ಚಳ್ಳಕೆರೆ : ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್.ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ರೂಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ರೇಹಾನ ಪಾಷ ಹೇಳಿದರು.
ಅವರು ನಗರದ ನಗರಸಭೆ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತ್, ಸಮಾಜ ಕಲ್ಯಾಣ ಇಲಾಖೆ, ಮತ್ತು ನಗರಸಭೆ ಸಹಯೋಗದಲ್ಲಿ ಸಂವಿಧಾನ ಜಾಗೃತ ಸ್ತಬ್ಧ ಚಿತ್ರ ರಥಯಾತ್ರೆಯು ನಗರದ ಪ್ರಮುಖ ರಾಜ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮೂಲಕ ನಗರದ ನೆಹರು ವೃತ್ತ, ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತದ ಮೂಲಕ ಜಗಜೀವನ್ ರಾಮ್ ವೃತ್ತದ ಮೂಲಕ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ತಬ್ಧ ಚಿತ್ರ ರಥಯಾತ್ರೆಯಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸ್ವಾಗತ ಕೋರಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ರಚಿಸಿದಂತ ಸಂವಿಧಾನದ ಹಕ್ಕನ್ನು ದೇಶದ ಪ್ರತಿಯೊಬ್ಬ ನಾಗರಿಕರು ಅದರ ಫಲವನ್ನು ಅನುಭವಿಸುತ್ತಿದ್ದಾರೆ ಎಂದರು.
ಉಪನ್ಯಾಸಕರಾದ ಎಸ್ ಕೆ.ಪೋಥೆ ಮಾತನಾಡಿ, ಸಂವಿಧಾನ ಎಂಬುದು ಯಾರೋ ಒಬ್ಬರಿಗೆ ಮಾತ್ರ ಬರೆದ ಸಂವಿಧಾನ ಅಲ್ಲ, ಇಂದು ಪ್ರತಿಯೊಬ್ಬರು ಕೂಡ ಸಂವಿಧಾನ ದಡಿಯಲ್ಲಿ ಜೀವಿಸುತ್ತಿದ್ದಾರೆ, ಆದ್ದರಿಂದ ಪ್ರತಿ ಹಳ್ಳಿ ಹಳ್ಳಿಗೂ ಸಂವಿಧಾನ ಜಾಗೃತಿ ಜನರಿಗೆ ಅರಿವೂ ಅತೀ ಮುಖ್ಯ, ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನ ಹಾಸುಹೊಕ್ಕಾಗಿದೆ ಎಂದರು.
ಅರುಣ್ ಜೋಳದ್ ಮಾತನಾಡಿ, ಈ ದೇಶದಲ್ಲಿ ಮೂಲಭೂತ ಹಕ್ಕುಗಳು ಕೂಡ ಅವಶ್ಯಕವಾಗಿದೆ, ಸಂವಿಧಾನ ರಚನೆ ಮಾಡುವ ಸಂದರ್ಭದಲ್ಲಿ ಭಾರತ ಸಂವಿಧಾನದಲ್ಲಿ ದಲಿತ ವೃದ್ಧಗಳ ಹಿತಾಸಕ್ತಿ ಮತ್ತು ಮಾನವ ಹಕ್ಕುಗಳು ಕಾಪಾಡಬೇಕು, ಜಗತ್ತಿನ ಪರಿಸ್ಥಿತಿಯ ಆರ್ಥಿಕ ಅಥವಾ ಆ ದೇಶದಲ್ಲಿ ಜಗತ್ತಿನಲ್ಲಿ ಗೊತ್ತಾಗುವಂತ್ತೆ ಎಂಭುದು ನಿಲುವಾಗಿತ್ತು ಎಂದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ತಹಶಿಲ್ದಾರ್ ರೇಹಾನ್ ಪಾಷ, ಉಪನ್ಯಾಸಕ ಆನಂದಕುಮಾರ್, ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂಜೆ.ರಾಘವೇAದ್ರ, ದಲಿತ ಮುಖಂಡ ಕೆ.ವಿ.ವೀರಭದ್ರಯ್ಯ, ವಕೀಕರಾದ ಪಾಲಯ್ಯ, ಸಿದ್ದರಾಜ್, ಬಾಸ್ಕರ್, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಬಿಇಓ.ಕೆ.ಎಸ್.ಸುರೇಶ್, ಲೇಖಕರು ಚಿಂತಕರಾದ ಮೈತ್ರಿದ್ಯಾಮಯ್ಯ, ಬನಶ್ರೀ ವೃದ್ದಾಶ್ರಮದ ಅಧ್ಯಕ್ಷೆ ಮಂಜುಳಾ, ಸಮಾಜ ಕಲ್ಯಾಣ ಇಲಾಕೆ ಸಹಾಯಕ ಅಧಿಕಾರಿ ಮಂಜುನಾಥ್, ಡಿ.ಚಂದ್ರು, ನಗರಸಭೆ ಮಾಜಿ ಉಪಾಧ್ಯಕ್ಷ,ಡಿಎಸ್ಎಸ್ ತಾಲೂಕು ಸಂಚಾಲಕ ಟಿ.ವಿಜಯ್ ಕುಮಾರ್, ಉಮೇಶ್ ಚಂದ್ರ ಬ್ಯಾನರ್ಜಿ, ನನ್ನಿವಾಳ ನಾಗರಾಜ್, ಹಳೆನಗರದ ವೆಂಕಟೇಶ್, ವೀರಭದ್ರಿ, ಹಾಗೂ ವಿವಿಧ ದಲಿತ ಒಕ್ಕೂಟದ ಮುಖಂಡರು, ಸಾರ್ವಜನಿಕರು, ಅಧಿಕಾರಿಗಳು ಶಾಲಾ ಮಕ್ಕಳು ಇದ್ದರು.