೀರಾವರಿ ಮತ್ತು ಸಾಮಾಜಿಕ ಹೋರಾಟ ಸಮಿತಿಯ ಹೋಬಳಿ ಅಧ್ಯಕ್ಷ ಜಿ ಬಿ ಮುದಿಯಪ್ಪ, ಕಾರ್ಯಧ್ಯಕ್ಷ ಎಸ್‌ಟಿ ಬೋರ್ ಸ್ವಾಮಿ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ, ಏಜೆಂಟ್ರು ಪಾಲಯ್ಯ, ಶ್ರೀಕಾಂತ್, ದಯಾನಂದ, ಇದ್ದರು

About The Author

Namma Challakere Local News
error: Content is protected !!