ರಾಮಾಂಜನೇಯ.ಕೆ ಚನ್ನಗಾನಹಳ್ಳಿ
ಚಳ್ಳಕೆರೆ : ರಾಜ್ಯದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ಹಾಗೂ ಬರ ಅಧ್ಯಯನದ ಹಿನ್ನಲೆಯಲ್ಲಿ ಜಾನುವಾರಗಳ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆಯಲು ಸರ್ಕಾರ ರೂಪಿಸಿದ ಬರ ಅಧ್ಯಯನ ತಂಡ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡಿಸಿ ತಾಲೂಕಿನ ಬರ ಸಮಿಕ್ಷೆ ಮಾಡಿ ಬೇಡಿಕೆಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ ಇನ್ನಲೆಯಲ್ಲಿ ಗೋಶಾಲೆಗಳನ್ನು ತೆರೆದು ಮೇವು ನೀರು ಒದಗಿಸುವುದು ಸರ್ಕಾರದ ಮಹತ್ವದ ಕಾರ್ಯವಾಗಿತ್ತು.
ಆದ್ದರಿಂದ ಜಾನುವಾರುಗಳಿಗೆ ತಾತ್ಕಲಿಕವಾಗಿ ಮೇವು ನೀರು ಹೊದಗಿಸಲು ಪ್ರಾರಂಭಿಕ ಹಂತವಾಗಿ ತಾಲೂಕಿನ ನಾಲ್ಕು ಕಡೆ ಗೋಶಾಲೆಗಳನ್ನು ತೆರೆಯಲು ಸೂಚಿಸಿ ಸರ್ಕಾರ ಆದೇಶ ಹೊರಡಿಸಿದೆ ಅದಕ್ಕೆ ತಕ್ಕಂತೆ ನಾಲ್ಕು ಸ್ಥಳದಲ್ಲಿ ಗೋಶಾಲೆ ತೆರೆಯಲು ಸಿದ್ದತೆ ಮಾಡಲಾಗಿದೆ ಆದರೆ ಜನಪ್ರತಿನಿಧಿಗಳ ದಿನಾಂಕ ನಿಗಧಿಯೋ, ಮೇವಿನ ಕೊರತೆಯೋ ಗೊತ್ತಿಲ್ಲ ಆದರೆ ಆದೇಶ ಬಂದು ಹಲವು ದಿನಗಳು ಆದರೂ ಗೋಶಾಲೆ ತೆರೆಯಲು ಯಾಕೆ ಮೀನಾ ಮೇಷ ಎಂಬುದು ರೈತರ ಆಕ್ರೋಶವಾಗಿದೆ.
ತಾಲೂಕಿನಲ್ಲಿ ಮೂಖ ಪ್ರಾಣಿಗಳ ಆಹಾರಕ್ಕೆ ಮೇವು ಇಲ್ಲವಾಗಿದೆ. ತಾಲೂಕಿನ ನಾಲ್ಕು ಕಡೆಗಳಲ್ಲಿ ಅಧಿಕಾರಿಗಳು ಗೋಶಾಲೆಗೆ ಸ್ಥಳ ಗುರುತಿಸಲಾಗಿದೆ ಎನ್ನಲಾಗಿದೆ. ಚಳ್ಳಕೆರೆ ತಾಲೂಕಿನ ತಳಕು ಹೊಬಳಿಯ ದೊಡ್ಡಉಳ್ಳಾರ್ತಿ ವ್ಯಾಪ್ತಿಯಲ್ಲಿ ಗೋಶಾಲೆ, ನಾಯಕನಹಟ್ಟಿ ಹೋಬಳಿಯ ಹಿರೆಕೆರೆ ಕಾವಲು ಸ್ಥಳದಲ್ಲಿ ಗೋಶಾಲೆ, ಕಸಬಾದ ಅಜ್ಜನಗುಡಿ ಸ್ಥಳದಲ್ಲಿ ಗೋಶಾಲೆ, ಇನ್ನೂ ಪರುಶುರಾಂಪುರ ಹೋಬಳಿಯ ಚೌಳೂರು ಗೇಟ್ ಬಳಿಯಲ್ಲಿ ಮಾತ್ರ ಒಂದು ಗೋಶಾಲೆ ತೆರೆದು ಮೂಖ ಪ್ರಾಣಿಗಳಿಗೆ ಮೇವು ನೀರು ನೀಡುವ ವ್ಯವಸ್ಥೆ ಮಾಡಿದ್ದಾರೆ. ಇನ್ನೂ ಫೆ.3 ರಂದು ಕಸಬಾ ವ್ಯಾಪ್ತಿಯ ಅಜ್ಜನಗುಡಿ ಸ್ಥಳದಲ್ಲಿ ತಾತ್ಕಲಿಕ ಗೋಶಾಲೆ ಪ್ರಾರಂಭ ಮಾಡಲಾಗುತ್ತದೆ ಎಂದು ತಹಶೀಲ್ದಾರ್ ರೇಹಾನ್ ಪಾಷ ಹೇಳಿದ್ದಾರೆ.
