ಚಳ್ಳಕೆರೆ : ಬೆಳೆ ಪರಿಹಾರ ವ್ಯವ್ಯವಾಹರದಲ್ಲಿ ಭಾಗಿಯಾದ ಅಧಿಕಾರಿಗಳ ತನಿಖೆಯಾಗಬೇಕು, ಕಳೆದ ಸಾಲಿನಲ್ಲಿ ಬೆಳೆ ಪರಿಹಾರದಲ್ಲಿ ಅವ್ಯವಾಹರದಲ್ಲಿ ಭಾಗಿದ ಎಲ್ಲಾ ಹಂತದ ಅಧಿಕಾರಗಳನ್ನು ಪರೀಶಿಲಿಸಿ ವರದಿ ಸಲ್ಲಿಸಿ ಎಂದು ಶಾಸಕ ಟಿ.ರಘುಮೂರ್ತಿ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೆöÊಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಯಿಸಿಕೊಂಡು ಮಾತನಾಡಿದ ಅವರು ತಾಲೂಕಿನಲ್ಲಿ ರೈತರ ಹಿತ ದೃಷ್ಠಿಯಿಂದ ಈ ಬಾರಿ ಬೆಳೆ ಪರಿಹಾರ ಎಲ್ಲಾ ಅರ್ಹ ರೈತರಿಗೆ ಸಿಗುವಂತಾಗಬೇಕು, ಇನ್ನೂ ಕಳೆದ ಬಾರಿ ಬೆಳೆ ಇಲ್ಲದೆ ಇರುವ ಹೊಲಗಳಿಗೆ ಪರಿಹಾರ ಹಾಕಿರುವುದು ಖಂಡನೀಯ ಇದು ತನಿಖೆಗೆ ಒಳಪಡಬೇಕು, ಎಂದರು.
ಇನ್ನೂ ಬರಗಾಲ ಪ್ರದೇಶವಾದ್ದರಿಂದ ರೈತರಿಗೆ ಹಾಗೂ ಜಾನುವಾರುಗಳಿಗೆ, ಗುಳೆ ಹೋಗುವವರಿಗೆ ಸ್ಥಳೀಯವಾಗಿ ಉದ್ಯೋಗ ನೀಡುವಂತಾಗಬೇಕು, ಇನ್ನೂ ಬರಗಾಲದ ಕಾಮಗಾರಿಯನ್ನು ಅಧಿಕಾರಿಗಳು ಜನರ ಬಳಿಗೆ ಕೊಂಡುಯ್ಯುಬೇಕು, ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ನಾಲ್ಕು ಗೋಶಾಲೆಗಳನ್ನು ತೆರಯಲು ಅತೀ ಶೀಘ್ರದಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ತಾಲೂಕಿನ ಚೋಳೂರು ಗೇಟ್ ಸಮೀಪ, ಕಸಬದಲ್ಲಿ ಅಜ್ಜನಗುಡಿ ಸಮೀಪ, ತಳಕು ಹೋಬಳಿಯ ದೊಡ್ಡ ಉಳ್ಳಾರ್ತಿಯಲ್ಲಿ, ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ಹಿರೆಕೆರೆ ಕಾವಲು, ಬೆಳಗಟ್ಟದಲ್ಲಿ ಗೋಶಾಲೆ ತೆರೆಯಬೇಕು, ಇದಕ್ಕೆ ಮೇವು, ನೆರಳು, ಹಾಗೂ ಕುಡಿಯುವ ನೀರು, ತೊಟ್ಟಿ, ಬೋರ್ವೆಲ್ ಈಗೇ ಮೂಲಭೂತ ಸೌಲಭ್ಯ ಅತೀ ಶೀಘ್ರದಲ್ಲಿ ಮಾಡಬೇಕು ಎಂದು ಇಓ.ಶಶಿಧರ್, ಹಾಗೂ ಪಶು ಇಲಾಖೆ ಡಾ.ರೇವಣ್ಣರವರಿಗೆ ಸೂಚಿಸಿದರು.
