ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಜರುಗಿದ ರಾಮನ ಜಪ

ಚಳ್ಳಕೆರೆ: ಅಯೋಧ್ಯೆಯಲ್ಲಿನ ರಾಮಮಂದಿರದಲಿ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯೂ ಲೋಕಾರ್ಪಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಗೋಪನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ವಿಜೃಂಭಣೆಯಿಂದ ಶ್ರೀ ರಾಮನ ಫೋಟೋವನ್ನು ಮೆರವಣಿಗೆ ನಡೆಸುವ ಮುಖಾಂತರ ಆಚರಣೆ ಮಾಡಿದರು.

ರಾಮನ ಪ್ರತಿಷ್ಠಾಪನೆಯ ಅಂಗವಾಗಿ ಗೋಪನಹಳ್ಳಿ ಗ್ರಾಮದಲ್ಲಿ ಮಹಿಳೆಯರು ಮತ್ತು ಸಮಸ್ತ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರೀ ರಾಮನ ವಿಗ್ರಹದ ಮೆರವಣಿಗೆ ಗ್ರಾಮದಲ್ಲಿ ವಿಜೃಂಭಣೆಯಿಂದ ನೆಡೆಸಿದ್ದೇವೆ. ಇದಕ್ಕೆ ಗ್ರಾಮಸ್ಥರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಮೆರವಣಿಗೆಯನ್ನು ಶ್ರೀ ರಾಮನ ಜಪ ಮಾಡುತ್ತಾ ಭಜನೆ ಮಾಡುವ ಮುಖಾಂತರ ಗ್ರಾಮದ ಪ್ರತಿಯೊಂದು ದೇವಸ್ಥಾನದ ದರ್ಶನವನ್ನು ಪಡೆದುಕೊಂಡು. ಶ್ರೀ ರಾಮನ ಪ್ರತಿಷ್ಠಾಪನೆಯ ದಿನವನ್ನು ಗ್ರಾಮದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿದ್ದೇವೆ ಎಂದು ಪೂಜಾರಿ ರಂಗಸ್ವಾಮಿ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಭಾರತ ದೇಶಾದ್ಯಂತ ದೀಪಾವಳಿಯ ಹಬ್ಬದ ವಾತಾವರಣ ನಡೆಯುತ್ತಿದೆ. ಅದೇ ರೀತಿ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಆಂಜನೇಯ ಸ್ವಾಮಿಯ ಟ್ರಸ್ಟ್ ವತಿಯಿಂದ ವಿಶೇಷ ರೀತಿಯಲ್ಲಿ ಪೂಜೆ ಕಾರ್ಯವನ್ನು ಮಾಡುವ ಮೂಲಕ ಗ್ರಾಮದಲ್ಲಿ ಶ್ರೀ ರಾಮನ ಜಪವನ್ನು ಪ್ರತಿಯೊಂದು ಮನೆಯಲ್ಲಿ ನಡೆಸಲಾಗುತ್ತಿದೆ. ಹಾಗೂ ಪ್ರತಿಯೊಂದು ಮನೆಯಲ್ಲಿ ದೀಪವನ್ನು ಬೆಳಗುವ ಮೂಲಕ ಶ್ರೀ ರಾಮನನ್ನು ನೆನೆಯುತ್ತ ಗ್ರಾಮದಲ್ಲಿ ಹಬ್ಬದ ರೀತಿ ಆಚರಣೆ ಮಾಡಿದ್ದೇವೆ ಎಂದು ಜಗನ್ನಾಥ್ ತಿಳಿಸಿದರು.