ತಾಲೂಕಿನ ರಾಸುಗಳ ಸಂಖ್ಯೆ :
ದನ ಮತ್ತು ಎಮ್ಮೆ ಒಟ್ಟಾರೆ 70ಸಾವಿರ ಇದ್ದರೆ, ಕುರಿ ಹಾಗೂ ಮೇಕೆ 5ಲಕ್ಷದ 30ಸಾವಿರ ಇವೆ, ಇನ್ನೂ ಒಂದು ರಾಸುಗಿ 6 ಕೆಜಿ.ಒಣ ದಿನವೊಂದಕ್ಕೆ ನೀಡಬೇಕು ಬದಲಾಗಿ ಹಸಿಮೇವು 18 ಕೆಜಿ ದಿನವೊಂದಕ್ಕೆ ಬೇಕಾಗುವುದು, ಪ್ರಸ್ತುತ ಒಣ ಮೇವು ಲಭ್ಯವಿರುವುದರಿಂದ ಅದನ್ನೆ ನೀಡಲಾಗುತ್ತದೆ ಎಂದು ಪಶು ಸಹಾಯಕ ನಿದೇರ್ಶಕ ಡಾ.ರೇವಣ್ಣ ಮಾಹಿತಿ ನೀಡಿದ್ದಾರೆ.
ಈಗಾಗಲೇ ಚೌಳೂರು ಗೇಟ್ ಸಮೀಪದ ಗೋಶಾಲೆಗೆ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಮೇವಿನ ವ್ಯವಸ್ಥೆ ಮಾಡಲಾಗಿದೆ, ಇನ್ನೂ ರಾಸುಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯ ಕಲ್ಪಿಸಲಾಗಿದೆ ಇಲ್ಲಿ ಸರಿಸುಮಾರು 2 ರಿಂದ 3 ಸಾವಿರ ಗೋವುಗಳು ತಾತ್ಕಲಿಕವಾಗಿ ತಂಗಬಹುದು ಎನ್ನಲಾಗಿದೆ.
