ಚಳ್ಳಕೆರೆ: ಪ್ರತಿಯೊಂದು ಮಗು ಆರೋಗ್ಯವಾಗಿ, ಪೌಷ್ಟಿಕವಾಗಿ ಬೆಳೆಯಬೇಕಾದರೆ ತಾಯಿಯ ಎದೆಯ ಹಾಲು ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಡಾ. ಬಿಂದುಶ್ರೀ ಹೇಳಿದರು.
ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ದಿ ಹಂಗರ್ ಪ್ರಾಜೆಕ್ಟ್ ಕರ್ನಾಟಕ, ಎನ್.ಜಿ.ಓ ಸಂಸ್ಥೆ ಹಾಗೂ ಗೋಪನಹಳ್ಳಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಪೌಷ್ಟಿಕತೆಯ ಹೆಚ್ಚಳದ ಯೋಜನೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಕೋಡೇಳಮ್ಮ ಹಾಗೂ ಸದಸ್ಯರುಗಳು ಆಶಾ ಕಾರ್ಯಕರ್ತರಾದ,ವಸಂತಮ್ಮ ,ಭಾರತಮ್ಮ ,ಗೌರಮ್ಮ ,ಎನ್. ಜಿ. ಓ ಸಂಸ್ಥೆಯ ಬಸವರಾಜ್,
ಅಂಗನವಾಡಿ ಲಕ್ಷ್ಮಿ, ತಿಪ್ಪೇರಮ್ಮ ,ಯಲ್ಲಮ್ಮ, ಹಾಗೂ ಮಂಜುನಾಥ್, ತಿಪ್ಪೇರುದ್ರಪ್ಪ ,ವೆಂಕಟೇಶ್, ವಿಶ್ವನಾಥ್ ,ಗಂಗಮ್ಮ, ಗ್ರಾಮಸ್ಥರು ಉಪಸ್ಥಿತರಿದ್ದರು.