ರಾಮನ ಪ್ರಾಣ ಪ್ರತಿಷ್ಠಾಪನೆಯ ದಿನದಂದು ಸಂಜೆ ಸೂರ್ಯಾಸ್ತವಾದ ಮೇಲೆ ತಮ್ಮ ತಮ್ಮ ಮನೆಗಳ ಮುಂದೆ ಎಲ್ಲಾ ದೇವನೀ ದೇವತೆಗಳನ್ನು ಪೂಜಿಸುವುದು ದೀಪಗಳನ್ನು ಬೆಳಗುವುದು ದೇಶದ ಕೋಟಿ ಕೋಟಿ ಮನೆಗಳ ಮುಂದೆ ದೀಪೋತ್ಸವವು ನಡೆದು ಇಡೀ ಜಗತ್ತು ದೀಪಗಳ ಮಾಲೆಯಿಂದ ಜ್ಯೋತಿರ್ಮಯವಾಗುವಂತೆ, ಕಾರ್ಯಕ್ರಮ ನಡೆಯುತ್ತಿದೆ. ಅದೇ ರೀತಿ ಗೋಪನಹಳ್ಳಿ ಗ್ರಾಮದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಅಯೋಧ್ಯೆಯಲ್ಲಿ ನಡೆಯುತ್ತಿದ್ದರು ಗ್ರಾಮದಲ್ಲಿ ಮಾತ್ರ ಹಬ್ಬದ ವಾತಾವರಣ ಇದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಉಮೇಶ್ ತಿಳಿಸಿದ್ದಾರೆ.

500ಕ್ಕೂ ಹೆಚ್ಚು ವರ್ಷಗಳ ಕಾಲ ಇತಿಹಾಸ ಹೊಂದಿರುವ ಅಯೋಧ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಅಯೋಧ್ಯೆಯಲ್ಲಿ ನಡೆಯುತ್ತಿದ್ದು. ಇದರಿಂದ ನಮ್ಮ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಇಡಿ ಭಜನೆ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವು.ಗ್ರಾಮದಲ್ಲಿ ಇಂದು ಬೆಳಿಗ್ಗೆ ಪ್ರಮುಖ ಬೀದಿಗಳಲ್ಲಿ ಶ್ರೀ ರಾಮನ ಜಪ ಮಾಡುತ್ತಾ ಮೆರವಣಿಗೆಯನ್ನು ನಡೆಸಿದೆವು. ಹಾಗೂ ಪ್ರಸಾದ ವ್ಯವಸ್ಥೆಯನ್ನು ಏರ್ಪಡಿಸಿದ್ದೆವು ಪ್ರಸಾದವನ್ನು ಗ್ರಾಮಸ್ಥರು ಎಲ್ಲರೂ ಪಡೆದರು ಹಾಗೂ ಶಾಲಾ ಕಾಲೇಜಿನ ಮಕ್ಕಳುಗಳು ಸಹ ಪೂಜೆ ಸಮಯಕ್ಕೆ ದೇವಸ್ಥಾನದ ಹತ್ತಿರ ಹಾಜರಾಗಿ ಶ್ರೀ ರಾಮನ ಘೋಷಣೆಗಳನ್ನು ಕೂಗುತ್ತಾ. ಶ್ರೀ ರಾಮನನ್ನು ನೆನೆದರು. ಮತ್ತು ಇಂದು ರಾತ್ರಿ ಇಡೀ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮಕ್ಕೆ ಗ್ರಾಮದ ಎಲ್ಲಾ ಭಕ್ತಾದಿಗಳು ಭಾಗವಹಿಸಿ ಯಶಸ್ವಿಗೊಳಿಸುತ್ತಾರೆ ಎಂದು ಗ್ರಾಮದ ದಳಪತಿ ತಮ್ಮೇಗೌಡ ಅವರು ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಧಮ್ಮ ತಿಪ್ಪೇಸ್ವಾಮಿ, ಗ್ರಾಮ ಪಂಚಾಯತಿ ಸದಸ್ಯ ಪಿ ಟಿ ಎಸ್ ನಾಗರಾಜ್, ನಟರಾಜ್, ಓಂಕಾರಪ್ಪ, ಅನಿಲ್ ಕುಮಾರ್, ಅಶೋಕ್, ಕೃಷ್ಣಮೂರ್ತಿ, ಮಹಾಂತೇಶ್, ಸುರೇಶ್, ಬಸವರಾಜ್, ಕರಿಯಣ್ಣ, ಮಂಜುನಾಥ್, ತಿಪ್ಪೇಸ್ವಾಮಿ, ರಘುನಾಥ್, ಹಾಗೂ ಸಮಸ್ತ ಗ್ರಾಮಸ್ಥರು ಇದ್ದರು.

Namma Challakere Local News
error: Content is protected !!