ಚಳ್ಳಕೆರೆ : ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಟಾಪನೆ ಹಿನ್ನಲೆಯಲ್ಲಿ ಕಲ್ಲಿನ ಕೋಟೆ ಚಿತ್ರದುರ್ಗ ಜಿಲ್ಲಾಧ್ಯಾಂತ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರೆವೆರಿಸುವ ಮೂಲಕ ಭಕ್ತರು ಪಡುಮುಟ್ಟಿದ್ದಾರೆ.
ಅದರಂತೆ ಚಳ್ಳಕೆರೆ ನಗರದ ಹಳೆನಗರದ ಶ್ರೀರಾಮಮಂದಿರದಲ್ಲಿ ಮುಂಜಾನೆಯಿAದ ವಿಶೇಷ ಹೋಮ ಅವನ ಮಾಡುವ ಮೂಲಕ ರಂಗೋಲಿಯಲ್ಲಿ ಶ್ರೀರಾಮನ ಚಿತ್ರ ಬಿಡಿಸುವ ಮೂಲಕ ಭಕ್ತರು ಪುನೀತರಾಗಿದ್ದಾರೆ.
ಅದರಂತೆ ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಶ್ರೀಬಾಲರಾಮ ಪ್ರಾಣ ಪ್ರತಿಷ್ಟಾಪನೆ ಅಂಗವಾಗಿ ತಾಲೂಕು ಬ್ರಹ್ಮಣ ಸಂಘ, ವಿಶ್ವ ಹಿಂದೂ ಪರಿಷತ್ತು, ಮಲ್ಲಿಕಾರ್ಜುನ ಸ್ವಾಮಿ ಸೇವಾ ಸಮಿತಿ, ಬ್ರಹ್ಮ ಚೈತನ್ಯ, ಮಂಡಳಿAದ ವಿಶೇಷ ಪೂಜೆ ಮಾಡಿದರು, ಇನ್ನೂ ಚಳ್ಳಕೆರೆ ನಗರದ ಕಾಟಪನಹಟ್ಟಿ ಭಕ್ತರಿಂದ ಭಜನೆ ಕಾರ್ಯಕ್ರಮದ ಮೂಲಕ ಕಾಟಂಲಿAಗೇಶ್ವರ ದೇವಾಲಯದಿಂದ ಗೊಲ್ಲರಹಟ್ಟಿಯಲ್ಲಿರುವ ಶ್ರೀರಂಗನಾಥ ಯತ್ತಪ್ಪಸ್ವಾಮಿ ದೇವಾಲಯದ ವರಗೂ ಭಜನೆ ಯಾತ್ರೆ, ಶ್ರೀರಂಗನಾಥ ಯತ್ತಪ್ಪಸ್ವಾಮಿ ದೇವಾಲಯದಿಂದ ಕಾಟಪ್ಪನಹಟ್ಟಿಯಲ್ಲಿ ನೆಲೆಸಿರುವ ಕಾಟಲಿಂಗೇಶ್ವರ ಸನ್ನಿದನದವರೆಗೂ ಭಜನೆ ಯಾತ್ರೆ ಮಾಡಿ ಕಾಟಪ್ಪನಹಟ್ಟಿ ಸಮಸ್ತ ನಾಗರಿಕರಿಂದ ರಾಮನಮಿ ಹಬ್ಬದ ರೀತಿಯಲ್ಲಿ ಸಂಭ್ರಮ ಮನೆ ಮಾಡಿತ್ತು,
ಇನ್ನೂ ನಗರದ ದತ್ತಾತ್ರೆಯ ಮಂದಿರದಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಅಂಗವಾಗಿ ಹೋಮದ ಮೂಲಕ ಯೋಗಭ್ಯಾಸ ಮಾಡಿ ನಂತರ ಭಜನೆ ಕಾರ್ಯಕ್ರಮ ಮಾಡಿದರು, ಅದರಂತೆ ಎಪಿಎಂಸಿ ಮಾರುಕಟ್ಟೆಯಲ್ಲಿ, ಹಾಗೂ ಮಾಹದೇವಿ ರಸ್ತೆ, ಬನಶಂಕರಿ ರಸ್ತೆ, ನೆಹರು ವೃತ್ತದಲ್ಲಿ ವಾಲ್ಮೀಕಿ ವೃತ್ತದಲ್ಲಿ, ವಿಠ್ಠಲ ನಗರದಲ್ಲಿ, ಹಾಗೂ ಸೋಮಗುದ್ದು ರಸ್ತೆ, ಮುರುಡಿ ಆಂಜನೇಯಸ್ವಾಮಿ ದೇವಾಸ್ಥಾನದಲ್ಲಿ ಡಿಶ್ ನಾಗೇಶ್ ನೇತೃತ್ವದಲ್ಲಿ ದೇವಾಲಯದಲ್ಲಿ ವಿಶೇಷ ಪೂಜಾ ಏರ್ಪಡಿಸಲಾಗಿತ್ತು.
ಅದರಂತೆ ಅಂಬೇಡ್ಕರ್ ನಗರದ ಭಗತ್ ಸಿಂಗ್ ಯುವಕ ಸಂಘದಿAದ ಶ್ರೀರಾಮನಿಗೆ ವಿಶೇಷ ಪೂಜೆ ಮಾಡುವ ಮೂಲಕ ನೂರಾರು ಭಕ್ತರು ಸ್ವಾಮಿಕೃಪೆಗೆ ಪಾತ್ರರಾದರು.
ಅದರಂತೆ ಗಾಂಧಿನಗರದ ಶ್ರಿಸಾಯಿ ಬಾಬ ಮಂದಿರದಲ್ಲಿ ನಗರಸಭೆ ಸದಸ್ಯ ಹೊಯ್ಸಳ ಗೋವಿಂದರಾಜ್ ಸೆರಿದಂತೆ ಸಾವಿರಾರು ಭಕ್ತರು ಬಾಬ ಸನ್ನಿದಿಯಲ್ಲಿ ಅಯೋಧ್ಯೆ ಶ್ರೀರಾಮನ ಮಂದಿರವನ್ನು ಕಲಾ ಕೃತಿಗಳ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.
ಇನ್ನೂ ಶಿವನಗರ ಸೇರಿದಂತೆ ಪಾವಗಡ ರಸ್ತೆಯಲ್ಲಿರುವ ಶ್ರೀಶಿರಡಿ ಸಾಯಿ ಬಾಬಮಂದಿರದಲ್ಲಿ ಸಾವಿರಾರು ಭಕ್ತರು ಮುಂಜಾನೆಯಿAದ ಸರಥಿ ಸಾಲಿನಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿದರು.
ಅದರಂತೆ ಕರೆಕಲ್ ಶ್ರೀ ಆಂಜನೇಯಸ್ವಾಮಿಗೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಶ್ರೀ ಆಂಜನೇಯಸ್ವಾಮಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ.. ಒಟ್ಟಾರೆ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಅಯೋಧ್ಯ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಶ್ರದ್ಧಾ ಭಕ್ತಿಯಿಂದ ತಾಲೂಕಿನಲ್ಲಿ ಶ್ರೀ ರಾಮನ ಜಪ ಹಾಗೂ ಅರ್ಷದ್ಗೋರ ಮೊಳಗಿದವು.

About The Author

Namma Challakere Local News
error: Content is protected !!