ಇನ್ನೂ ಸಿಡಿಪಿಓ ಹರಿಪ್ರಸಾದ್ ಸಭೆಗೆ ಮಾಹಿತಿ ನೀಡಿ ಸರಕಾರದ ಗ್ಯಾರಂಟಿ ಯೋಜನೆಯ ಗೃಹಲಕ್ಷಿö್ಮ ಯೋಜನೆಗೆ ತಾಲೂಕಿನಲ್ಲಿ ಸು.79651 ಅರ್ಜಿಗಳು ಸಲ್ಲಿಕೆಯಾಗಿವೆ ಅದರಲ್ಲಿ ಸುಮಾರು 77071 ಫಲಾನುಭವಿಗಳಿಗೆ ಈಗಾಗಲೇ ಯೋಜನೆಯ ಮೊತ್ತ ಜಮೆ ಮಾಡಲಾಗಿದೆ ಇಳಿದವರಿಗೆ ಇನ್ನೂ ಕೆಲವೆ ದಿನಗಳಲ್ಲಿ ಅವರ ಆಧಾರ್ ಬ್ಯಾಂಕ್ ಖಾತೆ ಲಿಂಕ್ ಮಾಡಿಸಿ ಶೇ.100 ರಷ್ಟು ಪ್ರಗತಿ ಸಾಧಿಸುತ್ತೆವೆ ಎಂದಾಗ ಶಾಸಕರು ಗ್ಯಾರಂಟಿ ಯೋಜನೆಯ ಸಮಿತಿ ಬರುವ ಮುನ್ನೆವೆ ಎಲ್ಲಾ ಅಧಿಕಾರಿಗಳು ನಿಮ್ಮವ್ಯಾಪ್ತಿಯ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸಿ ಎಂದರು.
ಇನ್ನೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿರು ಹುದ್ದೆಗೆ ರೋಷ್ಟರ್ ಮೂಲಕ ಆಯ್ಕೆ ಮಾಡಿ ಯಾರು ಹೇಳಿದರು ಕೇಳಬೇಡಿ ಸುಖ ಸುಮ್ಮನೆ ಶಿಪಾರಸ್ಸು ಮಾಡುತ್ತಾರೆ ಇದರಿಂದ ನಿಮ್ಮ ನೌಕರಿ ಕಳೆದುಕೊಳ್ಳಬೇಕು ಕಾನೂನಿನ್ವಯ ಮಾಡಿ ಹುದ್ದೆಗಳನ್ನು ಆಯ್ಕೆ ಮಾಡಿ ಎಂದು ಶಾಸಕರು ಕಿವಿಮಾತು ಹೇಳಿದರು.
ಹೊಸದುರ್ಗದ ಮಾದರಿಯಲ್ಲಿ ತೆಂಗಿನ ತೋಟಕ್ಕೆ ಪರಿಹಾರ ನೀಡುವುದು ನಮ್ಮ ಚಳ್ಳಕೆರೆಯಲ್ಲಿ ಪ್ಯಾಕೆಜ್ ಮಾಡಿಸಿ ಎಂದು ತೋಟಾಗಾರಿಕೆ ಅಧಿಕಾರಿ ವಿರುಪಾಕ್ಷಪ್ಪಗೆ ಸೂಚಿಸಿದರು. ತಾಲೂಕಿನಲ್ಲಿ ಸುಮಾರು ನಾಲ್ಕು ಜನ ರೈತರಿಗೆ ಅನ್ಯಯವಾಗುವುದು ಸಲ್ಲದು ಕಷ್ಟ ಪಟ್ಟು ತೆಂಗಿನ ತೋಟ ಮಾಡಿದ ರೈತರಿಗೆ ತೋಟ ನಷ್ಟವಾದರೆ ಪರಿಹಾರ ನೀಡುವುದು ಅಧಿಕಾರಿಗಳ ಹೌದಾರ್ಯ, ಸರಕಾರ ಯೋಜನೆಗಳನ್ನು ರೈತರಿಗೆ ತಲುಪಿಸಿ ಎಂದರು.
ಇದೇ ಸಂಧರ್ಭದಲ್ಲಿ ಆಡಳಿತ ಅಧಿಕಾರಿ ಮಂಜುನಾಥ್, ತಹಶೀಲ್ದಾರ್ ರೇಹಾನ್ ಪಾಷ, ತಾಪಂ.ಇಓ ಶಶಿಧರ್, ಸಿಡಿಪಿಓ ಹರಿಪ್ರಸಾದ್, ಬೆಸ್ಕಾಂ ಇಲಾಖೆ ರಾಜಣ್ಣ, ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ಶಿವರಾಜ್, ರೇಷ್ಮೆ ಇಲಾಖೆ ಮೋಹನ್ ಕುಮಾರ್, ಸಮಾಜ ಕಲ್ಯಾಣ ಅಧಿಕಾರಿ ಮಂಜುನಾಥ್, ಅರಣ್ಯ ಅಧಿಕಾರಿ ಬಹುಗುಣ, ಎಇಇ ಕಾವ್ಯ, ಬಿಸಿಎಂ ಅಧಿಕಾರಿ ದಿವಕಾರ್, ಪಶು ಇಲಾಖೆ ಡಾ.ರೇವಣ್ಣ, ಕೃಷಿ ಇಲಾಖೆ ಅಧಿಕಾರಿಗಳು, ಅಬಕಾರಿ ಇಲಾಖೆ ಸಿಬ್ಬಂದಿ ದೊಡ್ಡ ತಿಪ್ಪಯ್ಯ, ಅಕ್ಷರ ದಾಸೋಹ ತಿಪ್ಪೆಸ್ವಾಮಿ, ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಓ ಗಳು ಹಾಜರಿದ್ದರು.