ಚಳ್ಳಕೆರೆ ನ್ಯೂಸ್ :
ನಾಡಿನಾದ್ಯಂತ ಬರಗಾಲದ ಚಾಯೆ ಇರುವಾಗ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಬೋಮ್ಮದೇವರ ಹಟ್ಟಿಯಲ್ಲಿರುವ ವಾಲ್ಮೀಕಿನಾಯಕ ಬುಡಕಟ್ಟು ಸಮುದಾಯದ ಬುಡಕಟ್ಟು ಸಂಸ್ಕೃತಿಯ ಶೀಮಂತಿಕೆಯನ್ನು ಜೀವಂತವಾಗಿ ಉಳಿಸಿ ಕೊಂಡಿರುವ ಬೊಮ್ಮದೇವರ ಹಟ್ಟಿಯಲ್ಲಿನ ನೂರಾರು ದೇವರಹಸುಗಳು ವರುವು ಕಾವುಲಿನಲ್ಲಿ ಹುಲ್ಲು ನೀರಿಗಾಗಿ ಪರಿತಪಿಸುವುದು ನಮ್ಮ ಗಮನಕ್ಕೆ ಬಂದಿರುವುದರಿಂದ ಮತ್ತು ಶ್ರೀ ಶ್ರೀ ವಾಲ್ಮೀಕಿ ಪುಣ್ಯಾನಂದ ಪುರಿ ಸ್ವಾಮೀಜಿ ಯವರ ಸ್ಮರಣಾರ್ಥ ದಿನಾಂಕ 9/02/2024 ರ ಶುಕ್ರವಾರ ಬೆಳಿಗ್ಗೆ 10 ಘಂಟೆ ಸುಮಾರಿಗೆ ಈ ಮೇಲ್ಕಂಡ ನಮ್ಮಗಳ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಬೆಂಗಳೂರು ಹಾಗೂ ಇತರ ಸಂಘ ಸಂಸ್ಥೆಗಳ ಸಹಯೊಂದಿಗೆ ಬೊಮ್ಮದೇವರ ಹಟ್ಟಿಯಲ್ಲಿನ ನೂರಾರು ದೇವರಹಸುಗಳಿಗೆ ಪೌಷ್ಠಕಾಂಶದ ಆಹಾರಗಳಾದ ಬೂಸ ಗಾಣದ ಇಂಡಿ ಮೇವು ವಿತರಣಾ ಕಾರ್ಯಕ್ರಮ ಹಮ್ಮಿ ಕೊಂಡಿದ್ದು ತಾವು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೆಕೆಂದು ತಮ್ಮಲ್ಲಿ ಕೋರುತ್ತೇವೆ
ವಂದನೆಗಳೋಂದಿಗೆ
ದಿನಾಂಕ-7/02/2024 ಅಧ್ಯಕ್ಷರು
ಸ್ಥಳ –ಚಳ್ಳಕೆರೆ ಸಿರಿಗೆರೆ ತಿಪ್ಪೇಶ್
ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಬೆಂಗಳೂರು