ನಾಯಕನಹಟ್ಟಿ:: ಬರತೀರದ ಬಗ್ಗೆ ಸಂವಿಧಾನವನ್ನು ರಕ್ಷಿಸುವುದು ಮತ್ತು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಗ್ರಾಮ ಪಂಚಾಯತಿಯ ಅಧ್ಯಕ್ಷ ಪಾಪಮ್ಮ ಆನಂದಪ್ಪ ಹೇಳಿದ್ದಾರೆ.
ಗುರುವಾರ ಸಮೀಪದ ಅಬ್ಬೇನಹಳ್ಳಿ ಗ್ರಾಮಕ್ಕೆ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ ಆಗಮಿಸಿದ ವೇಳೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಪುಷ್ಪ ಮಾಲೆ ಹಾಕಿ ಮಾತನಾಡಿ ಮಹಿಳೆಯರಿಗೆ ಸಂವಿಧಾನದ ಅಡಿಯಲ್ಲಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಾರ್ದಿಕವಾಗಿ ಮಹಿಳೆಯರಿಗೆ ವಿಶೇಷ ಸ್ಥಾನಮಾನದ ಕಲ್ಪಿಸಿದ ಕೀರ್ತಿ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಸಲ್ಲಿಸುತ್ತದೆ.
ನಮ್ಮ ಭಾರತ ದೇಶಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದರು.
ಇದೆ ವೇಳೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೋಹನ್ ದಾಸ್ ರವರು ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಿದರು.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಮಂಜುನಾಥ್, ಸಹಾಯಕ ನಿರ್ದೇಶಕ ಮಧ್ಯಾಹ್ನ ಉಪಹಾರ ಯೋಜನೆಯ ಎಂ. ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ ಅನಿತಾಮ್ಮ ಜಿ ಎಂ.ಜಯಣ್ಣ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ. ಶಂಕರಸ್ವಾಮಿ,, ಸದಸ್ಯರಾದ ರಾಧಮ್ಮ ಎ ಪಿ ರೇವಣ್ಣ, ಪಡ್ಲ ಬೋರಯ್ಯ, ಶೇಖರ್ ಗೌಡ, ಪಿ ಒ ಸಣೋಬಯ್ಯ,ಬಿ ಸಣ್ಣ ಪಾಲಯ್ಯ, ಸುಮಿತ್ರಮ್ಮ, ಬಸಮ್ಮ, ಅಬ್ಬೇನಹಳ್ಳಿ ಗ್ರಾಮದ ಯುವ ಮುಖಂಡರಾದ ಎ ಪಿ ರೇವಣ್ಣ, ಎಂ ಎಸ್ ಪ್ರಕಾಶ್, ಕೊರಡಿಹಳ್ಳಿ ಹೊಸೂರು ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎನ್ ಮಹಾಂತೇಶ್, ಗ್ರಾಮ ಪಂಚಾಯತಿ ಕಾರ್ಯದರ್ಶಿ ಗುರುಸ್ವಾಮಿ, ಕಂಪ್ಯೂಟರ್ ಆಪರೇಟರ್ ಎನ್ ಪಿ ಈಶ್ವರಪ್ಪ, ಬಿಲ್ ಕಲೆಕ್ಟರಾದ ಚಂದ್ರಶೇಖರ್, ಮತ್ತು ಎಸ್ .ಶಿವತಿಪ್ಪೇಸ್ವಾಮಿ, ಸೇರಿದಂತೆ ಪ್ರೌಢಶಾಲಾ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಗ್ರಾಮಸ್ಥರು ಇದ್ದರು