ನಾಯಕನಹಟ್ಟಿ :: ಜ.18. ಸಮೀಪದ
ಅಬ್ಬೇನಹಳ್ಳಿ ಗ್ರಾಮದ ಶ್ರೀಮತಿ ಗಂಗಮ್ಮ ಮತ್ತು ದಿ. ಶ್ರೀ ಸೂರಯ್ಯ ಅವರ ಮಗನಾದ
ಮಹಾಂತೇಶ್. ಎಸ್.ಅವರು ಡಾ. ಕಿಚಿಡಿ ಚನ್ನಪ್ಪ ಅವರ ಮಾಗ೯ದಶ೯ನದಲ್ಲಿ “ದಲಿತರ ಮೇಲಿನ ದೌರ್ಜನ್ಯದ ರಾಜಕಾರಣ” ಎಂಬ ವಿಷಯಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪಿಎಚ್ ಡಿ ಪದವಿಯನ್ನು ದಿನಾಂಕ 10-01-2024 ರಂದು ನಡೆದ 32ನೇ ಘಟಿಕೋತ್ಸವದಲ್ಲಿ ಕನಾ೯ಟಕ ಸಕಾ೯ರದ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ. ಸಿ. ಸುಧಾಕರ್ ಹಾಗೂ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ. ವಿ. ಪರಮಾಶಿವಮೂತಿ೯ ಇವರಿಂದ ಮಹಂತೇಶ.ಎಸ್.ಅವರಿಗೆ ಡಾಕ್ಟರೇಟ್ ಪದವಿ ನೀಡಲಾಗಿದೆ.
ಶುಭಕೋರುವವರು :ಅಣ್ಣಂದಿರಾದ ಎಂ. ಎಲ್. ಪಾಪ ನಾಯಕ, ಮಹೇಶ್, ಲಕ್ಷ್ಮಿ, ಪುಟಾಣಿ ಅನ್ವಿತಾ ಸೂಯ೯, ಹಾಗೂ ಅಭಿವೃದ್ಧಿ ಅದ್ಯಯನ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಅಭಿನಂದನೆ ಸಲ್ಲಿಸಿದ್ದು, ಊರಿನ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.