ಚಳ್ಳಕೆರೆ : ಜಿಲ್ಲಾ ಪಂಚಾಯಿತಿ, ಚಿತ್ರದುರ್ಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಚಳ್ಳಕೆರೆ
ಕರ್ನಾಟಕ
ಪ್ರಾಥಮಿಕ
ಶಾಲಾ ಶಿಕ್ಷಕರ
ಬೆಂಗಳೂರು
ತಾಲ್ಲೂಕು ಪಂಚಾಯಿತಿ, ಚಳ್ಳಕೆರೆ
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ), ಬೆಂಗಳೂರು
ತಾಲ್ಲೂಕು ಶಾಖೆ, ಚಳ್ಳಕೆರೆ ಹಾಗೂ
ಶಿಕ್ಷಕರ
ಪ್ರಗತಿಪರ ಶಿಕ್ಷಕರ ವೇದಿಕೆ, ಚಳ್ಳಕೆರೆ
ಇವರ ಸಹಯೋಗದೊಂದಿಗೆ
ದಿನಾಂಕ: 19-01-2024 ಶುಕ್ರವಾರ

ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ
ಶೈಕ್ಷಣಿಕ ಕಾರ್ಯಾಗಾರ
ಪ್ರತಿಭಾ ಪುರಸ್ಕಾರ ಹಾಗೂ “ಅಕ್ಷರ ಸಿಲಿ” ಪ್ರಶಸ್ತಿ ಪ್ರದಾನ ಸಮಾರಂಭ -2024
ಸಮಯ: ಬೆಳಿಗ್ಗೆ 10:00 ಗಂಟೆಗೆ
ಸ್ಥಳ: ವಾಲ್ಮೀಕಿ ಕಲ್ಯಾಣ ಮಂಟಪ, ಬೆಂಗಳೂರು ರಸ್ತೆ, ಚಳ್ಳಕೆರೆಯಲ್ಲಿ‌ನಡೆಯಲಿದೆ.

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತನ್ನ ಜೀವನವನ್ನು ಮುಡುಪಾಗಿಟ್ಟು, ಮಹಿಳೆಯರಿಗೆ ಅಕ್ಷರದ ಬೆಳಕು ಕೊಟ್ಟು,
ಸ್ವಾಭಿಮಾನಿಗಳಾಗಿ ಬದುಕಲು ಕಲಿಸಿಕೊಟ್ಟ ಅದ್ಭುತ ಚೇತನ, ಸಮಾಜ ಸುಧಾರಕಿ, ಸಂಚಾಲಕಿ, ಮುಖ್ಯೋಪಾಧ್ಯಾಯನಿ,
ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ದಣಿವರಿಯದ ಸತ್ಯ ಶೋಧಕಿ, ಆಧುನಿಕ ಶಿಕ್ಷಣದ ತಾಯಿ,
ಅಕ್ಷರದವ್ವ, ಆಧುನಿಕ ಭಾರತದ ಮೊದಲ ಶಿಕ್ಷಕಿ, ‘ಮಾತೆ ಸಾವಿತ್ರಿಬಾಯಿ ಫುಲೆ’ಯವರ ಜಯಂತಿಯ ಪ್ರಯುಕ್ತ
ತಾಲ್ಲೂಕಿನಲ್ಲಿ ಅನುಪಮ ಸೇವೆಯನ್ನು ಸಲ್ಲಿಸಿದ ಮಹಿಳಾ ಶಿಕ್ಷಕಿಯರಿಗೆ “ಅಕ್ಷರ ಸಿರಿ”, ಹಾಗೂ ಆಯ್ದ ವಿಶೇಷ ಶಾಲೆಗಳಿಗೆ
“ಉತ್ತಮ ಶಾಲೆ” ಪ್ರಶಸ್ತಿ ಪ್ರದಾನ, 2022-23ನೇ ಸಾಲಿನ ಎಸ್.ಎಸ್.ಎಲ್.ಸಿ / ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ 90ಕ್ಕಿಂತ
ಹೆಚ್ಚು ಅಂಕ ಗಳಿಸಿದ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಮಕ್ಕಳಿಗೆ “ಪ್ರತಿಭಾ ಪುರಸ್ಕಾರ”, 2023ರಲ್ಲಿ ಚಳ್ಳಕೆರೆ
ತಾಲ್ಲೂಕಿಗೆ ವರ್ಗಾವಣೆಯಾಗಿ ಬಂದ | ನೂತನವಾಗಿ ಆಯ್ಕೆಯಾದ ಶಿಕ್ಷಕರಿಗೆ ‘ಸ್ವಾಗತ ಸಮಾರಂಭ’ ಹಾಗೂ ‘ಶೈಕ್ಷಣಿಕ
ಕಾರ್ಯಾಗಾರ’ವನ್ನು ದಿನಾಂಕ: 19.01.2024ನೇ ಶುಕ್ರವಾರ, ವಾಲ್ಮೀಕಿ ಕಲ್ಯಾಣ ಮಂಟಪ, ಬೆಂಗಳೂರು ರಸ್ತೆ,
ಚಳ್ಳಕೆರೆಯಲ್ಲಿ ಏರ್ಪಡಿಸಲಾಗಿದೆ.

ಕಾರ್ಯಕ್ರಮಕ್ಕೆ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಎ. ನಾರಾಯಣಸ್ವಾಮಿಯವರು, ಕರ್ನಾಟಕ ಸರ್ಕಾರದ ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಸಚಿವರು, ಚಿತ್ರದುರ್ಗ
ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್‌ರವರು, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ
ಟಿ. ರಘುಮೂರ್ತಿಯವರು, ಮೊಳಕಾಲ್ಕೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್.ವೈ.
ಗೋಪಾಲಕೃಷ್ಣರವರು ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಸಿ.ವೀರೇಂದ್ರ (ಪಪ್ಪಿ)ರವರು
ವಿಧಾನಪರಿಷತ್ತಿನ ಸದಸ್ಯರುಗಳಾದ ವೈ.ಎ. ನಾರಾಯಣಸ್ವಾಮಿಯವರು, ಕೆ.ಎಸ್. ನವೀನ್‌ರವರು, ಚಿದಾನಂದ ಎಂ. ಗೌಡರವರು ಹಾಗೂ ಎಲ್ಲಾ ಹಂತದ ಜನಪ್ರತಿನಿಧಿಗಳು, ಜಿಲ್ಲಾ / ತಾಲ್ಲೂಕು ಹಂತದ ವಿವಿಧ
ಅಧಿಕಾರಿ ವರ್ಗದವರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ / ಜಿಲ್ಲೆ / ತಾಲ್ಲೂಕು ಹಂತದ
ಪದಾಧಿಕಾರಿಗಳು, ಪ್ರತಿನಿಧಿಗಳನ್ನು ಆಹ್ವಾನಿಸುತ್ತಿದ್ದು, ತಾಲ್ಲೂಕಿನ ಸಮಸ್ತ ಶಿಕ್ಷಕ | ಶಿಕ್ಷಕಿಯರು ಭಾಗವಹಿಸಿ ಈ
ಅರ್ಥಪೂರ್ಣ ಕಾರ್ಯಕಮವನ್ನು ಯಶ್ವಿಗೊಳಿಸಬೇಕು ಎಂದು ಪ್ರಾಥಮಿಕ‌ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆರ್ .ಮಾರುತೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

About The Author

Namma Challakere Local News
error: Content is protected !!