ಮಾಹಿತಿಯೊಂದರ ಪ್ರಕಾರ ಚಳ್ಳಕೆರೆ ತಾಲೂಕಿನಲ್ಲಿ ಸುಮಾರು 2007 ರಿಂದ ಗೋಶಾಲೆ ಪ್ರಾರಂಭ ಮಾಡಲಾಗಿದೆ ಮಧ್ಯಾಂತರದಲ್ಲಿ ಮಳೆ ಬಂದಾಗ ಮೇವು ಸೌಲಭ್ಯ ಇದ್ದಾಗ ಗೋಶಾಲೆ ಸ್ಥಗಿತ ಮಾಡಲಾಗಿತ್ತು ಎನ್ನಲಾಗಿದೆ. ಕರ್ನಾಟಕ ರಾಜ್ಯ ಮೂಲತಃ ಹಿಂದೂಗಳ ಮೂಲ ಕುಲಕಸುಬಾಗಿ ಹೊರಹೊಮ್ಮಿದ ರಾಜ್ಯಾವಾಗಿದೆ. ಹಿಂದಿನ ಕಾಲದಲ್ಲಿ ಹಸುಗಳನ್ನು ದೇವರ ರೂಪದಲ್ಲಿ ಗೋವುಗಳನ್ನು ಪೂಜಿಸುತ್ತಿದ್ದರು. ಆದರೆ ಹಿಂದೆ ಇದ್ದ ಸಮೃದ್ದಿ ಮಳೆ ಬೆಳೆ ಇಲ್ಲದ ಕಾರಣ ಗೋವುಗಳನ್ನು ಪೂಜಿಸುತ್ತಿದ್ದ ಭಾರÀತೀಯರು ಇಂದು ಅನಿರ್ವಾವಾಗಿ ಬಲವಂತಾವಾಗಿ ಖಾಸಯಿಗನೆಗಳಿಗೆ ನೂಕುವುದು ಕಂಡುಬರುತ್ತದೆ.
ತಾಲೂಕಿನಲ್ಲಿ ಸುಮಾರು 45 ವರ್ಷಗಳ ಬಳಿಕ ಬೀಕರ ಬರಗಾಲ ಆವರಿಸಿ ಬಡ ರೈತರ ಹೊಟ್ಟೆಮೇಲೆ ಬಿಸಿಬರೆ ಎಳೆದಂತಿದೆ. ಬರದ ಬಾವಣೆ ಒಂದು ಕಡೆಯಾದರೆ ಬಿರು ಬಿಸಿಲಿನ ತಾಪ ಮತ್ತೊಂದೆಡೆ ಎನ್ನುವಂತೆ ಇಂತಹ ಪರಿಸ್ಥಿಯಲ್ಲಿ ಅನೇಕ ಜನ ಜಾನುವಾರುಗಳ ಪಾಡು ಹೇಳತಿರದು,
ಹೇಳಿಕೆ :
1.ರೈತರ ಕಷ್ಟವನ್ನು ಹರಿತಿರುವೆನು, ಈಗಾಗಲೇ ಸರಕಾರದ ಮಟ್ಟದಲ್ಲಿ ಗೋಶಾಲೆ ತೆರೆಯಲು ಸೂಚಿಸಿ ಆದೇಶ ಮಾಡಿಸಿದೆ, ಅತೀ ತುರ್ತಾಗಿ ಮೊಳಕಾಲ್ಮೂರು ಭಾಗದ ರೈತರ ರಾಸುಗಳಿಗೆ ತಾತ್ಕಲಿಕವಾಗಿ ಕುಡಿಯುವ ನೀರು, ಮೇವು ಹಾಗೂ ನೆರಳಿನ ವ್ಯವಸ್ಥೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಇನ್ನೂ ಕೆಲವೆ ದಿನಗಳಲ್ಲಿ ರೈತರ ರಾಸುಗಳಿಗೆ ತಾತ್ಕಲಿಕ ಗೋಶಾಲೆ ಪ್ರಾರಂಭ ಮಾಡಲಾಗುವುದು.—ಎನ್.ವೈ.ಗೋಪಾಲಕೃಷ್ಣ ಶಾಸಕ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ
