ಚಳ್ಳಕೆರೆ : ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನಾ ಸಮಾರಂಭ ಹಾಗೂ ಶ್ರೀ ಬಾಲ ರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು .

ಇದರ ಅಂಗವಾಗಿ ಬೆಳಗೆರೆ ಗ್ರಾಮದಲ್ಲಿ ಇಡಿ ಗ್ರಾಮವೆ ಸಡಗರ ಸಂಭ್ರಮದಿಂದ ಅಂಜನೇಯ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆ.ರಾಮ ಜಪ,ರಾಮಮಂತ್ರ ಹಾಗೂ ಭಜನೆ ಕಾರ್ಯಕ್ರದಲ್ಲಿ ಭಾಗಿಯಾದರು ಎಂದು ಗ್ರಾಮದ ಮುಖಂಡ ಕೆ.ಟಿ.ನಿಜಲಿಂಗಪ್ಪ ಹೇಳಿದರು.ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ ಇಂದು ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆ ಗ್ರಾಮದಲ್ಲಿ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ,ಮತ್ತು ಆರತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ಇಂದು ನಮ್ಮ ಗ್ರಾಮದಲ್ಲಿ ದೊಡ್ಡ ಹಬ್ಬವಾಗಿ ಈ ಕಾರ್ಯಕ್ರಮವನ್ನು ಆಚರಣೆ ಮಾಡಲಾಗಿದೆ.

ಗ್ರಾಮದ ಜಾತಿ ಭೇದ ಇಲ್ಲದೆ ಎಲ್ಲರೂ ಸೇರಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ,ರಾಮ ನಾಮ ಜಪ, ಹಾಗೂ ಭಜನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಗ್ರಾಮದ ಮಹಿಳೆಯರಿಂದ ಆರತಿ ಬೆಳಗಲಾಯಿತು, ಗ್ರಾಮದಲ್ಲಿ ಇರುವಂತಹ ಎಲ್ಲಾ ದೇವಾಲಗಳನ್ನು ಸ್ವಚ್ಛತೆ ಮಾಡಿ ಎಲ್ಲಾ ದೇವಾಲಯಗಳು ಇಂದು ವಿಶೇಷ ಪೂಜೆ ಸಲ್ಲಿಸಿ ರಾಮ ನಾಮಸ್ಮಣೆ ಮಾಡಲಾಗಿದೆ.

ಇದೇ ರೀತಿಯಾಗಿ ಪ್ರತಿ ವರ್ಷವೂ ಸಹ ಈ ದಿನ ವಿಶೇಷ ಪೂಜೆ ಮಾಡಿ ಆರತಿ ಬೆಳಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂತಸ ವ್ಯಕ್ತ ಪಡಿಸಿದರು.

ಪ್ರಧಾನ ಅರ್ಚಕರಾದ ಮುರುಳಿದರ ಶಾಸ್ತ್ರಿ ಮಾತನಾಡಿ, ಶತಮಾನಗಳ ಬೇಡಿಕೆ ಅಯೋಧ್ಯೆಯ ಶ್ರೀರಾಮಚಂದ್ರ ದೇಗುಲ ಕೊನೆಗೂ ಉದ್ಘಾಟನೆಗೊಂಡಿದ್ದು ರಾಮಲಿಲ್ಲನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಇಂದು ಅದ್ದೂರಿಯಾಗಿ ಜರುಗಿದೆ. ಈ ವೈಭವ ಕಣ್ತುಂಬಿಕೊಳ್ಳಲು ಸಂತರು ಸಾಧು ಶರಣರು ಚಲನಚಿತ್ರ ನಟರು ಸೇರಿದಂತೆ ಗಣ್ಯಾತಿ ಗಣ್ಯರು ಅಯೋಧ್ಯೆ ತೆರಳಿದರು. ಅದರಂತೆ ಇಂದು ನಮ್ಮ ಗ್ರಾಮದಲ್ಲಿ ಪ್ರತಿಯೊಬ್ಬರಲ್ಲೂ ಸಂಭ್ರಮ ಮನೆ ಮಾಡಿತ್ತು. ಎಲ್ಲಾ ಸಮುದಾಯದವರು ಸೇರಿ ಸಂಭ್ರಮ ಆಚರಣೆ ಮಾಡಿದ್ದಾರೆ ಎಂದರು.

ರಘು ಹಾಗೂ ರಂಗಸ್ವಾಮಿ ತಂಡ ಸೇವಾ ಕಾರ್ಯವನ್ನು ನೇತೃತ್ವ ವಹಿಸಿದ್ದರು.

ಈ ಸಂಭ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಕೆ.ರಾಜಣ್ಣ,ಗ್ರಾಮಪಂಚಾಯಿತಿ ಸದಸ್ಯರಾದ ನಿಂಗಣ್ಣ,ಮುಖಂಡರಾದ ಗೊಂಚಕಾರ್, ಶಿವಣ್ಣರಾಜಣ್ಣ,ಪಾರುರಂಗಯ್ಯ, ಪಟೇಲ್ ಗೋಪಿನಾಥ, ಶಿವಕುಮಾರ್ ಕೃಷ್ಣಪ್ಪ, ದೊಡ್ಡಲಿಂಗೆಗೌಡ, ಸಿ.ಗಿರಿಯಪ್ಪ,ಸ್ವಾಮಿ,ರಘು,ರಂಗಸ್ವಾಮಿ, ಮಾರುತಿ,ರಾಮ,ರವಿ,ಬಿಟಿ.ಕೃಷ್ಣ,ಮಂಜುನಾಥ ಶ್ರೀಕಠಪ್ಪ ಹಾಗೂ ಗ್ರಾಮದ ಹಿರಿಯ ಮುಖಂಡರು,ಯುವಕರು ಇದ್ದರು.

Namma Challakere Local News
error: Content is protected !!