ನಾಯಕನಹಟ್ಟಿ:: ಪಟ್ಟಣಕ್ಕೆ ಗುರುವಾರ ಸಾಮಾಜಿಕಲ್ಯಾಣ ಇಲಾಖೆಯಿಂದ ಸಂವಿಧಾನ ಜಾಗೃತಿ ಜಾಥಾ ದ ಟ್ಯಾಬ್ಲೋ ಅನ್ನು ನಾಡಕಚೇರಿ ಪಟ್ಟಣ ಪಂಚಾಯತಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಅದ್ದೂರಿಯಾಗಿ ಸಾರ್ವಜನಿಕರಲ್ಲಿ ಸಂವಿಧಾನದ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಪಟ್ಟಣ ಪಂಚಾಯಿತಿ ಪ್ರಭಾರಿ ಮುಖ್ಯಧಿಕಾರಿ ಎಂ. ಶಿವಕುಮಾರ್, ಸಹಾಯಕ ನಿರ್ದೇಶಕ ಮಧ್ಯಾಹ್ನ ಉಪಹಾರ ಯೋಜನೆಯ ಎಂ. ತಿಪ್ಪೇಸ್ವಾಮಿ, ನಾಡಕಚೇರಿ ಉಪತಾಸಿಲ್ದಾರ್ ಬಿ ಶಕುಂತಲಾ, ರಾಜಸ್ವ ನಿರೀಕ್ಷಕ ಚೇತನ್ ಕುಮಾರ್, ಪಿಎಸ್ಐ ದೇವರಾಜ್, ಗ್ರಾಮ ಲೆಕ್ಕಾಧಿಕಾರಿಗಳಾದ ಹರೀಶ್, ಜಗದೀಶ್, ಶಂಕರ್, ರವಿ, ಶರಣಬಸಪ್ಪ, ಪುಷ್ಪಲತಾ, ಜಯರಾಮ್ , ಸೇರಿದಂತೆ ಗ್ರಾಮ ಸಹಾಯಕ. ಸಿ ಬಿ ಓಬಣ್ಣ, ಹರೀಶ್, ಕುಮಾರ್ ,ಮತ್ತು ಅಂಗನವಾಡಿ ಶಿಕ್ಷಕಿ – ಸಹಾಯಕಿಯರು ಪಟ್ಟಣದ ವಿದ್ಯಾ ವಿಕಾಸ ಶಾಲೆ, ಸರ್ಕಾರಿ ಮಾದರಿ ಶಾಲೆ, ಶಿಕ್ಷಕ – ಶಿಕ್ಷಕಿಯರು ಹಾಗೂ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಗ್ರಾಮಸ್ಥರು ಇದ್ದರು