ಚಳ್ಳಕೆರೆ: ತಾಲೂಕಿನ ಸೂಜಿ ಮಲ್ಲೇಶ್ವರ ನಗರದ ನಿವಾಸಿಯಾದ ಎಂ ರೇವಣ್ಣ ಎಂಬ ವ್ಯಕ್ತಿ ಎಂ ಮಂಜುನಾಥ ಎಂಬ ವ್ಯಕ್ತಿಯ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ನಗರದ ಪಿಡಬ್ಲ್ಯೂಡಿ ಕಚೇರಿ ಮುಂದೆ ಗುತ್ತಿಗೆದಾರ ಮಂಜುನಾಥ ತನ್ನಿಂದ ಪಡೆದ 2,30,151 ರೂಗಳ ಸಾಲವನ್ನು ಮರುಪಾವತಿಸುವಂತೆ ಕೇಳಿದ್ದಕ್ಕಾಗಿ ಎಂ ರೇವಣ್ಣ ಮಂಜುನಾಥರ ಮೇಲೆ ಗಲಾಟೆ ಮಾಡಿ ಎದೆ ಮೇಲಿನ ಅಂಗಿಯನ್ನು ಹಿಡಿದು ನಾನು ನಿನ್ನ ಹತ್ತಿರ ಯಾವ ಸಾಲವನ್ನು ಮಾಡಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದಲ್ಲದೆ ಕೆನ್ನೆಗೆ ಹೊಡೆದು ರಸ್ತೆಯ ಬದಿಯಲ್ಲಿದ್ದ ಸೈಸುಗಲ್ಲನ್ನು ಎತ್ತಿ ಹಾಕುವ ಪ್ರಯತ್ನ ಮಾಡಿದಾಗ ಮಂಜುನಾಥರವರ ಜೊತೆಯಲ್ಲಿದ್ದ ಸ್ನೇಹಿತ ರಂಗಸ್ವಾಮಿ ಪಕ್ಕಕ್ಕೆ ಎಳೆದುಕೊಂಡಿದ್ದರಿಂದ ಮಂಜುನಾಥರವರು ಪ್ರಾಣಪಾಯದಿಂದ ಪಾರಾಗಿದ್ದಾರೆ ಹಲ್ಲೆಗೊಳಗಾಗಿದ್ದ ಮಂಜುನಾಥ ರವರು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ನಗರ ಠಾಣೆಯಲ್ಲಿ ಜಾತಿ ನಿಂದನೆ ಹಾಗೂ ಹಲ್ಲೆ ಪ್ರಕರಣವನ್ನು ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪತ್ರಿಕೆಯೊಂದಿಗೆ ತನ್ನ ಅಳಲನ್ನು ತೋಡಿಕೊಂಡ ದೂರುದಾರ ಮಂಜುನಾಥ್ ರವರು ನಾನು ಪಿ ಡಬ್ಲ್ಯು ಡಿ ಗುತ್ತಿಗೆದಾರನಾಗಿ ಜೀವನ ನಡೆಸುತ್ತಿದ್ದು 2015ರಲ್ಲಿ ಇದೇ ವೃತ್ತಿಯಿಂದ ಜೀವನ ಮಾಡುತ್ತಿದ್ದ ಎಂ ರೇವಣ್ಣ ಪರಿಚಯವಾದ ಬಳಿಕ ಆತ್ಮೀಯತೆಯ ಸ್ನೇಹ ಬೆಳೆದು ಕೆಲ ಕೌಟುಂಬಿಕ ಕಾರಣಗಳನ್ನು ನನ್ನ ಮುಂದಿಟ್ಟು ಹಣದ ಸಹಾಯವನ್ನು ಪಡೆದಿದ್ದನು ಈ ಮೊತ್ತ 2, 30,151 ರೂ ಗಳಿಗೆ ತಲುಪಿದ್ದು ಸಾಲ ಮರುಪಾವತಿಸದೆ ಎರಡು ಮೂರು ವರ್ಷಗಳಿಂದ ದೂರವಾಣಿ ಸಂಪರ್ಕ ಸಂಪರ್ಕಕ್ಕೂ ಸಿಗದೆ ತಲೆಮರಿಸಿಕೊಂಡು ಓಡಾಡುತ್ತಿದ್ದ ಹೀಗಾಗಿ ಕಳೆದ ಭಾನುವಾರ ನಗರ ಪೊಲೀಸ್ ಠಾಣೆಯ ವೃತ ನಿರೀಕ್ಷಕರಿಗೆ ಹಣ ವಾಪಸ್ ಕೊಡಿಸುವಂತೆ ಕೋರಿ ಎಂ ರೇವಣ್ಣನ ವಿರುದ್ಧ ದೂರು ನೀಡಿದ್ದೆ ಆದರೆ ಪೊಲೀಸ್ ಠಾಣೆಯಿಂದ ದೂರವಾಣಿ ಕರೆ ಹೋದ ಬಳಿಕ ಇಲ್ಲಸಲ್ಲದ ಸಬೂಬುಗಳನ್ನು ಹೇಳಿ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದ ಕಳೆದ ಮಂಗಳವಾರ ಮಧ್ಯಾಹ್ನ ಪಿಡಬ್ಲ್ಯೂಡಿ ಕಚೇರಿ ಮುಂದೆ ಸಿಕ್ಕಾಗ ಹಣ ವಾಪಸ್ ನೀಡುವಂತೆ ಕೇಳಿದಾಗ ನನ್ನ ಮೇಲೆ ಸೈಜುಗಲ್ಲಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಲ್ಲದೆ ಜಾತಿ ನಿಂದನೆಯನ್ನು ಮಾಡಿ ನನಗೆ ನೋವುಂಟು ಮಾಡಿದ್ದಾರೆ ಎಂದು ತಿಳಿಸಿದರು.
ಈ ಘಟನೆ ಕುರಿತು ಬಿಜೆಪಿ ಎಸ್ ಸಿ ಮೋರ್ಚ ತಾಲೂಕು ಅಧ್ಯಕ್ಷ ಆರ್ ಕಾಂತರಾಜ್ ಮಾತನಾಡಿ ಎಂ ರೇವಣ್ಣ ಎಂಬ ವ್ಯಕ್ತಿ ಮಂಜುನಾಥ್ ರವರಿಂದ ಸಾಲ ಪಡೆದಿದ್ದು ಅದನ್ನು ಕೇಳಿದಾಗ ಮಂಜುನಾಥ್ ರವರ ಮೇಲೆ ಜಾತಿ ನಿಂದನೆ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲಗೆ ಯತ್ನ ನಡೆಸಿದ್ದಾನೆ ಅಲ್ಲದೆ ಮಾದಿಗ ಸಮುದಾಯಕ್ಕೆ ಅವಮಾನ ಮಾಡಿದ್ದು ಖಂಡನಾರ್ಹವಾಗಿದೆ ಕೂಡಲೇ ಈತನನ್ನು ಬಂಧಿಸಿ ಮಂಜುನಾಥ್ ರವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.