ನಾಯಕನಹಟ್ಟಿ:: ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಕಳೆದ ಹತ್ತು ವರ್ಷದ ಯೋಜನೆಗಳು ಮುಂಬರುವ ಲೋಕಸಭಾ ಚುನಾವಣೆಯ ಗೆಲುವಿಗೆ ವರದಾನವಾಗಲಿದೆ ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಸೋಮವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗ್ರಾಮ ಚಲೋ ಅಭಿಯಾನದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಹಗಲು ಇರುಳು ಎನ್ನದೆ ಶ್ರಮವಹಿಸಿ ಬಡವರ ಮತ್ತು ನೋಂದವರ ಕೂಲಿ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಅವರ ಕಾರ್ಯ ಸಾಧನೆಯನ್ನು ಮೆಚ್ಚಿ ಇಡೀ ವಿಶ್ವವೇ ಕೊಂಡಾಡುತ್ತಿದೆ ಅವರ ಕೈ ಬಲಪಡಿಸಲು ಕೇಂದ್ರದಲ್ಲಿ ಅಧಿಕಾರದ ಚಿಕ್ಕಾಣೆ ಹಿಡಿಯಲು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಶ್ರಮವಹಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಗೆಲುವಿಗೆ ಪಣತೊಟ್ಟು ಕೆಲಸ ಮಾಡಬೇಕು ಎಂದರು.

ಮಂಡಲ ಅಧ್ಯಕ್ಷ ಈ ರಾಮರೆಡ್ಡಿ ಮಾತನಾಡಿ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ದೇಶವಿದೇಶಗಳನ್ನು ಸುತ್ತಿ ಇಡೀ ಭಾರತ ದೇಶದ ಜಲ್ವತ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. 2024ರ ಲೋಕಸಭಾ ಚುನಾವಣೆ ಪ್ರಯುಕ್ತ ಗ್ರಾಮ ಚಲೋ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸುಮಾರು 90 ಪ್ರವಾಸಿ ಕಾರ್ಯಕರ್ತರ ನೇಮಿಸಿ ಪ್ರತಿ ಮನೆಮನೆಗೂ ಭೇಟಿ ನೀಡಿ ಕೇಂದ್ರ ಸರ್ಕಾರದ ಯೋಜನೆ ಸಾಧನೆಗಳು ತಿಳಿಸಿ ಹೇಳುವ ಕಾರ್ಯ ಮಾಡಬೇಕಾಗಿದೆ ಮತ್ತು ಮೊಳಕಾಲ್ಮೂರು ಕ್ಷೇತ್ರದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಮತ್ತೊಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಗೆಲುವಿಗೆ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಈ ರಾಮರೆಡ್ಡಿ, ಎಸ್ ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಪಿ ಶಿವಣ್ಣ, ಎಂವೈಟಿ ಸ್ವಾಮಿ, ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನಗಾನಹಳ್ಳಿ ಮಲ್ಲೇಶ್, ಬೆಂಕಿ ಗೋವಿಂದಪ್ಪ, ಮಂಡಲ ಕಾರ್ಯದರ್ಶಿ ಎಚ್‌ ವಿ ಪ್ರಕಾಶ್, ಬಿ ತಿಪ್ಪೇಶ್ , ನಗರ ಘಟಕ ಅಧ್ಯಕ್ಷ ಎನ್. ಮಹಾಂತಣ್ಣ, ಟಿ ಪಿ ಹಳ್ಳಿ ತಿಪ್ಪೇಸ್ವಾಮಿ, ಕನ್ನಯ್ಯ, ದಳವಾಯಿ, ಜಾಗನೂರಹಟ್ಟಿ ಬಿ ಟಿ ಪ್ರಕಾಶ್, ಮಲ್ಲೂರಹಳ್ಳಿ ಮಲ್ಲಯ್ಯ, ಗುಂಡಪ್ಪ, ಓಬಯ್ಯನಹಟ್ಟಿ ಕಾಮರಾಜ್ ,ನಾಗಭೂಷಣ್,
ಕೆ. ಬಿ .ನಗರ ಬಡಗಿ ತಿಪ್ಪೇಸ್ವಾಮಿ, ಚನ್ನಬಸಯ್ಯನಹಟ್ಟಿ ಬಿ .ಓ. ಬೋಸಯ್ಯ, ಜಿ.ಕೆ .ಹಳ್ಳಿ ಬೂಟ್ ತಿಪ್ಪೇಸ್ವಾಮಿ, ಇನ್ನೂ ಮುಂತಾದವರು ಇದ್ದರು.

About The Author

Namma Challakere Local News
error: Content is protected !!