ಚಳ್ಳಕೆರೆ
ಚಳ್ಳಕೆರೆ: ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಒಂಟಿಯಾಗಿ ಸಿಕ್ಕ ಕೃಷ್ಣಮೃಗದ ಮೇಲೆ ನಾಯಿಗಳು ದಾಳಿ ನಡೆಸಿದ್ದು ಇದನ್ನು ಕಂಡ ಸ್ಥಳೀಯರು ನಾಯಿಗಳನ್ನು ಓಡಿಸಿ ಕೃಷ್ಣಮೃಗವನ್ನು ರಕ್ಷಣೆ ಮಾಡಿದ್ದಾರೆ.
ಕೃಷ್ಣಮೃಗದ ಮೇಲೆ 8 ನಾಯಿಗಳು ದಾಳಿ ನಡೆಸಿ ಕಚ್ಚುತ್ತಿದ್ದನು ಕಂಡಂತಹ ಸಾರ್ವಜನಿಕರು ನಾಯಿಗಳನ್ನು ಸ್ಥಳದಿಂದ ಓಡಿಸಿ ಕೃಷ್ಣಮೃಗವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದೆವು ತಕ್ಷಣ ಸ್ಥಳಕ್ಕೆ ಚಳ್ಳಕೆರೆ ಅರಣ್ಯ ಅಧಿಕಾರಿಗಳು, ದೌಡಾಯಿಸಿ ಕೃಷ್ಣಮೃಗವನ್ನು ವಶಕ್ಕೆ ಪಡೆದುಕೊಂಡರು ಎಂದು ಜಿ ಟಿ ಆದರ್ಶ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿ ವಸಂತ್ ಕುಮಾರ್ ಮತ್ತು ಸಿಬ್ಬಂದಿಗಳು ಕೃಷ್ಣಮೃಗ ರಕ್ಷಣೆ ಮಾಡಿದ ಸ್ಥಳೀಯರಾದ ಆದರ್ಶ್, ದಿನೇಶ್ ಬಾಬು, ಮಧು ಗೌಡ, ಮಹೇಶ್, ಶಶಿಧರ್ ,ಇದ್ದರು