2.ಬರಗಾಲ ಎಂದು ಘೋಷಣೆ ಮಾಡಿದ ಸರಕಾರ ಜಾನುವಾರುಗಳ ರಕ್ಷಣೆಗೆಂದು ಹೋಬಳಿಗೊಂದು ಗೋಶಾಲೆ ಮಾಡುವುದಾಗಿ ರೈತರಿಗೆ ಭರವಸೆ ನೀಡಿದ್ದು, ಈಗಾಗಲೆ ಚೌಳೂರು ಬಳಿ ಗೋಶಾಲೆ ಪ್ರಾರಂಭಿಸಿದ್ದು ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಇನ್ನು ಗೋಶಾಲೆ ಪ್ರಾರಂಭಿಸಲು ಮುಂದಾಗುತ್ತಿಲ್ಲ ಇದರಿಂದ ಜಾನುವಾರುಗಳ ರಕ್ಷಣೆಗೆ ರೈತರು ಪರದಾಡುವಂತಾಗಿದೆ ತುರ್ತಾಗಿ ಗೋಶಾಲೆ ತೆರೆಯದಿದ್ದರೆ ತಾಲೂಕು ಕಚೇರಿ ಮುಂದೆ ಜಾನುವಾರುಗಳೊಂದಿಗೆ ಪ್ರತಿಭಟನೆ ಮಾಡಲಾಗುತ್ತದೆ.— ದೊಡ್ಡ ಉಳ್ಳಾರ್ತಿ ಕರಿಯಣ್ಣ ಕಿಸಾನ್ ಸಂಘದ ಅಧ್ಯಕ್ಷ
3,ರೈತರ ರಾಸುಗಳು ಖಾಸಾಯಿ ಖಾನೆಗೆ ಹೋಗುವ ಮುನ್ನವೆ ರಕ್ಷಣೆ ಮಾಡಿ ಗೋವುಗಳು ಸಾಯುವ ಸ್ಥಿತಿಯಲ್ಲಿವೆ, ಕೇವಲ ಆದೇಶದಲ್ಲಿ ಮಾತ್ರ ಗೋಶಾಲೆಗಳು ಇವೆ, ಇನ್ನೂ ರೈತರ ರಾಸುಗಳಿಗೆ ಮೇವು ನೀರು ಕೊಡುವುದು ಯಾವಾಗ, ಇದರ ಬಗ್ಗೆ ಸಂಬAಧಿಸಿದವರು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಗೋಶಾಲೆ ತೆರೆಯಿರಿ. – ಕೆಪಿ.ಭೂತಯ್ಯ ರಾಜ್ಯ ರೈತ ಸಂಘದ ಉಪಾಧ್ಯಕ್ಷ
4.ಚಳ್ಳಕೆರೆ ತಾಲೂಕಿನ ಪರುಶುರಾಂಪುರ ಹೋಬಳಿಯ ಚೌಳೂರು ಗೇಟ್ ಬಳಿಯಲ್ಲಿ ಗೋಶಾಲೆ ತೆರೆಯಲಾಗಿದೆ, ತಳಕು ಹೊಬಳಿಯ ದೊಡ್ಡಉಳ್ಳಾರ್ತಿ, ನಾಯಕನಹಟ್ಟಿ ಹೋಬಳಿಯ ಹಿರೆಕೆರೆ ಕಾವಲಿನಲ್ಲಿ ಗೋಶಾಲೆಗೆ ಸಿದ್ದತೆ ಮಾಡಲಾಗಿದೆ ಹಂತ ಹಂತವಾಗಿ ತೆರೆಯಲಾಗುವುದು ಕಸಬಾದ ಅಜ್ಜನಗುಡಿ, ಈ ಸ್ಥಳಗಳಲ್ಲಿ ಗೋಶಾಲೆ ತೆರೆಯಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಫೆ.3ರಂದು ಗೋಶಾಲೆ ಪ್ರಾರಂಭಿಸಲಾಗುವುದು, ರೈತರು ತಮ್ಮ ರಾಸುಗಳನ್ನು ಗೋಶಾಲೆಯಲ್ಲಿ ಬಿಟ್ಟು ರಕ್ಷಣೆ ಮಾಡಿಕೊಳ್ಳಬಹುವುದು, ಈಗಾಗಲೇ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ಮೇವಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.—ರೇಹಾನ್ ಪಾಷ ತಹಶೀಲ್ದಾರ್ ಚಳ್ಳಕೆರೆ