ನಾಯಕನಹಟ್ಟಿ:: ಜ. 22..ಇಂದು ಚಿತ್ರದುರ್ಗ ನೀರಾವರಿ ಹೋರಾಟ ಸಮಿತಿಯ ಬಂದ್ ಕರೆಗೆ ನಾಯಕನಹಟ್ಟಿ ನೀರಾವರಿ ಹಾಗೂ ಸಾಮಾಜಿಕ ನ್ಯಾಯ ಸಮಿತಿ ವತಿಯಿಂದ ಸಂಪೂರ್ಣ ಬೆಂಬಲವನ್ನ ಸೂಚಿಸಲಾಗುವುದು ಎಂದು ನೀರಾವರಿ ಹೋರಾಟ ಸಮಿತಿ ಹೋಬಳಿ ಅಧ್ಯಕ್ಷ ಜಿ ಬಿ ಮುದಿಯಪ್ಪ ಹೇಳಿದ್ದಾರೆ.
ಸೋಮವಾರ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ. ಅವರು ರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶವೆಂದರೆ ಅದು ಚಿತ್ರದುರ್ಗ ಜಿಲ್ಲೆ ನಮ್ಮ ಇಡೀ ಚಿತ್ರದುರ್ಗ ಜಿಲ್ಲೆ ಬಹಳ ಬರಗಾಲಕ್ಕೆ ತುತ್ತಾದ ಜಿಲ್ಲೆ ಈ ಭಾಗದ ರೈತರಿಗೆ ಸರ್ಕಾರ ಎಲ್ಲಾ ಕೆರೆಗಳಿಗೆ ನೀರು ಹರಿಸಿದರೆ ಜಿಲ್ಲೆಯ ಜನರ ಜೀವನ ಮಟ್ಟ ಸುಧಾರಿಸಲು ಸಾಧ್ಯ ಹಾಗಾಗಿ ಚಿತ್ರದುರ್ಗ ನೀರಾವರಿ ಹೋರಾಟ ಸಮಿತಿಗೆ ಸಂಪೂರ್ಣವಾಗಿ ಬೆಂಬಲವನ್ನ ನೀಡಲಾಗುತ್ತದೆ ಆದ್ದರಿಂದ ಮುಂದಿನ ದಿನಗಳಲ್ಲಿ ನಮ್ಮ ಚಿತ್ರದುರ್ಗ ನೀರಾವರಿ ಹೋರಾಟ ಸಮಿತಿಯ ಜೊತೆಗೂಡಿ ಅವರ ಮಾರ್ಗದರ್ಶನದ ಪಡೆದು ನಾಯಕನಹಟ್ಟಿ ನೀರಾವರಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಸೇರಿ ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ಬಂದ್ ಕರೆಗೆ ಚರ್ಚಿಸಲಾಗುವುದು ಎಂದರು.
ಇದೆ ವೇಳೆ ನೀರಾವರಿ ಹೋರಾಟ ಸಮಿತಿಯ ಕಾರ್ಯಧ್ಯಕ್ಷ ಬೋರಸ್ವಾಮಿ ಮಾತನಾಡಿ ಚಿತ್ರದುರ್ಗ ನೀರಾವರಿ ಸಮಿತಿ ಬಂದ್ ಕರೆ ನೀಡಿರುವುದು ತುಂಬಾ ಈ ರಾಜ್ಯದಲ್ಲಿ ಅನೇಕ ರಾಜಕೀಯ ನಾಯಕರು ಮತ್ತು ಸರ್ಕಾರಗಳು ಬರಿ ನಮ್ಮ ಜಿಲ್ಲೆಯ ಜನತೆಗೆ ಆಶ್ವಾಸನೆಯನ್ನು ನೀಡಿ ರೈತರ ಕಣ್ಣಿಗೆ ತುಪ್ಪ ಸವರುವ ಕೆಲಸವನ್ನು ಮಾಡಿದ್ದಾರೆ ಅಪ್ಪರ್ ಭದ್ರ ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದ್ದು ಜಿಲ್ಲೆಯ ಜನತೆಗೆ ನುಂಗಲಾರದ ನೋವಾಗಿದೆ ಚಿತ್ರದುರ್ಗ ನೀರಾವರಿ ಸಮಿತಿ ಬಂದ್ ಕರೆಗೆ ತಮ್ಮ ನಾಯಕನಹಟ್ಟಿ ನೀರಾವರಿ ಹೋರಾಟ ಹಾಗೂ ಸಾಮಾಜಿಕ ನ್ಯಾಯ ಸಮಿತಿ ವತಿಯಿಂದ ಸಂಪೂರ್ಣವಾಗಿ ಬೆಂಬಲವನ್ನ ನೀಡಿ ನಮ್ಮ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಈ ಭಾಗದ ರೈತರು ಕೂಡ ಇಂದು ಚಿತ್ರದುರ್ಗ ಬಂದ್ ಕರೆಯಲ್ಲಿ ಭಾಗವಹಿಸಲಾಗುವುದು ಎಂದರು
ಇದೇ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿಯ ಉಪಾಧ್ಯಕ್ಷ ಆರ್ ಬಸವರಾಜ್, ಗುಂತಕೋಲಮನಹಳ್ಳಿ, ಚಂದ್ರಣ್ಣ, ಮಾದಯ್ಯನಹಟ್ಟಿ ಟಿ. ಬಸಪ್ಪ ನಾಯಕ, ಆರ್. ಏಜೆಂಟರು ಪಾಲಯ್ಯ, ಮಲ್ಲೂರಹಳ್ಳಿ ಬಿ ಕಾಟಯ್ಯ, ರೇಖಲಗೆರೆ ಅಶೋಕ್, ವೀರೇಶ್,ಓಬಳೇಶ್, ಜಿ ಎಚ್ ರಂಗಸ್ವಾಮಿ, ಮಲ್ಲೂರಹಳ್ಳಿ ಬೊಮ್ಮಯ್ಯ, ಇದ್ದರು