ಚಳ್ಳಕೆರೆ : ಗಣರಾಜ್ಯೋತ್ಸವ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ ಅದರಂತೆ ರಾಜ್ಯದ ಉದ್ದಗಲಕ್ಕೂ ಹಬ್ಬಿದ ಈ ರಾಜ್ಯೋತ್ಸವ ಎಲ್ಲಾ ಶಾಲಾ ಕಾಲೇಜು ಹಾಗೂ ಸರಕಾರಿ ಕಛೇರಿಗಳು ವಿದ್ಯುತ್ ದೀಪಾಲಂಕಾರದಿಂದ ಅಲಂಕಾರಗೊಂಡಿವೆ.
ಅದರಂತೆ ತಳಿರು ತೋರಣಗಳಿಂದ ಸಿಂಗಾರಗೊಂಡ ಕಛೇರಿಗಳು ಗಣರಾಜ್ಯೋತ್ಸವ ಆಚರಣೆಗೆ ಸಿದ್ದಗೊಂಡಿವೆ.
ಅದರಂತೆ ತಾಲೂಕಿನ ದೊಡ್ಡ ಚೆಲ್ಲೂರು ಸರಕಾರಿ ಪ್ರೌಢ ಶಾಲೆಯು ಅಲ್ಲಿನ ಶಿಕ್ಷಕರ ಆಸಕ್ತಿಯಿಂದ ವಿದ್ಯುತ್ ದೀಪಾಲಂಕಾರದಿಂದ ರಂಜಿಸುತ್ತಿದೆ.
ಮುಖ್ಯ ಶಿಕ್ಷಕರಾದ ಹೆಚ್.ಹನುಮಂತರಾಯಪ್ಪ ಹಾಗೂ ಸಹ ಶಿಕ್ಷಕರ ಸಹಕಾರಿಂದ ಹಾಗು ಗ್ರಾಮದ ಸಾರ್ವಜನಿಕರ ಪ್ರೋತ್ಸಾಹದಿಂದ ಶಾಲೆಯಲ್ಲಿ ಈಡೀ ದಿನ ಮನರಂಜನಾ ಕಾರ್ಯಕ್ರಮಗಳ ಮೂಲಕ ಗಣರಾಜ್ಯೋತ್ಸವ ಆಚರಣೆಗೆ ಸಜ್ಜುಗೊಳಿಸಿದ್ದಾರೆ ಎನ್ನಲಾಗಿದೆ.