ನಾಯಕನಹಟ್ಟಿ:: ಹೋಬಳಿ ಸಮೀಪದ ನಲಗೇತನಹಟ್ಟಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಟೇಲ್ ಜಿಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಉಪಾಧ್ಯಕ್ಷರಾಗಿ ರಾಮದುರ್ಗ ಎತ್ತಿನ ಓಬಯ್ಯ ಆಯ್ಕೆ ಆಗಿದ್ದಾರೆ.
ಕಳೆದ ಅವಧಿಯ ಅಧ್ಯಕ್ಷರಾಗಿ ಕೆ ಪಿ ಮುತ್ತಯ್ಯ ಉಪಾಧ್ಯಕ್ಷರಾಗಿ ಲೋಕೇಶಪ್ಪ ಕಾರ್ಯನಿರ್ವಹಿಸಿದ್ದರು ತೆರವಾಗಿದ್ದ ಸ್ಥಾನಕ್ಕೆ
ಬುಧವಾರ ನಲಗೇತನಹಟ್ಟಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಆಡಳಿತ ಮಂಡಳಿಗೆ ಚುನಾವಣೆ ನಡೆಯಿತು.
ಕೃಷಿ ಪತ್ತಿನ ಸಹಕಾರ ಸಂಘದ ಒಟ್ಟು ಸದಸ್ಯರ ಸಂಖ್ಯೆ 12 ಬುಧವಾರ ಬೆಳಗ್ಗೆ 10 ಗಂಟೆಗೆ ಚುನಾವಣೆ ಪ್ರಾರಂಭವಾಯಿತು.
ಅಧ್ಯಕ್ಷ ಸ್ಥಾನಕ್ಕೆ ಪಾಟೀಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮತ್ತು ಈಶ್ವರಪ್ಪ.
ಉಪಾಧ್ಯಕ್ಷ ಸ್ಥಾನಕ್ಕೆ ರಾಮದುರ್ಗ ಎತ್ತಿನ ಓಬಯ್ಯ ಮತ್ತು ಲೋಕೇಶಪ್ಪ ನಾಮಪತ್ರ ಸಲ್ಲಿಸಿದರು.
ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿಗೌಡ್ರು ಮತ್ತು ರಾಮದುರ್ಗ ಎತ್ತಿನ ಓಬಯ್ಯ ತಲಾ 9 ಮತಗಳನ್ನು ಪಡೆದು ಜಯವನ್ನು ಗಳಿಸಿ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.
ಇದೆ ವೇಳೆ ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಬಶೀರ್ ಖಾನ್, ಕಾರ್ಯದರ್ಶಿ ಬಿ ಸಿ ಸಣ್ಣ ಬೋರಯ್ಯ, ಕೃಷಿ ಪತ್ತಿನ ಸಂಘದ ಸದಸ್ಯರಾದ. ಜಿ ಸಿ ಬೋರಯ್ಯ, ಮುತ್ತಯ್ಯ, ನಲ್ಲನ ಸಣ್ಣ ಬೋರಯ್ಯ, ತಿಪ್ಪನ ಬೋರಯ್ಯ, ಬಿ ದಾದಾಪೀರ್, ಓಬಮ್ಮ, ಕಮಲಮ್ಮ, ಚಿತ್ತಯ್ಯ, ಗ್ರಾಮಸ್ಥರಾದ ನಲ್ಲನ ದೊಡ್ಡ ಬೋರಯ್ಯ, ಜಿ ಎಸ್ ಮಂಜುನಾಥ್, ಜಯಣ್ಣ, ಎಂ ಬಿ ದೊಡ್ಡ ಬೋರಯ್ಯ, ಬಿ ಚನ್ನಕೇಶವಯ್ಯ, ಪಾಲಯ್ಯ, ಇದ್ದರು