ನಾಯಕನಹಟ್ಟಿ:: ಭಾರತೀಯ ಪ್ರಜೆಗಳಾದ ನಾವು ಅಂಬೇಡ್ಕರ್ ಹಾಕಿಕೊಟ್ಟ ಸಂವಿಧಾನದ ಅಡಿಯಲ್ಲಿ ಸಮಾನತೆಯಿಂದ ಬಾಳಬೇಕು ಎಂದು ಪಿಎಸ್ಐ ದೇವರಾಜ್ ಹೇಳಿದ್ದಾರೆ.
ಅವರು ಶುಕ್ರವಾರ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ 75ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರ ಹೋರಾಟಗಾರರ ಕನಸುಗಳನ್ನು ಬಿತ್ತಿ ಜನಮಾನಸಕ್ಕ ನೀಡಿದ ಸ್ಪೂರ್ತಿ ಈ 75ನೇ ಗಣರಾಜ್ಯೋತ್ಸವ ದೇಶದಲ್ಲಿ ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು ಭಾಷೆಗೆ ಅನುಗುಣವಾಗಿ ರಾಜ್ಯಗಳನ್ನು ವಿಂಗಡಿಸಿದ ಮಹನೀಯರ ನೆನೆಯುವ ದಿನವಾಗಿದೆ ಎಂದರು.
ಇದು ವೇಳೆ ಪಿಎಸ್ಐ 2 ಶಿವಕುಮಾರ್ ಮಾತನಾಡಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಡಾ. ಬಿ ಆರ್ ಅಂಬೇಡ್ಕರ್ ಹೀಗೆ ಅನೇಕ ಮಂದಿ ತಮ್ಮ ಪ್ರಾಣವನ್ನ ಪಣಕ್ಕಿಟ್ಟು ನಮಗೆ ಸ್ವಾತಂತ್ರವನ್ನು ತಂದು ಜನಸಾಮಾನ್ಯರ ಏಳಿಗೆಗೆ ಕಾನೂನುಗಳ ತಂದು ಕೊಟ್ಟ ಸುದಿನ ಈ ಗಣರಾಜ್ಯೋತ್ಸವವಾಗಿದೆ ಎಂದರು,
ಇದೇ ಸಂದರ್ಭದಲ್ಲಿ ಎಎಸ್ಐ ತಿಪ್ಪೇಸ್ವಾಮಿ, ಹೆಡ್ ಕಾನ್ಸ್ಟೇಬಲ್ ದಾದಾಪೀರ್, ರಾಮಾಂಜನೇಯ, ಮಂಜುನಾಥ್, ಮೋಹಿನುದ್ದಿನ್ ಭಾಷಾ, ನಾರಾಯಣಿ, ಸತೀಶ್, ಅಣ್ಣಪ್ಪ, ಲೋಹಿತ್, ದೇವರಾಜ್,ಉಮೇಶ್, ಅಶ್ವಥ್ ,ಕುಮಾರ್, ಶಿವಣ್ಣ, ಮಹಿಳಾ ಪೇದೆಗಳಾದ ಭಾಗ್ಯಮ್ಮ, ಮಂಜುಳಾ, ಪಾಲಯ್ಯ ಇದ್ದರು